ಪಾಕೆಟ್ ನಾವೆಲ್ ಪೋಸ್ಟರ್ 
ಸ್ಯಾಂಡಲ್‌ವುಡ್

ರಾಜ್ ಪಾಕೆಟ್‌ನಲ್ಲಿ ತಮಿಳು ಚಿತ್ರ : ವಿಜಯ್ ಸೇತುಪತಿ ಜತೆ ತೆರೆ ಹಂಚಿಕೊಳ್ಳಲಿರುವ ಕರುಣಾಕರ ಗುರೂಜಿ

‘ಸು ಫ್ರಮ್ ಸೋ’ ಹಿಟ್ ಬಳಿಕ ಬೇರೆ ಭಾಷೆಗಳಲ್ಲೂ ರಾಜ್ ಬೇಡಿಕೆ ಹೆಚ್ಚಿದ್ದು, ಬ್ಯಾಕ್ ಟು ಬ್ಯಾಕ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಅವರ ತಮಿಳಿನ ‘ಪಾಕೆಟ್ ನಾವೆಲ್’ ರಿಲೀಸ್‌ಗೆ ರೆಡಿಯಾಗಿದೆ. ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದ್ದು, 2027ರ ಜನವರಿ 14ರಂದು ತೆರೆಗೆ ಬರಲಿದೆ.

ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಕನ್ನಡದ ಜತೆಗೆ ಪರಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮಲಯಾಳಂನ ‘ಟರ್ಬೋ’ ಮೂಲಕ ಮೊದಲ ಬಾರಿಗೆ ಅವರು ಮಲಯಾಳಂನಲ್ಲಿ ನಟಿಸಿದ್ದರು. ಇನ್ನು ‘ಸು ಫ್ರಮ್ ಸೋ’ ಹಿಟ್ ಬಳಿಕ ಬೇರೆ ಭಾಷೆಗಳಲ್ಲೂ ರಾಜ್ ಬೇಡಿಕೆ ಹೆಚ್ಚಿದ್ದು, ಬ್ಯಾಕ್ ಟು ಬ್ಯಾಕ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಅವರ ತಮಿಳಿನ ‘ಪಾಕೆಟ್ ನಾವೆಲ್’ ರಿಲೀಸ್‌ಗೆ ರೆಡಿಯಾಗಿದೆ. ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದ್ದು, 2027ರ ಜನವರಿ 14ರಂದು ತೆರೆಗೆ ಬರಲಿದೆ. ನಿರ್ದೇಶಕ ‘ಅರಣ್ಯ ಕಾಂಡಂ’, ‘ಸೂಪರ್ ಡೀಲಕ್ಸ್’ ಖ್ಯಾತಿಯ ತ್ಯಾಗರಾಜನ್ ಕುಮಾರರಾಜಾ ಆ್ಯಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ವಿಜಯ್, ರಾಜ್ ಜತೆಗೆ ಇನ್ನೋರ್ವ ಸ್ಯಾಂಡಲ್‌ವುಡ್ ನಟ ಕಿಶೋರ್, ನಟಿ ಮಾಳವಿಕಾ ಮೋಹನನ್ ಅಭಿನಯಿಸಿದ್ದಾರೆ. ‘‘ಪಾಕೆಟ್ ನಾವೆಲ್’ ಚಿತ್ರತಂಡದ ಭಾಗವಾಗಲು ನನಗೆ ಹೆಮ್ಮೆಯಾಗುತ್ತಿದೆ. ತಿಂಗಳುಗಳ ಕಾಲ ಒಟ್ಟಿಗೆ ಊಟ ಮಾಡಿ, ಮಾತಾಡಿ, ಕಷ್ಟ-ಸುಖ ಹಂಚಿಕೊಂಡ ನಂತರ ಜತೆಗಿದ್ದ ಜನರು ಕೇವಲ ಸಹೋದ್ಯೋಗಿಗಳಾಗಿ ಉಳಿಯದೆ ನಮ್ಮ ಕುಟುಂಬದಂತಾಗುತ್ತಾರೆ’ ಎಂದು ನಟಿ ಮಾಳವಿಕಾ ಮೋಹನನ್ ಖುಷಿ ಹಂಚಿಕೊಂಡಿದ್ದಾರೆ. ಇನ್ನು ರಾಜ್ ಬಿ. ಶೆಟ್ಟಿ ‘ಕರಾವಳಿ’ ಬಳಿಕ ಕನ್ನಡದಲ್ಲಿ ಯಾವುದೇ ಸಿನಿಮಾ ೋಷಣೆ ಮಾಡಿಲ್ಲವಾದರೂ, ಸದ್ದಿಲ್ಲದೇ ಚಿತ್ರವೊಂದರ ಶೂಟಿಂಗ್ ನಡೆಸುತ್ತಿದ್ದಾರೆ. ಹಾಗೇ ತಮಿಳಿನ ‘ಸಿಯಾನ್’ ಚಿತ್ರದಲ್ಲಿ ನಟಿಸಿದ್ದು, ತೆರೆಗೆ ಬರಲು ಸಿದ್ಧವಾಗಿದೆ. -ಏಜೆನ್ಸೀಸ್