ಪ್ರಜ್ವಲ್ ದೇವರಾಜ್ 
ಸ್ಯಾಂಡಲ್‌ವುಡ್

Prajwal Devaraj - ಸುಡುಗಾಡು ಸಿದ್ಧನಾದ ಪ್ರಜ್ವಲ್​ ದೇವರಾಜ್​

Prajwal Devaraj - "ಬಿಗ್​ಬಾಸ್​ ಕನ್ನಡ ಸೀಸನ್​ 10'ರಲ್ಲಿ ವಿಜೇತರಾಗಿದ್ದ ನಟ ಕಾರ್ತಿಕ್​ ಮಹೇಶ್​ ನಾಯಕನಾಗಿ ನಟಿಸುತ್ತಿರುವ, "ಜಟ್ಟ', "ಮೈತ್ರಿ' ಚಿತ್ರಗಳ ಖ್ಯಾತಿಯ ರಾಜ್ಯಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಂ. ಗಿರಿರಾಜ್​ ನಿರ್ದೇಶಿಸುತ್ತಿರುವ ಹಾಗೂ "ರಾಜಾಹುಲಿ' ನಿರ್ದೇಶಕ ಗುರು ದೇಶಪಾಂಡೆ ನಿರ್ಮಿಸುತ್ತಿರುವ ಸಿನಿಮಾ "ರಾಮರಸ'. ಈಗಾಗಲೇ ಟೈಟಲ್​ ಮತ್ತು ಫಸ್ಟ್​ ಲುಕ್​ ಮೂಲಕವೇ ಕುತೂಹಲ ಮೂಡಿಸಿರುವ ಈ ಮಿಥಿಕಲ್​ ಫ್ಯಾಂಟಸಿ ಡ್ರಾಮಾದಲ್ಲಿ ಕಾರ್ತಿಕ್​ ಮಹೇಶ್​ ಜತೆ ನಟ ಶರಣ್​, ಹೆಬಾ ಪಟೇಲ್​, ಬಾಲಾಜಿ ಮನೋಹರ್​, ವೈಶಾಲಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದೀಗ ಚಿತ್ರತಂಡವನ್ನು ನಟ ಪ್ರಜ್ವಲ್​ ದೇವರಾಜ್​ ಕೂಡ ಸೇರಿಕೊಂಡಿದ್ದಾರೆ. ಅವರಿಲ್ಲಿ ಇದೇ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಕರ್ನಾಟಕದ ಅಲೆಮಾರಿ ಪರಂಪರೆಯಾದ "ಸುಡುಗಾಡು ಸಿದ್ಧ' ಸಮುದಾಯದ ಹಿನ್ನೆಲೆಯ "ಗುರು ಸಿದ್ಧ' ಎಂಬ ಪಾತ್ರದಲ್ಲಿ ಪ್ರಜ್ವಲ್​ ನಟಿಸುತ್ತಿದ್ದು, ಗುರುವಾರ ಚಿತ್ರತಂಡ ಅವರ ಫಸ್ಟ್​ ಲುಕ್​ ಬಿಡುಗಡೆ ಮಾಡಲಿದೆ. "ರಾಮರಸ'ದ ಪ್ರಜ್ವಲ್​ ದೇವರಾಜ್​ ಪಾತ್ರದ ಬಗ್ಗೆ ಗುರು ದೇಶಪಾಂಡೆ, ""ಗುರು ಸಿದ್ಧ ಪಾತ್ರವು ಕರ್ನಾಟಕದ ಸ್ಮಶಾನ ನಿವಾಸಿಗಳು ಅಥವಾ ಪವಾಡ ಪುರುಷರು ಎಂದೇ ಕರೆಯಲ್ಪಡುವ ಸುಡುಗಾಡು ಸಿದ್ಧರು, ಈಶ್ವರನ ಪರಮ ಭಕ್ತರು. ಅಂತಹ ಒಂದು ವಿಶೇಷ ಪಾತ್ರದಲ್ಲಿ ವಿಭಿನ್ನ ಲುಕ್​ನಲ್ಲಿ ಪ್ರಜ್ವಲ್​ ದೇವರಾಜ್​ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು ಪೋಸ್ಟ್​-ಪ್ರೊಡಕ್ಷನ್​ ನಡೆಯುತ್ತಿದೆ' ಎಂದು ಮಾಹಿತಿ ನೀಡುತ್ತಾರೆ. ಉಳಿದಂತೆ ಚಿತ್ರಕ್ಕೆ ಎ.ವಿ. ಕೃಷ್ಣಕುಮಾರ್​ ಛಾಯಾಗ್ರಹಣ, ಭರತ್​ ಬಿಜೆ ಸಂಗೀತ, "ಕಾಂತಾರ' ಖ್ಯಾತಿಯ ಅರ್ಜುನ್​ ರಾಜ್​ ಸಾಹಸ ಮತ್ತು ಅರ್ಜುನ್​ ಕಿಟ್ಟು ಸಂಕಲನವಿರಲಿದೆ.
ಕೋಟ್​:
ಸಿದ್ಧರು ಹಳ್ಳಿ-ಹಳ್ಳಿಗೆ ಸಂಚಾರ ಮಾಡುತ್ತಾ, ಭವಿಷ್ಯ ನುಡಿಯುತ್ತಾ, ಮಾಯಾಜಾಲ, ಜನರಿಗೆ ನಗು ಹಂಚುತ್ತಾ, ಅಪರೂಪದ ಗಿಡಮೂಲಿಕೆಗಳ ಮೂಲಕ ಚಿಕಿತ್ಸೆ ನೀಡುವ ನಿಸ್ಸೀಮರು. ಹಳ್ಳಿಗಳನ್ನು ದುಷ್ಟ ಶಕ್ತಿಗಳಿಂದ ರಸುವ ಈ ಸಮುದಾಯದ ಸಂಸತಿಯನ್ನು "ರಾಮರಸ' ಚಿತ್ರದಲ್ಲಿ ಪ್ರಜ್ವಲ್​ ದೇವರಾಜ್​ ಅವರ ಪಾತ್ರದ ಮೂಲಕ ತೆರೆಯ ಮೇಲೆ ಅದ್ಧೂರಿಯಾಗಿ ತರಲಾಗುತ್ತಿದೆ. - ಗುರು ದೇಶಪಾಂಡೆ, ನಿರ್ಮಾಪಕ.