ಅಪ್ಪು ಗ್ಯಾರೇಜ್ ಪೋಸ್ಟರ್ 
ಸ್ಯಾಂಡಲ್‌ವುಡ್

Appu Garage Review -

ವಿಜಯವಾಣಿ ಸುದ್ದಿ ಜಾಲ

ವಿಷ್ಣು (ವಿಷ್ಣು) ಮತ್ತು ಅಪ್ಪು (ಜೀವನ್​) ಜೀವದ ಗೆಳೆಯರು. ಇಬ್ಬರೂ ಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ವಿಷ್ಣುಗೆ ಧನು ಮೇಲ್​ ಲವ್​, ಅಪ್ಪುಗೆ ರಾಧಾ ಮೇಲೆ ಪ್ರೀತಿ. ಗೆಳೆತನದ ಜತೆಗೆ ಕುಟುಂಬ, ಪ್ರೀತಿ ಅಂತ ತಮ್ಮ ಜೀವನಗಳಲ್ಲಿ ಆರಾಮಾಗಿರುತ್ತಾರೆ. ಅಷ್ಟರಲ್ಲಿ ಅವರು ಕೆಲಸ ಮಾಡುವ ಮೇಜರ್​ ಧನರಾಜ್​ (ಅವಿನಾಶ್​) ಒಡೆತನದ ಅಪ್ಪು ಗ್ಯಾರೇಜ್​ ಜಾಗದ ಮೇಲೆ ದುಷ್ಟರ ಕಣ್ಣು ಬೀಳುತ್ತದೆ. ಲೇಡಿರೌಡಿಗಳ ಮೂಲಕ ಆ ಗ್ಯಾರೇಜ್​ನಲ್ಲಿ ದೆವ್ವ-ಭೂತಗಳ ಕಾಟವಿದೆ ಎಂದು ಕಥೆ ಕಟ್ಟಲು ಯತ್ನಿಸಿ ಈ ಗ್ಯಾಂಗ್​ ಸೋಲುತ್ತದೆ. ನಂತರ ರೌಡಿ ಪಡೆ, ಗ್ಯಾರೇಜ್​ಗೆ ನುಗ್ಗಿ ಬಂದು ಗಲಾಟೆ ಮಾಡಿ, ಅಲ್ಲಿನ ಹುಡುಗರನ್ನು ಓಡಿಸಲು ಯತ್ನಿಸಿ ಅದರಲ್ಲೂ ಒದೆ ತಿಂದು ಓಡುತ್ತದೆ. ಬಳಿಕ ಡ್ರಗ್ಸ್​ ಮತ್ತು ಶಸ್ತ್ರಗಳನ್ನು ಇಟ್ಟು ಪೊಲೀಸರಿಗೆ ಹಿಡಿದುಕೊಡಲು ಯತ್ನಿಸಿ, ಅಲ್ಲೂ ಯಶಸ್ಸು ಕಾಣುವುದಿಲ್ಲ. ಈ ಅಪ್ಪು ಗ್ಯಾರೇಜ್​ ಹೋರಾಟದ ಜತೆಗೆ ವಿಷ್ಣು ಮತ್ತು ಅಪ್ಪು ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಅದನ್ನೆಲ್ಲ ಈ ದೋಸ್ತಿಗಳು ಹೇಗೆ ಬಗೆಹರಿಸಿಕೊಳ್ಳುತ್ತಾರೆ ಎಂಬುದೇ ಕಥೆ. ಚಂದ್ರಚೂಡೇಶ್ವರ ರಾಜು ನಿರ್ದೇಶನದ ರೊಮ್ಯಾಂಟಿಕ್​ ಆ್ಯಕ್ಷನ್​ ಡ್ರಾಮಾ ಇದು. ಅದಕ್ಕೆ ಪೂರಕ ಎಂಬಂತೆ ಮೊದರ್ಲಧದಲ್ಲೇ ತಲಾ ಮೂರು ಆ್ಯಕ್ಷನ್​ ಮತ್ತು ಹಾಡುಗಳು ಬಂದುಹೋಗುತ್ತವೆ. ಕೆಲವೆಡೆ ಲಿಂಕ್​ ಮಿಸ್​ ಆಗಿದೆ. ಅಕುಲ್​ ಬಾಲಾಜಿಯ ಜೂನಿಯರ್​ ವರ್ಷನ್​ನಂತೆ ಕಾಣುವ ವಿಷ್ಣು ಜತೆಗೆ ಜೀವನ್​ ಚೊಚ್ಚಲ ಚಿತ್ರದಲ್ಲಿ ಗಮನ ಸೆಳೆಯುತ್ತಾರೆ. ಅವರು ಸೇರಿ ನಾಯಕಿಯರಿಗೂ ಇನ್ನಷ್ಟು ತಯಾರಿ ಬೇಕಿತ್ತು ಅಂತನ್ನಿಸುತ್ತದೆ. ರವಿ ಕಾಳೆ, ತಬಲಾ ನಾಣಿ, ಡಿಂಗ್ರಿ ನಾಗರಾಜ್​, ಲಯ ಕೋಕಿಲ ಅಲ್ಲಲ್ಲಿ ನಗಿಸುತ್ತಾರೆ.