ವಿಜಯ್ ರಾಘವೇಂದ್ರ ನಾಯಕನಾಗಿದ್ದ "ರಾಘು' ಮತ್ತು ಅನಿರುದ್ಧ ಜತಕರ ಅಭಿನಯದ "ಶೆಫ್ ಚಿದಂಬರ' ಚಿತ್ರಗಳಿಗೆ ಆ್ಯಕ್ಷನ್&ಕಟ್ ಹೇಳಿದ್ದ ಆನಂದ್ ರಾಜ್ ಇದೀಗ ಹೊಸ ಕಥೆಯೊಂದಿಗೆ ವಾಪಸ್ಸಾಗಿದ್ದಾರೆ. ವಿಶೇಷ ಅಂದರೆ ಈ ಹೊಸ ಕಥೆಯ ಜತೆಗೆ ಹೊಸ ಸಾಹಸಕ್ಕೂ ಅವರು ಕೈಹಾಕಿದ್ದಾರೆ. ಹೌದು, ಆನಂದ್ ರಾಜ್ ತಮ್ಮದೇ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದು ತಾವು ನಿರ್ದೇಶಿಸುತ್ತಿರುವ ಮೂರನೇ ಚಿತ್ರವನ್ನು ತಾವೇ ನಿರ್ಮಿಸಲಿದ್ದಾರೆ. "ರಾಘು' ಚಿತ್ರದಲ್ಲಿ ಒಂದೇ ಪಾತ್ರವನ್ನಿಟ್ಟುಕೊಂಡು ಕ್ರೈಮ್ ಥ್ರಿಲ್ಲರ್ ಕಥೆ ಹೆಣೆದಿದ್ದ ಆನಂದ್, "ಶೆಫ್ ಚಿದಂಬರ'ದಲ್ಲಿ ಡಾರ್ಕ್ ಕಾಮಿಡಿ ಥ್ರಿಲ್ಲರ್ ಡ್ರಾಮಾ ಸ್ಟೋರಿ ಹೇಳಿದ್ದರು. ಆ ಬಳಿಕ ಬ್ರೋ ಗೌಡ ಖ್ಯಾತಿಯ ಶಮಂತ್ ಹಿರೇಮಠ್ ಜತೆ ಜಾಂಬಿ ಸಿನಿಮಾ ಘೋಷಣೆ ಮಾಡಿದರಾದರೂ, ಕಾರಣಾಂತರಗಳಿಂದ ಆ ಚಿತ್ರ ಸದ್ಯಕ್ಕೆ ತಡವಾಗಿದೆ. ಹೀಗಾಗಿಯೇ ಹೆಚ್ಚು ಸಮಯ ಪೋಲು ಮಾಡದೇ ಆನಂದ್ ಶಮಂತ್ ಜತೆಗೆ ಇನ್ನೊಂದು ಹಾರರ್ ಕಥೆ ಹೇಳಲು ರೆಡಿಯಾಗಿದ್ದಾರೆ.
"ಮನೆಯಲ್ಲಿ, ಮೈಮೇಲೆ ದೆವ್ವ ಇರುವುದು ಸಾಮಾನ್ಯ. ಆದರೆ, ಅದನ್ನೂ ಹೊರತುಪಡಿಸಿ ಏನು ಮಾಡಬಹುದು ಎಂಬ ಪ್ರಯತ್ನದಲ್ಲಿ ಹೊಳೆದ ಕಥೆಯಿದು. ಸ್ವಾತಂತ್ರ$್ಯಪೂರ್ವ ಅರ್ಥಾತ್ 1920ರ ದಶಕದಲ್ಲಿ ನಡೆಯುವ ಹಾರರ್ ್ಯಾಂಟಸಿ ಸ್ಟೋರಿ. ಇದುವರೆಗೆ ಶೇಕಡ 40ರಷ್ಟು ಚಿತ್ರೀಕರಣ ಮುಗಿದಿದೆ. ಸೈಕಲಾಜಿಕಲ್ ಮತ್ತು ಸೂಪರ್ನ್ಯಾಚುರಲ್ ಅಂಶಗಳೂ ಚಿತ್ರದಲ್ಲಿರಲಿವೆ' ಎಂದು ಮಾಹಿತಿ ನೀಡುತ್ತಾರೆ ಆನಂದ್ ರಾಜ್. ಚಿತ್ರಕ್ಕೆ ಶಮಂತ್ ಅವರೇ ನಾಯಕನಾಗಿದ್ದು, ಅವರಿಗೆ "ಕಂಗ್ರಾಜುಲೇಷನ್ಸ್ ಬ್ರದರ್' ನಟಿ ಅನುಷಾ ನಾಯಕಿಯಾಗಿದ್ದಾರೆ. ಮಂಡ್ಯ, ಬೆಂಗಳೂರು ಹೊರವಲಯ, ರಾಮೋಹಳ್ಳಿ, ಕಗ್ಗಲಿಪುರ, ಬನ್ನೇರುಟ್ಟದಲ್ಲಿ ಶೂಟಿಂಗ್ ನಡೆಸಲಾಗಿದೆ. ಉಳಿದಂತೆ ಈ ಚಿತ್ರದ ಮೂಲಕ "ನೇತಾಜಿ', "ವಿಚಿತ್ರಂ' ಖ್ಯಾತಿಯ ಸಂಗೀತ ನಿರ್ದೇಶಕ ಜುಬೈರ್ ಮೊಹಮ್ಮದ್ ಕನ್ನಡಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ನಾಗೇಂದ್ರ ಸಂಕಲನದಲ್ಲಿ ಸಿನಿಮಾ ಮೂಡಿಬರಲಿದೆ.
ಕನ್ನಡದಲ್ಲಿ ಹಾರರ್ ಕಾಮಿಡಿ ಚಿತ್ರಗಳು ಹೆಚ್ಚು ಬರುತ್ತಿವೆ. ಔಟ್ ಆ್ಯಂಡ್ ಔಟ್ ಹಾರರ್ ಸಿನಿಮಾ ಬರುತ್ತಿಲ್ಲ. ಹೀಗಾಗಿ ಸೀರಿಯಸ್ ಹಾರರ್ ಕಥೆ ಮಾಡಬೇಕು ಅಂತ ಪ್ಲಾ$್ಯನ್ ಮಾಡಿಯೇ ಈ ಕಥೆ ಬರೆದೆ. ಹಾಗಂತ ಹೆದರಿಸುವುದೊಂದೇ ನಮ್ಮ ಉದ್ದೇಶವಲ್ಲ, ಒಂದೊಳ್ಳೆ ಕಥೆಯೂ ಇದೆ. ಇದೇ ವರ್ಷದಂತ್ಯಕ್ಕೆ ಸಿನಿಮಾ ರಿಲೀಸ್ ಮಾಡಲಿದ್ದೇವೆ. - ಆನಂದ್ ರಾಜ್, ನಿರ್ದೇಶಕ