ಹೀಗಿದ್ದ ಲವ್ ಮಾಕ್ಟೇಲ್ "ರೋಸ್" ಈಗ ಹೇಗಾಗಿದ್ದಾರೆ ನೋಡಿ: ಯಾವ ಹೀರೋಯಿನ್ಗೂ ಕಮ್ಮಿ ಇಲ್ಲ... Love Mocktail
- 2020ರಲ್ಲಿ ಶುರುವಾದ ಲವ್ ಮಾಕ್ಟೇಲ್ ಸಿನಿಮಾ ಜರ್ನಿ ಇಂದು ಮೂರನೇ ಭಾಗದ ಬಿಡುಗಡೆಯೊಂದಿಗೆ ಯಶಸ್ವಿ
- ಲವ್ ಮಾಕ್ಟೇಲ್ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದ ಡಾರ್ಲಿಂಗ್ ಕೃಷ್ಣ ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು
- ಯುಗಾದಿ (ಮಾರ್ಚ್ 19) ಹಬ್ಬದಂದು 3ನೇ ಭಾಗ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
Love Mocktail : ಲವ್ ಮಾಕ್ಟೇಲ್ ಸಿನಿಮಾ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. 2020ರಲ್ಲಿ ಶುರುವಾದ ಲವ್ ಮಾಕ್ಟೇಲ್ ಸಿನಿಮಾ ಜರ್ನಿ ಇಂದು ಮೂರನೇ ಭಾಗದ ಬಿಡುಗಡೆಯೊಂದಿಗೆ ಚಂದನವನದಲ್ಲಿ ತನ್ನದೇಯಾದ ವಿಶೇಷ ಮುದ್ರೆ ಒತ್ತಿದೆ. ಲವ್ ಮಾಕ್ಟೇಲ್ ಸಿನಿಮಾ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದ ಡಾರ್ಲಿಂಗ್ ಕೃಷ್ಣ, ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಪಡೆದರು. ಈ ಸಿನಿಮಾ ತೆಲುಗಿಗೂ ರಿಮೇಕ್ ಆಯಿತು. ಇದೇ ಯಶಸ್ಸಿನೊಂದಿಗೆ 2022ರಲ್ಲಿ ತೆರೆಕಂಡ ಎರಡನೇ ಭಾಗವು ಕೂಡ ಸದ್ದು ಮಾಡಿತು. ಇದೀಗ ಯುಗಾದಿ (ಮಾರ್ಚ್ 19) ಹಬ್ಬದಂದು 3ನೇ ಭಾಗ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
ಅಂದಹಾಗೆ, ಇತ್ತೀಚೆಗೆ ನಡೆದ ಲವ್ ಮಾಕ್ಟೇಲ್ 3 ಸಿನಿಮಾದ ಪ್ರೀಮಿಯರ್ ಶೋ ವೇಳೆ ಓರ್ವ ವ್ಯಕ್ತಿ ವಿಶೇಷ ಗಮನ ಸೆಳೆದರು. ಆ ವ್ಯಕ್ತಿ ಯಾರೆಂದರೆ ಲವ್ ಮಾಕ್ಟೇಲ್ 1 ಸಿನಿಮಾದಲ್ಲಿ ರೋಸ್ ಪಾತ್ರಧಾರಿಯಾಗಿ ಮಿಂಚಿದ್ದ ಹುಡುಗಿ. ಮೊದಲ ಭಾಗದಲ್ಲಿ ನಾಯಕ ಡಾರ್ಲಿಂಗ್ ಕೃಷ್ಣರ ಹೈಸ್ಕೂಲ್ ಲವ್. ಅಂದರೆ, ಟ್ಯೂಷನ್ ಹೇಳಿ ಕೊಡುವ ಜಾಗದಲ್ಲಿ ರೋಸ್ ಮೇಲೆ ನಾಯಕನಿಗೆ ಲವ್ ಆಗುತ್ತದೆ. ಈ ಲವ್ ಸ್ಟೋರಿ ಪ್ರೇಕ್ಷಕರ ಗಮನವನ್ನು ಸೆಳೆದಿತ್ತು.
ರೋಸ್ ಪಾತ್ರವನ್ನು ನೆನೆಸಿಕೊಂಡರೆ ಒಂದು ಡೈಲಾಗ್ ನೆನಪಾಗುತ್ತದೆ ಅದೇನೆಂದರೆ, ಹೂತರ ಇದ್ದಳು ಇದೀಗ ಹೂಕೋಸ್ ಆಗಿದ್ದಾಳೆ ಎಂಬ ಡೈಲಾಗ್. ಇದು ತುಂಬಾ ಜನಪ್ರಿಯತೆ ಪಡೆದುಕೊಂಡಿತು. ಇದೇ ರೋಸ್ ಪಾತ್ರಧಾರಿ ಸುಮಾರು 6 ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಂಡಿದ್ದಾರೆ. ಲವ್ ಮಾಕ್ಟೇಲ್ 3 ಸಿನಿಮಾದ ಪ್ರೀಮಿಯರ್ ಶೋ ವೇಳೆ ರೋಸ್ ಪಾತ್ರಧಾರಿ ಹುಡುಗಿ ಹಾಜರಾಗಿದ್ದಳು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ ನೋಡಿದವರು ಇವಳೇನಾ ಆ ರೋಸ್ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾದಲ್ಲಿ ಕಣ್ಣಿಗೆ ಕನ್ನಡಕ ಹಾಕಿಕೊಂಡು ಪುಟ್ಟು ಹುಡುಗಿಯಂತೆ ಕಾಣುತ್ತಿದ್ದ ರೋಸ್ ಇಂದು ಎಷ್ಟೊಂದು ಚೆನ್ನಾಗಿ ಕಾಣುತ್ತಿದ್ದಾಳೆ ನೋಡಿ ಎಂದು ವಿಡಿಯೋ ನೋಡಿದವರು ಹುಬ್ಬೇರಿಸುತ್ತಿದ್ದಾರೆ. ರೋಸ್ ನಿಜವಾಗಿಯೂ ಈಗ ರೋಸ್ ರೀತಿ ಇದಾರೆ. ನಾಯಕಿಯಾಗುವ ಎಲ್ಲ ಲಕ್ಷಣಗಳು ಇವೆ ಎಂದು ವೈರಲ್ ವಿಡಿಯೋಗೆ ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.
ಅಂದಹಾಗೆ, 2020ರಲ್ಲಿ ಬಿಡುಗಡೆಯಾದ ಲವ್ ಮಾಕ್ಟೇಲ್ ಸಿನಿಮಾ ಸಾಕಷ್ಟು ಹೆಸರು ಮಾಡಿತು. ಇದೇ ಯಶಸ್ಸಿನ ಅಡಿಯಲ್ಲಿ 2022ರಲ್ಲಿ ಲವ್ ಮಾಕ್ಟೇಲ್ 2 ಸಿನಿಮಾ ಬಿಡುಗಡೆಯಾಯಿತು. ಇದು ಹೇಳಿಕೊಳ್ಳುವಷ್ಟು ಹಿಟ್ ಆಗದಿದ್ದರೂ ಸಾಧಾರಣ ಗೆಲುವು ಸಾಧಿಸಿತು. ಇದೀಗ ಲವ್ ಮಾಕ್ಟೇಲ್ 3 ಬಿಡುಗಡೆಯಾಗಿದೆ. ಸಿನಿಮಾದಲ್ಲಿ ತಂದೆ-ಮಗಳ ಭಾವುಕ ಪಯಣಕ್ಕೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡುತ್ತಿದೆ.