- ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ
- ಪ್ರಧಾನಿ ನರೇಂದ್ರ ಮೋದಿ ವಿಶೇಷ ಅಭಿನಂದನಾ ಪತ್ರವನ್ನು ಕಳುಹಿಸುವ ಮೂಲಕ ಗಮನ ಸೆಳೆದಿದ್ದಾರೆ
- ವಿಜಯ್ ಮತ್ತು ರಶ್ಮಿಕಾ ವಿವಾಹಕ್ಕೆ ನಿಮ್ಮಿಂದ ಆಹ್ವಾನ ಬಂದಿರುವುದು ನಿಜಕ್ಕೂ ಸಂತೋಷ ತಂದಿದೆ
- ಈ ಶುಭ ಘಳಿಗೆಯಲ್ಲಿ ಇಬ್ಬರ ಕುಟುಂಬಗಳಿಗೂ ಹೃತ್ಪೂರ್ವಕ ಅಭಿನಂದನೆ ತಿಳಿಸಿದ ಮೋದಿ
ನವದೆಹಲಿ: ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ವಿಶೇಷ ಅಭಿನಂದನಾ ಪತ್ರವನ್ನು ಕಳುಹಿಸುವ ಮೂಲಕ ಗಮನ ಸೆಳೆದಿದ್ದಾರೆ.
ಪತ್ರದಲ್ಲಿ ಏನಿದೆ?
ಫೆಬ್ರವರಿ 26 ರಂದು ನಡೆಯಲಿರುವ ವಿಜಯ್ ಮತ್ತು ರಶ್ಮಿಕಾ ವಿವಾಹಕ್ಕೆ ನಿಮ್ಮಿಂದ ಆಹ್ವಾನ ಬಂದಿರುವುದು ನಿಜಕ್ಕೂ ಸಂತೋಷ ತಂದಿದೆ. ಈ ಶುಭ ಘಳಿಗೆಯಲ್ಲಿ ಇಬ್ಬರ ಕುಟುಂಬಗಳಿಗೂ ಹೃತ್ಪೂರ್ವಕ ಅಭಿನಂದನೆಗಳು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ವಿವಾಹವು ವಿಜಯ್ ಮತ್ತು ರಶ್ಮಿಕಾ ಅವರ ಜೀವನದಲ್ಲಿ ಹೊಸ ಅಧ್ಯಾಯನದ ಆರಂಭವನ್ನು ಸೂಚಿಸುತ್ತದೆ. ಏಳು ಹೆಜ್ಜೆಗಳನ್ನು ಇಡುವ ಮೂಲಕ ದಂಪತಿ ಜೀವನ ಪರ್ಯಂತ ಸ್ನೇಹಿತರಾಗಿ ಬದುಕನ್ನು ಹಂಚಿಕೊಳ್ಳಿ. ಇಬ್ಬರೂ ತಮ್ಮ ಚಲನಚಿತ್ರಗಳ ಚಿತ್ರಕಥೆಗಳಿಗೆ ಹೊಸಬರೇನಲ್ಲ. ಆದರೆ ಪ್ರೀತಿ ಮತ್ತು ವಾತ್ಸಲ್ಯದಿಂದ ತುಂಬಿರುವ ಅವರ ನಿಜ ಜೀವನದ ಅಧ್ಯಾಯನವು ಬೆಳ್ಳಿ ಪರದೆಯ ಮೇಲೆ ಸೃಷ್ಟಿಸಿದ ತಂತ್ರವನ್ನೂ ಮೀರಿಸುತ್ತದೆ ಎಂದಿದ್ದಾರೆ.
ಮುಂಬರುವ ದಿನಗಳು, ತಿಂಗಳುಗಳು ಮತ್ತು ವರ್ಷಗಳು ಹಂಚಿಕೊಂಡ ಕನಸುಗಳು ಮತ್ತು ಅವುಗಳ ಈಡೇರಿಕೆಯಿಂದ ತುಂಬಿರಲಿ. ಪರಸ್ಪರ ಪ್ರೀತಿಯಿಂದ ಜವಬ್ದಾರಿಗಳನ್ನು ಹಂಚಿಕೊಂಡು, ಇಬ್ಬರೂ ಜೀವನಪರ್ಯಂತ ಉತ್ತಮ ಸ್ನೇಹಿತರಾಗಿ ಬಾಳಲಿ ಎಂದು ಪ್ರಧಾನಿ ಮೋದಿ ಪತ್ರದಲ್ಲಿ ಆಶೀರ್ವದಿಸಿದ್ದಾರೆ.
ವರದಿಗಳ ಪ್ರಕಾರ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹವು ಉದಯಪುರದ ಐಟಿಸಿ ಹೋಟೆಲ್ಸ್ ಮೆಮೆಂಟೋಸ್‌ನಲ್ಲಿ ನಡೆಯಲಿದೆ. ಈಗಾಗಲೇ ವಿವಾಹ ಪೂರ್ವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿದ್ದು, ಸಂಗೀತ ಕಾರ್ಯಕ್ರಮದ 12 ಸೆಕೆಂಡ್ನ ವಿಡಿಯೋ ವೈರಲ್ ಆಗಿದೆ.
ಈ ಜೋಡಿಯ ಎವರ್ ಗ್ರೀನ್ ಹಾಡಾದ 'ಯೇಂಟಿ ಯೇಂಟಿ' ಅನ್ನು ಸಂಗೀತ ಸಮಾರಂಭದಲ್ಲಿ ಮರುಸೃಷ್ಟಿಸಲಿದ್ದಾರೆ. ವೈರಲ್ ಆದ 12 ಸೆಕೆಂಡ್ಗಳ ಅಸ್ಪಷ್ಟ ವಿಡಿಯೋದಲ್ಲಿ, ಸಮಾರಂಭ ನಡೆಯುವ ಸ್ಥಳವನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗಿದೆ. ವಿಶೇಷವೆಂದರೆ, ಇಡೀ ಸ್ಥಳವನ್ನು ದಂಪತಿಯ ಹಲವಾರು ಅಪರೂಪದ ಛಾಯಾಚಿತ್ರಗಳಿಂದ ರಚಿಸಿದ್ದಾರೆ.
ಇದು ಅವರಿಬ್ಬರ ಭೇಟಿಯಿಂದ ಪ್ರಾರಂಭವಾಗಿ ತೆರೆಯ ಮೇಲೆ 'ಗೀತಾ ಗೋವಿಂದಂ' ಆಗಿ ಮಿಂಚಿದ ಕ್ಷಣಗಳು ಮತ್ತು ಇತ್ತೀಚಿನ ಖಾಸಗಿ ಪ್ರವಾಸಗಳ ಫೋಟೋಗಳನ್ನು ಫ್ರೇಮ್‌ಗಳಲ್ಲಿ ಜೋಡಿಸಲಾಗಿದೆ. ಪ್ರತಿಯೊಂದು ಫೋಟೋಗಳೂ ಕೂಡ ಅವರಿಬ್ಬರ ಪ್ರೀತಿಯನ್ನು ವಿವರಿಸುತ್ತಿದೆ ಎಂದು ಅಲ್ಲಿರುವ ಅತಿಥಿಗಳು ಅಭಿಪ್ರಾಯ ಪಟ್ಟಿದ್ದಾರೆ (ಏಜೆನ್ಸೀಸ್).