ಯಶ್ ನಟನೆಯ ಟಾಕ್ಸಿಕ್ ಚಿತ್ರದಲ್ಲಿ ಹಾಟ್ ಅವತಾರವೆತ್ತಿದ ನಯನತಾರ!
- ತುಂಬಾ ವರ್ಷಗಳ ಬಳಿಕ ಮತ್ತೆ ಹಾಟ್ ಅವತಾರ ತಾಳಿದ ಲೇಡಿ ಸೂಪರ್ಸ್ಟಾರ್
- ಮತ್ತೊಮ್ಮೆ ಕಮರ್ಷಿಯಲ್ ಸಿನಿಮಾಗಳತ್ತ ಮುಖ ಮಾಡಿದ ನಯನತಾರಾ
- ಟಾಕ್ಸಿಕ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ನಲ್ಲಿ ಮಿಂಚಿದ ಸೌತ್ ಬ್ಯೂಟಿ
ನಯನತಾರಾ: ಲೇಡಿ ಸೂಪರ್ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಯನತಾರಾ ( Nayanthara ), ಕಳೆದ ಕೆಲವು ವರ್ಷಗಳಿಂದ ಕಮರ್ಷಿಯಲ್ ಸಿನಿಮಾಗಳನ್ನು ಬದಿಗಿಟ್ಟು ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಇದೀಗ ಮತ್ತೊಮ್ಮೆ ಕಮರ್ಷಿಯಲ್ ಸಿನಿಮಾಗಳತ್ತ ಮುಖ ಮಾಡಿರುವಂತೆ ಕಾಣುತ್ತಿದೆ. ಒಂದು ಕಾಲದಲ್ಲಿ, ನಯನತಾರಾ ಅವರು ಸಖತ್ ಹಾಟ್ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ತುಂಬಾ ವರ್ಷಗಳ ಬಳಿಕ ಅದೇ ಲುಕ್ನಲ್ಲಿ ಮತ್ತೊಮ್ಮೆ ಬೆಳ್ಳಿ ಪರದೆಯ ಮೇಲೆ ರಂಜಿಸಲು ಬರುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದಲ್ಲಿ ನಯನತಾರಾ ನಟಿಸಿದ್ದಾರೆ ಎಂಬ ಸುದ್ದಿ ತುಂಬಾ ದಿನಗಳಿಂದ ಹರಿದಾಡುತ್ತಿತ್ತು. ಇದೀಗ ನಯನತಾರಾ ಅವರ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಟಾಕ್ಸಿಕ್ ಸಿನಿಮಾದಲ್ಲಿ ಲೇಡಿ ಸೂಪರ್ಸ್ಟಾರ್ ಇರುವುದು ಖಚಿತವಾಗಿದೆ. ಇದರಿಂದ ಟಾಕ್ಸಿಕ್ ಸಿನಿಮಾ ಮೇಲಿನ ನಿರೀಕ್ಷೆ ಗರಿಗೆದರಿದೆ.
ಇಂದು ಬಿಡುಗಡೆಯಾಗಿರುವ ಫಸ್ಟ್ ಲುಕ್ನಲ್ಲಿ ನಯನತಾರಾ ಅವರು ಮಾಡರ್ನ್ ಡ್ರೆಡ್ನಲ್ಲಿ ತುಂಬಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಫಸ್ಟ್ ಲುಕ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ತುಂಬಾ ವರ್ಷಗಳ ಬಳಿಕ ನಯನತಾರಾ ಅವರನ್ನು ಹಳೇ ಗೆಟಪ್ನಲ್ಲಿ ನೋಡಿದ ಸಿನಿರಸಿಕರು ಲೇಡಿ ಸೂಪರ್ಸ್ಟಾರ್ ಇಸ್ ಬ್ಯಾಕ್ ಎಂದು ಹೊಗಳುತ್ತಿದ್ದಾರೆ.
ಅಂದಹಾಗೆ, ಕೆಜಿಎಫ್ ಸರಣಿಯ ಯಶಸ್ಸಿನ ಬಳಿಕ ಕನ್ನಡದ ಸ್ಟಾರ್ ನಟ ಯಶ್, ಟಾಕ್ಸಿಕ್ ಚಿತ್ರದಲ್ಲಿ ನಟಿಸಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಈ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ಧೂರಿಯಾಗಿ ತಯಾರಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದರೆ, ನಯನತಾರಾ ಗಂಗಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಫಸ್ಟ್ ಲುಕ್ ಪೋಸ್ಟ್ನಲ್ಲಿ ಘೋಷಿಸಲಾಗಿದೆ.
ಅಂದಹಾಗೆ, ಟಾಕ್ಸಿಕ್ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ. ಅದೇ ದಿನ ಈ ವರ್ಷದ ಕೊನೆಯ ಸೂಪರ್ ಹಿಟ್ ಸಿನಿಮಾ ಧುರಂಧರ್ 2 ಕೂಡ ಬಿಡುಗಡೆಯಾಗಲಿದ್ದು, ಬಾಕ್ಸ್ಆಫೀಸ್ನಲ್ಲಿ ಎರಡು ಬಿಗ್ ಬಜೆಟ್ ಸಿನಿಮಾಗಳ ಯುದ್ಧ ನಡೆಯಲಿದೆ. ಈ ಎರಡು ಸಿನಿಮಾಗಳಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದನ್ನು ನಾವು ಕಾದು ನೋಡಬೇಕಿದೆ, (ಏಜೆನ್ಸೀಸ್).