Pramod Panju - "ಇದುವರೆಗೆ ನಟನಾಗಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದೇನೆ. ಆದರೆ, "ಹಲ್ಕಾ ಡಾನ್' ಚಿತ್ರದಿಂದ ನಾನು ಸ್ಟಾರ್ ಆಗಲಿದ್ದೇನೆ. ಏಕೆಂದರೆ ಈ ಸಿನಿಮಾ ನನ್ನ ಸ್ಟಾರ್ ಬದಲಿಸಲಿದೆ' ಎಂದು ಭರವಸೆಯಿಂದ ಹೇಳಿಕೊಳ್ಳುತ್ತಾರೆ ನಟ ಪ್ರಮೋದ್ ಪಂಜು. ಶನಿವಾರ (ಜ. 10) ಅವರು 36ನೇ ವಸಂತಕ್ಕೆ ಕಾಲಿಡುತ್ತಿದ್ದು ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಶುಭಹಾರೈಸಿದೆ. ಹುಲಿ ಕುಣಿತ ವೇಷಧಾರಿಗಳ ನಡುವೆ ರಾಯಲ್ ಎನ್ಫೀಲ್ಡ್ ಕಾಂಟಿನೆಂಟಲ್ ಬೈಕ್ ಮುಂದೆ ಸ್ಟೈಲಿಶ್ಆಗಿ ನಿಂತಿರುವ ಲುಕ್ನಲ್ಲಿ ಪ್ರಮೋದ್ ಮಿಂಚಿದ್ದಾರೆ. ಚಲ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರವನ್ನು ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಪ್ರಮೋದ್ಗೆ ಅಮೃತಾ ಅಯ್ಯಂಗಾರ್ ನಾಯಕಿಯಾಗಿದ್ದು, ಸಾಯಿಕುಮಾರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
"ಹಲ್ಕಾ ಡಾನ್' ಬಗ್ಗೆ ಪ್ರಮೋದ್, "ಸಿನಿಮಾ ಚೆನ್ನಾಗಿ ಮೂಡಿಬರುತ್ತಿದೆ. ಮೊದಲ ಹಂತದ ಶೂಟಿಂಗ್ ಪೂರ್ಣಗೊಂಡ ಬಳಿಕ ಇದೀಗ ಬೆಂಗಳೂರಿನಲ್ಲೇ ಎರಡನೇ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದೆ. ಮೂರನೇ ಹಂತದ ಚಿತ್ರೀಕರಣಕ್ಕೆ ಮಂಗಳೂರಿಗೆ ತೆರಳಲಿದ್ದೇವೆ. 1980ರ ದಶಕದ ಕಥೆಯಿದು. ನಾನು ಎರಡು ಲುಕ್ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈ ಸಿನಿಮಾ ಬಳಿಕ ಜನರಿಗೆ ಇನ್ನಷ್ಟು ಹತ್ತಿರವಾಗುವ ಭರವಸೆಯಿದೆ' ಎಂದು ಖುಷಿಯಿಂದ ಹೇಳೀಕೊಳ್ಳುತ್ತಾರೆ.
ಲೆನಿನ್ ಗೆಳೆಯ!
"ಹಲ್ಕಾ ಡಾನ್' ಜತೆಜತೆಗೆ ಪ್ರಮೋದ್ ತೆಲುಗಿನಲ್ಲಿ ಅಖಿಲ್ ಅಕ್ಕಿನೇನಿ ನಾಯಕನಾಗಿರುವ, ಅವರ ತಂದೆ ನಾಗಾರ್ಜುನ ನಿರ್ಮಿಸುತ್ತಿರುವ "ಲೆನಿನ್' ಚಿತ್ರದಲ್ಲೂ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. "ಶುಕ್ರವಾರದಂದೇ "ಲೆನಿನ್' ಶೂಟಿಂಗ್ಗೆ ತೆರಳಲಿದ್ದೇನೆ. ನಂತರ ಇದೇ 17ರಂದು "ಹಲ್ಕಾ ಡಾನ್' ಶೂಟಿಂಗ್ ಸೇರಿಕೊಳ್ಳಲಿದ್ದೇನೆ. ಬಳಿಕ ಫೆ. 5ರಿಂದ 20ರವರೆಗೆ "ಲೆನಿನ್' ಕ್ಲೆಮ್ಯಾಕ್ಸ್ ಚಿತ್ರೀಕರಣ ನಡೆಯಲಿದೆ. ಆ ಬಳಿಕ "ಹಲ್ಕಾ ಡಾನ್'ನ ಇನ್ನೊಂದು ಲುಕ್ಗಾಗಿ ತೂಕ ಹೆಚ್ಚಿಸಿಕೊಳ್ಳಬೇಕಿದೆ. "ಲೆನಿನ್' ಮೇ 1ರಂದು ತೆರೆಗೆ ಬರಲಿದೆ. ಆ ನಂತರ "ಹಲ್ಕಾ ಡಾನ್' ಎಂದು ಮಾಹಿತಿ ನೀಡುತ್ತಾರೆ.
"ಹಲ್ಕಾ ಡಾನ್' ಬಳಿಕ ಕನ್ನಡದಲ್ಲಿ ಹಾಗೂ "ಲೆನಿನ್' ಬಳಿಕ ಪರಭಾಷೆಗಳಲ್ಲಿ ಅವಕಾಶಗಳು ಹೆಚ್ಚುವ ನಿರೀೆ ಪ್ರಮೋದ್ ಅವರದು. ಹೀಗಾಗಿಯೇ "ಮೂರ್ನಾಲ್ಕು ಕಥೆಗಳನ್ನು ಕೇಳಿದ್ದರೂ, ಈ ಎರಡು ಚಿತ್ರಗಳ ರಿಲೀಸ್ಗೆ ಕಾಯುತ್ತಿದ್ದೇನೆ. ಆ ಬಳಿಕ ಜನ ನನ್ನನ್ನು ಹೇಗೆ ಸ್ವೀಕರಿಸುತ್ತಾರೆ? ನನ್ನಿಂದ ಏನು ನಿರೀಸುತ್ತಾರೆ? ಎಂಬುದು ಸ್ಪಷ್ಟವಾಗಿ, ನನಗೂ ಮುಂದಿನ ಆಯ್ಕೆ ಮಾಡಿಕೊಳ್ಳಲು ಐಡಿಯಾ ಸಿಗುತ್ತದೆ' ಎನ್ನುತ್ತಾರೆ ಪ್ರಮೋದ್.