ಚೌಕಿದಾರ್ 
ಸ್ಯಾಂಡಲ್‌ವುಡ್

Chowkidar - ಇದೇ 30ಕ್ಕೆ ಪೃಥ್ವಿ, ಧನ್ಯಾ ನಟಿಸಿರುವ ಚೌಕಿದಾರ್​ ತೆರೆಗೆ

Chowkidar - "ರಥಾವರ' ಖ್ಯಾತಿಯ ಚಂದ್ರಶೇಖರ್​ ಬಂಡಿಯಪ್ಪ ನಿರ್ದೇಶಿಸಿರುವ "ದಿಯಾ' ಪೃಥ್ವಿ ಅಂಬಾರ್​ ಮತ್ತು "ಕಾಲಾಪತ್ಥರ್​' ಧನ್ಯಾ ರಾಮಕುಮಾರ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ "ಚೌಕಿದಾರ್​'. ಟೈಟಲ್​, ಟೀಸರ್​ ಮತ್ತು ಹಾಡಿನ ಮೂಲಕ ಚಿತ್ರ ಕುತೂಹಲ ಮೂಡಿಸಿದ್ದು, ಇತ್ತೀಚೆಗಷ್ಟೆ ನಟ ಧ್ರುವ ಸರ್ಜಾ "ಚೌಕಿದಾರ್​' ಬಿಡುಗಡೆ ದಿನಾಂಕ ಘೋಷಿಸಿ, ತಂಡಕ್ಕೆ ಶುಭಹಾರೈಸಿದ್ದಾರೆ. ಇದೇ ತಿಂಗಳ 30ರಂದು ಸಿನಿಮಾ ರಿಲೀಸ್​ ಮಾಡಲು ಚಂದ್ರಶೇಖರ್​ ಬಂಡಿಯಪ್ಪ ಮತ್ತು ತಂಡ ನಿರ್ಧರಿಸಿದೆ.
ಪೃಥ್ವಿ ಮತ್ತು ಧನ್ಯಾ ಜತೆಗೆ ಕೆಲ ದಿನಗಳ ಹಿಂದಷ್ಟೇ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಹಿರಿಯ ನಟ ಸಾಯಿಕುಮಾರ್​ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ "ಚೈತ್ರದ ಪ್ರೇಮಾಂಜಲಿ' ನಾಯಕಿ ಶ್ವೇತಾ ಮತ್ತು ಸುಧಾರಾಣಿ ಕೂಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಧರ್ಮ, ಗಿಲ್ಲಿ ನಟ ತಾರಾಗಣದಲ್ಲಿದ್ದಾರೆ. ವಿಎಸ್​ ಎಂಟರ್​ಟೇನ್ಮೆಂಟ್​ ಬ್ಯಾನರ್​ನಲ್ಲಿ ಕಲ್ಲಹಳ್ಳಿ ಚಂದ್ರಶೇಖರ್​ ಮತ್ತು ವಿದ್ಯಾದೇವಿ "ಚೌಕಿದಾರ್​'ಗೆ ಹಣ ಹೂಡಿದ್ದಾರೆ.
ಚಿತ್ರಕ್ಕೆ ಸಚಿನ್​ ಬಸ್ರೂರ್​ ಸಂಗೀತ, ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ಡಾ.ವಿ. ನಾಗೇಂದ್ರ ಪ್ರಸಾದ್​, ಪ್ರಮೋದ್​ ಮರವಂತೆ, ಸಂತೋಷ್​ ನಾಯಕ್​ ಸಾಹಿತ್ಯ, ಮುರಳಿ ಮಾಸ್ರ ನೃತ್ಯನಿರ್ದೇಶನ, ಜ್ಞಾನೇಶ್​ ಮಠದ್​ ಸಂಕಲನ ಮತ್ತು ಜೈ ಸುಬ್ರಹ್ಮಣ್ಯ ಸಾಹಸ ನಿರ್ದೇಶನವಿರಲಿದೆ. ಅಪ್ಪ-ಮಗನ ಬಾಂಧವ್ಯದ ಕಥೆಯಿರುವ "ಚೌಕಿದಾರ್​' ಈಗಾಗಲೇ ಸೆನ್ಸಾರ್​ ಪಾಸ್​ ಆಗಿದ್ದು, "ಯು/ಎ' ಪ್ರಮಾಣಪತ್ರ ದೊರೆತಿದೆ.