ಸ್ಯಾಂಡಲ್‌ವುಡ್

ಲಕ್ಷ್ಮೀಪುತ್ರ ಲವ್ಸ್ ವಂದಿತಾ : ನಾಯಕಿಯಾಗಿ ಪದಾರ್ಪಣೆ ಮಾಡಿದ ಮಂಡ್ಯ ಹುಡುಗಿ ವಂದಿತಾ ಗೌಡ VANDITHA GOWDA

ಸ್ಯಾಂಡಲ್‌ವುಡ್‌ಗೆ ಆಗಮಿಸುವ ಹೊಸ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಣ್ಣದ ಲೋಕದಲ್ಲಿ ಹಲವರು ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ಅದೃಷ್ಟದ ಪರೀಕ್ಷೆಗಿಳಿಯುತ್ತಿದ್ದಾರೆ. ಇದೀಗ ನಟಿ ವಂದಿತಾ ಗೌಡ ಸರದಿ. ಈಗಾಗಲೇ ಕನ್ನಡದ ‘ನಮೋ ಭೂತಾತ್ಮ 2’, ‘ಕೆಡಿ’, ‘ಬಲರಾಮನ ದಿನಗಳು’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಅವರು ಇದೀಗ ಚಿಕ್ಕಣ್ಣ ನಾಯಕನಾಗಿ ಅಭಿನಯಿಸುತ್ತಿರುವ ಎರಡನೇ ಸಿನಿಮಾ ‘ಲಕ್ಷ್ಮೀಪುತ್ರ’ ಮೂಲಕ ಪೂರ್ಣಪ್ರಮಾಣದ ನಾಯಕಿಯಾಗಿದ್ದಾರೆ.

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಆಗಮಿಸುವ ಹೊಸ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಣ್ಣದ ಲೋಕದಲ್ಲಿ ಹಲವರು ತಮ್ಮ ಪ್ರತಿಭೆ ಪ್ರದರ್ಶಿಸುವ ಮೂಲಕ ಅದೃಷ್ಟದ ಪರೀಕ್ಷೆಗಿಳಿಯುತ್ತಿದ್ದಾರೆ. ಇದೀಗ ನಟಿ ವಂದಿತಾ ಗೌಡ ಸರದಿ. ಈಗಾಗಲೇ ಕನ್ನಡದ ‘ನಮೋ ಭೂತಾತ್ಮ 2’, ‘ಕೆಡಿ’, ‘ಬಲರಾಮನ ದಿನಗಳು’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಅವರು ಇದೀಗ ಚಿಕ್ಕಣ್ಣ ನಾಯಕನಾಗಿ ಅಭಿನಯಿಸುತ್ತಿರುವ ಎರಡನೇ ಸಿನಿಮಾ ‘ಲಕ್ಷ್ಮೀಪುತ್ರ’ ಮೂಲಕ ಪೂರ್ಣಪ್ರಮಾಣದ ನಾಯಕಿಯಾಗಿದ್ದಾರೆ. ಚಿತ್ರ ನಾಳೆ (ನ. 27) ರಿಲೀಸ್ ಆಗುತ್ತಿದೆ. ತಮ್ಮ ಡೆಬ್ಯೂ ಸಿನಿಮಾ ಜರ್ನಿ ಕುರಿತು ವಂದಿತಾ, ‘‘ಲಕ್ಷ್ಮೀಪುತ್ರ’ ಮೂಲಕ ನಾಯಕಿಯಾಗುತ್ತಿರುವುದು ಖುಷಿಯಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ವೇಳೆ ಸಿಕ್ಕಿದ್ದ ಎ.ಪಿ. ಅರ್ಜುನ್ ಸರ್‌ನ ಮಾತನಾಡಿಸಿ, ಮಂಡ್ಯದ ಹುಡುಗಿ ಎಂದು ಪರಿಚಯ ಮಾಡಿಕೊಂಡಿದ್ದೆ. ಆದಾದ ಕೆಲ ದಿನಗಳ ಬಳಿಕ ನನ್ನ ಇನ್‌ಸ್ಟಾ ಮೂಲಕ ನಂಬರ್ ತೆಗೆದುಕೊಂಡು ಆಡಿಷನ್‌ಗೆ ಕಾಲ್ ಮಾಡಿದರು. ಅಂದು ಗುರುವಾರ. ಆಗಷ್ಟೇ ರಾಯರ ದರ್ಶನ ಪಡೆದು ಹೊರಬಂದಿದ್ದೆ. ‘ಲಕ್ಷ್ಮೀಪುತ್ರ’ ತಂಡದಿಂದ ಆಡಿಷನ್‌ನಲ್ಲಿ ಪಾಲ್ಗೊಳ್ಳುವಂತೆ ಕರೆ ಬಂತು. ಅವರು ಹಳ್ಳಿ ವಾತಾವರಣದ ಬಗ್ಗೆ ತಿಳಿದುಕೊಂಡಿರುವ ಹೊಸ ಮುಖದ ಹುಡುಕಾಟದಲ್ಲಿದ್ದರು. ನಾನು ಕೂಡ ಮಂಡ್ಯದವಳು. ಆಡಿಷನ್, ಲುಕ್ ಟೆಸ್ಟ್ ಆಗಿ ನೀವೇ ಹೀರೋಯಿನ್ ಎಂದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಸಾಕಷ್ಟು ಜನರ ಆಡಿಷನ್ ಮಾಡಿ, ನನ್ನನ್ನು ಆಯ್ಕೆ ಮಾಡಿದ್ದು ಸೌಭಾಗ್ಯವೇ ಸರಿ. ಪ್ರತಿ ಕಲಾವಿದರಿಗೆ ಒಳ್ಳೆಯ ಹೀರೋ ಹಾಗೂ ಪ್ರೊಡಕ್ಷನ್ ಹೌಸ್ ಜತೆ ಕೆಲಸ ಮಾಡಬೇಕು ಎಂಬ ಆಸೆ ಇರುತ್ತದೆ. ಆ ಆಸೆ ನನಗೆ ಮೊದಲ ಚಿತ್ರದಲ್ಲಿಯೇ ಈಡೇರಿದೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ.

ಫ್ಯಾಮಿಲಿ ಕಾಮಿಡಿ ಡ್ರಾಮಾ

ಸಿನಿಮಾ ಕಂಟೆಂಟ್ ಹಾಗೂ ಚಿಕ್ಕಣ್ಣ ಜತೆಗಿನ ಶೂಟಿಂಗ್ ಅನುಭವ, ಪಾತ್ರದ ಬಗ್ಗೆ ವಂದಿತಾ, ‘‘ಲಕ್ಷ್ಮೀಪುತ್ರ’ದಲ್ಲಿ ಅಮ್ಮ-ಮಗನ ನಡುವಿನ ಬಾಂಧವ್ಯದ ಕಥೆಯ ಜತೆಗೆ ಒಂದು ಕ್ಯೂಟ್ ಲವ್ ಸ್ಟೋರಿಯಿದೆ. ಸಂಪೂರ್ಣವಾಗಿ ಹಳ್ಳಿಯಲ್ಲಿಯೇ ಚಿತ್ರೀಕರಣವಾಗಿದೆ. ಹಿರಿಯ ಕಲಾವಿದರ ಜತೆ ಕೆಲಸ ಮಾಡಿದ ಖುಷಿಯಿದೆ. ಇಲ್ಲಿ ನನ್ನದು ಗೌರಿ ಎಂಬ ಪಾತ್ರ. ಇನ್ನು ನಟ ಚಿಕ್ಕಣ್ಣ ಹಾಸ್ಯ ಕಲಾವಿದನಾಗಿ ಜತೆಗೆ ನಾಯಕನಾಗಿಯೂ ಪ್ರೂವ್ ಮಾಡಿಕೊಂಡಿದ್ದಾರೆ. ಅವರ ಜತೆ ಕೆಲಸ ಮಾಡಿರುವ ಪ್ರತಿ ಕ್ಷಣ ನೆನಪಿನಲ್ಲಿ ಉಳಿಯುವಂತಹದ್ದು. ಸದಾ ನಗಿಸುತ್ತಾ, ಖುಷಿಯಿಂದ ನೋಡಿಕೊಳ್ಳುತ್ತಾರೆ. ಇಬ್ಬರ ಕಾಂಬಿನೇಷನ್‌ನ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದು ಹೇಳಿಕೊಳ್ಳುತ್ತಾರೆ.