ಲಂಬೋದರ ಚಿತ್ರತಂಡ 
ಸ್ಯಾಂಡಲ್‌ವುಡ್

ಲಂಬೋದರನ ಗ್ರ್ಯಾಂಡ್ ರೆಡ್ ಕಾರ್ಪೆಟ್ : ಸಿನಿ ಗಣ್ಯರು, ಜಾಗತಿಕ ಉದ್ಯಮಿಗಳಿಂದ ಸಿನಿಮಾ ವೀಕ್ಷಣೆ, ಮೆಚ್ಚುಗೆ

ಸೈ-ಫೈ ಜಾನರ್‌ನ ‘ಲಂಬೋದರ 2.0’ ಚಿತ್ರವು ಇದೇ 13ರಂದು ಕನ್ನಡ ಮತ್ತು ಹಿಂದಿಯಲ್ಲಿ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದ ವಿಭಿನ್ನ ಕಥೆ, ಕಲಾವಿದರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಇತ್ತೀಚೆಗೆ ಚಿತ್ರತಂಡವು ಗಣ್ಯರಿಗಾಗಿ ವಿಶೇಷ ಪ್ರದರ್ಶನ ಆಯೋಜಿಸಿತ್ತು. ಅದಕ್ಕಾಗಿ ಖಾಸಗಿ ಮಾಲ್‌ನಲ್ಲಿ ರೆಡ್ ಕಾರ್ಪೆಟ್ ನಿರ್ಮಿಸಿ ಚಿತ್ರತಂಡ ಗಮನಸೆಳೆಯಿತು.

ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದ, ಯುವ ಉದ್ಯಮಿ ಅನಿಲ್ ಶೆಟ್ಟಿ ನಿರ್ಮಿಸಿ, ನಾಯಕನಟನಾಗಿ ಅಭಿನಯಿಸಿರುವ ಸೈ-ಫೈ ಜಾನರ್‌ನ ‘ಲಂಬೋದರ 2.0’ ಚಿತ್ರವು ಇದೇ 13ರಂದು ಕನ್ನಡ ಮತ್ತು ಹಿಂದಿಯಲ್ಲಿ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದ ವಿಭಿನ್ನ ಕಥೆ, ಕಲಾವಿದರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಇತ್ತೀಚೆಗೆ ಚಿತ್ರತಂಡವು ಗಣ್ಯರಿಗಾಗಿ ವಿಶೇಷ ಪ್ರದರ್ಶನ ಆಯೋಜಿಸಿತ್ತು. ಅದಕ್ಕಾಗಿ ಖಾಸಗಿ ಮಾಲ್‌ನಲ್ಲಿ ರೆಡ್ ಕಾರ್ಪೆಟ್ ನಿರ್ಮಿಸಿ ಚಿತ್ರತಂಡ ಗಮನಸೆಳೆಯಿತು. ಚಿತ್ರದಲ್ಲಿ ರಾಘವ್ ಕಶ್ಯಪ್ ಎಂಬ ಪಾತ್ರದಲ್ಲಿರುವ ಬಾಲಿವುಡ್ ನಟ ಕುನಾಲ್ ಕಪೂರ್, ಹಿರಿಯ ನಟ ಸುನಿಲ್ ಶೆಟ್ಟಿ ಕೂಡ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡರು. ಅಶ್ವಿನಿ ಪುನೀತ್ ರಾಜಕುಮಾರ್, ನಟ-ನಿರ್ದೇಶಕ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ, ಸ್ಯಾಂಡಲ್‌ವುಡ್ ತಾರೆಯರಾದ ಶ್ರೀಮುರಳಿ, ನಿಶ್ವಿಕಾ ನಾಯ್ಡು, ಶಾನ್ವಿ ಶ್ರೀವಾಸ್ತವ, ಮೇಘನಾ ಗಾಂವ್ಕರ್, ಶುಭ್ರಾ ಅಯ್ಯಪ್ಪ, ಐಶ್ವರ್ಯಾ ನಾಗ್, ಕಾರ್ತಿಕ್ ಮಹೇಶ್, ಕಿಶನ್ ಬಿಳಗಲಿ, ನಿರೂಪಕಿ ಚೈತ್ರಾ ವಾಸುದೇವನ್, ರಾಜಕಾರಣಿ-ಉದ್ಯಮಿ ಮೊಹಮ್ಮದ್ ನಲಪಾಡ್ ಸೇರಿ ಅನೇಕರು ಈ ವಿಶೇಷ ಪ್ರದರ್ಶನವನ್ನು ವೀಕ್ಷಿಸಿದರು. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್‌ಜಿ, ಇಂಡಿಯಾ ಗ್ಲೋಬಲ್ ಫೋರಂ ಸ್ಥಾಪಕ ಪ್ರೊ.ಮನೋಜ್ ಲಾಡ್ವಾ ಹಾಗೂ ಬೆಂಗಳೂರಿನಲ್ಲಿರುವ ಇಸ್ರೇಲ್ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್‌ಮನ್ ಚಿತ್ರತಂಡದ ಪ್ರಯತ್ನಕ್ಕೆ ಬೆನ್ನು ತಟ್ಟಿದರು. ದೇಶ-ವಿದೇಶಗಳ ಖ್ಯಾತ ಉದ್ಯಮಿಗಳು ಹಾಗೂ ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಸಾಥ್ ನೀಡಿದರು. ಕೃತಕ ಬುದ್ಧಿಮತ್ತೆ, ಅಲ್ಗಾರಿದಮ್ ಮತ್ತು ಡಿಜಿಟಲ್ ತಂತ್ರಜ್ಞಾನವು ಇಂದಿನ ಮನುಷ್ಯನ ದೈನಂದಿನ ಬದುಕಿನ ಮೇಲೆ ಬೀರುತ್ತಿರುವ ಪರಿಣಾಮಗಳ ಸುತ್ತ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಅನಿಲ್ ಶೆಟ್ಟಿ, ಕುನಾಲ್ ಕಪೂರ್ ಜತೆಗೆ ಸಾಚಿ ಬಿಂದ್ರಾ ಮುಖ್ಯ ಭೂಮಿಕೆಯಲ್ಲಿದ್ದು, ಜಿಯಾ ಎಂಬ ನೈಜ ಹ್ಯೂಮನಾಯ್ಡ್ ರೋಬೋಟ್ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ಮತ್ತೊಂದು ವಿಶೇಷ.