ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್
ಕೋಮಲ್ ಕುಮಾರ್, ಮೇಘನಾ ರಾಜ್ ಮತ್ತು ಅನುಷಾ ರೈ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಸಿನಿಮಾ "ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್'. ಇತ್ತೀಚೆಗಷ್ಟೆ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಚಿತ್ರತಂಡ ಕುಂಬಳಕಾಯಿ ಒಡೆದಿದೆ. "ಕತ್ತಲೆ ಕೋಣೆ', "ಇನಾಮ್ದಾರ್' ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ ಈ ಚಿತ್ರಕ್ಕೆ ಆ್ಯಕ್ಷನ್&ಕಟ್ ಹೇಳುತ್ತಿದ್ದಾರೆ. ಎರಡು ಹಂತಗಳಲ್ಲಿ ಕುಂದಾಪುರ, ಶಿವಮೊಗ್ಗ, ತೀರ್ಥಹಳ್ಳಿ ಸೇರಿ ಕರಾವಳಿ ಹಾಗೂ ಮಲೆನಾಡ ಭಾಗದಲ್ಲಿ 75 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ನಾಯಕ ನಟ ಕೋಮಲ್ ಕುಮಾರ್ ಇದೇ ಮೊದಲ ಬಾರಿಗೆ "ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್' ಚಿತ್ರದಲ್ಲಿ ಐತಿಹಾಸಿಕ ಹಾಗೂ ಆಧುನಿಕ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದರಲ್ಲಿ ಆಸ್ಥಾನವೊಂದರ ವರ್ಣಚಿತ್ರ ಕಲಾವಿದನಾಗಿದ್ದರೆ, ಮತ್ತೊಂದರಲ್ಲಿ ಸಿನಿಮಾ ನಿರ್ದೇಶಕನಾಗಿ ಕೋಮಲ್ ದ್ವಿಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಅವರಿಗೆ ಅನುಷಾ ರೈ ಜೋಡಿಯಾಗಿದ್ದು, ದ್ವೀತಿಯಾರ್ಧದಲ್ಲಿ ಬರುವ "ದೇವರ ತಾಣ' ಭಾಗದಲ್ಲಿ ಮಹಾರಾಣಿಯಾಗಿ ಮೇಘನಾ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡ್, ವಜ್ರಧಿರ್ ಜೈನ್, ಉತ್ಸವ್, ರಾು ರಾಮನಕೊಪ್ಪ, ವರ್ಧನ್, ಎಂ.ಕೆ.ಮಠ ತಾರಾಗಣದಲ್ಲಿದ್ದಾರೆ.
ವಾರಿಯರ್ ಕ್ವೀನ್ ಮೇಘನಾ
"ತತ್ಸಮ ತದ್ಭವ' ಚಿತ್ರದ ಬಳಿಕ ನಟಿ ಮೇಘನಾ ರಾಜ್ ಸರ್ಜಾ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. "ಬುದ್ಧಿವಂತ 2' ಚಿತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆಯಾದರೂ, ಆ ಸಿನಿಮಾ ತಡವಾಗಿದೆ. ಇದೀಗ "ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್'ನಲ್ಲಿ ಮೇನಾ ವಾರಿಯರ್ ಕ್ವೀನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಗುರಾಣಿ ಹಿಡಿದು ಸಮರಕ್ಕೆ ಸಜ್ಜಾಗಿರುವ ಲುಕ್ನಲ್ಲಿ ಮೇಘನಾ ಮಿಂಚಿದ್ದಾರೆ.
ಒಂದೇ ಚಿತ್ರ, ಎರಡು ಟೈಟಲ್!
ಚಿತ್ರದ ಹೆಸರು "ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್' ಅಂತಿದ್ದರೂ, ಇನ್ನೊಂದು ಟೈಟಲ್ ಕೂಡ ಇದೆ ಎನ್ನುತ್ತಾರೆ ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ. "ಅದಕ್ಕೆ ಕಾರಣ ಚಿತ್ರದ ಕಥೆ. ಮೊದರ್ಲಧ ಬಾರ್ನಲ್ಲಿ ಶುರುವಾಗಿ, ಅದರ ಸುತ್ತ ಕಥೆ ಸಾಗುತ್ತದೆ. ಆದರೆ, ದ್ವೀತಿಯಾರ್ಧ ದೇವರ ತಾಣದಲ್ಲಿ ಕಥೆ ಶುರುವಾಗಿ ಅಲ್ಲಿಯೇ ಮುಗಿಯುತ್ತದೆ. ಹೀಗಾಗಿ ಚಿತ್ರದ ಮೊದರ್ಲಧ "ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್' ಆಗಿದ್ದರೆ, ದ್ವೀತಿಯಾರ್ಧದಲ್ಲಿ "ದೇವರ ತಾಣ' ಅಂತ, ಎರಡೂ ನಮ್ಮ ಸಿನಿಮಾ ಟೈಟಲ್ಗಳೇ. ಆದರೆ, ಸೆನ್ಸಾರ್ ನಿಯಮದಂತೆ ಒಂದು ಚಿತ್ರಕ್ಕೆ ಒಂದೇ ಹೆಸರು ಇಡಬೇಕು. ಹೀಗಾಗಿ "ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್' ಹೆಸರನ್ನು ಅಂತಿಮಗೊಳಿಸಿದ್ದೇವೆ' ಎನ್ನುತ್ತಾರೆ.
ಏಳು ವೈವಿಧ್ಯಮಯ ಸೆಟ್ಗಳು
ಕುಂದಾಪುರದ ಅಂಪಾರಿನ ವಾಲ್ತೂರು ಗ್ರಾಮದಲ್ಲಿ ಏಳು ವಿಭಿನ್ನ ವಿನ್ಯಾಸಗಳ ಸೆಟ್ಗಳನ್ನು ನಿರ್ಮಿಸಿ, ಅದರಲ್ಲೇ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಿರುವುದು ವಿಶೇಷ. ಸುಮಾರು ಎರಡು ಎಕರೆ ಜಾಗದಲ್ಲಿ ಈ ಕಥೆಗೆ ತಕ್ಕಂತೆ ವೈವಿಧ್ಯಮಯ ಸೆಟ್ಗಳನ್ನು ಹಾಕಿ, ಅದರಲ್ಲೇ "ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್'ನ ಶೇಕಡ 90ರಷ್ಟು ಶೂಟಿಂಗ್ ನಡೆಸಲಾಗಿದೆ.
ಕೋಟ್:
ಚಿತ್ರದಲ್ಲಿ ನಾಲ್ಕು ವಿಭಿನ್ನ ಹಾಡುಗಳು, ಫೈಟ್ಸ್, ಕಾಮಿಡಿ, ಎಮೋಷನ್ಸ್ ಜತೆಗೊಂದು ಸ್ಪಿರಿಚುವಲ್ ಕಥೆಯಿದ್ದು... ಒಂದು ಸಂಪೂರ್ಣ ಮನರಂಜನಾತ್ಮಕ ಚಿತ್ರವಿದು. ಒಬ್ಬ ನಿರ್ದೇಶಕನಾಗಿ ನನಗೇ ವಿಭಿನ್ನ ಅನುಭವ ನೀಡಿದ ಸಿನಿಮಾ ಇದು. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ವಿಭಿನ್ನ ಚಿತ್ರವಾಗಿ ನಿಲ್ಲುವ ವಿಶ್ವಾಸವಿದೆ. -ಸಂದೇಶ್ ಶೆಟ್ಟಿ ಅಜ್ರಿ, ನಿರ್ದೇಶಕ