ಲಾರ್ಡ್​ ಗಾಗ ಚಿತ್ರದ ಪೋಸ್ಟರ್ 
ಸ್ಯಾಂಡಲ್‌ವುಡ್

Lord Gaaga - ಏಳು ಭಾಷೆಗಳಲ್ಲಿ "ಲಾರ್ಡ್​ ಗಾಗ'

ಯುವ ನಿರ್ದೇಶಕ ವೈಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್​&ಕಟ್​ ಹೇಳಿರುವ ಸಿನಿಮಾ "ಲಾರ್ಡ್​ ಗಾಗ'. ಟೈಟಲ್​ ಹೇಳುವಂತೆ ಇದೊಂದು ಕಲ್ಟ್​ ಚಿತ್ರವಾಗಿದ್ದು, ಪ್ರೀತಿ, ಪ್ರೇಮ, ಪ್ರಣಯ, ಭಾವನೆ, ವ್ಯಸನ ಹಾಗೂ ಆಯ್ಕೆಯ ಅಂಶಗಳಿವೆ. ಈ ಚಿತ್ರದಲ್ಲಿ "ಹೆಡ್​ಬುಷ್​' ನಿರ್ದೇಶಕ ಶೂನ್ಯ ನಾಯಕನಾಗಿದ್ದು, ಅವರಿಗೆ ಸ್ವರೂಪಿಣಿ, ದಿಶಾ ಇಬ್ಬರು ಜೋಡಿಯಾಗಿದ್ದಾರೆ.

ಬೆಂಗಳೂರು: ಯುವ ನಿರ್ದೇಶಕ ವೈಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್​-ಕಟ್​ ಹೇಳಿರುವ ಸಿನಿಮಾ "ಲಾರ್ಡ್​ ಗಾಗ'. ಟೈಟಲ್​ ಹೇಳುವಂತೆ ಇದೊಂದು ಕಲ್ಟ್​ ಚಿತ್ರವಾಗಿದ್ದು, ಪ್ರೀತಿ, ಪ್ರೇಮ, ಪ್ರಣಯ, ಭಾವನೆ, ವ್ಯಸನ ಹಾಗೂ ಆಯ್ಕೆಯ ಅಂಶಗಳಿವೆ. ಈ ಚಿತ್ರದಲ್ಲಿ "ಹೆಡ್​ಬುಷ್​' ನಿರ್ದೇಶಕ ಶೂನ್ಯ ನಾಯಕನಾಗಿದ್ದು, ಅವರಿಗೆ ಸ್ವರೂಪಿಣಿ, ದಿಶಾ ಇಬ್ಬರು ಜೋಡಿಯಾಗಿದ್ದಾರೆ. ಸದ್ದಿಲ್ಲದೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡವು ಇದೀಗ ರಿಲೀಸ್​ಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಮೋಷನ್​ ಪೋಸ್ಟರ್​ ರಿಲೀಸ್​ ಮಾಡಿದೆ.

ಲಾರ್ಡ್​ ಗಾಗ ಚಿತ್ರತಂಡ

"ರಿವರ್ಸ್​ ಸ್ಕ್ರೀನ್​ಪ್ಲೇಯಲ್ಲಿ ಚಿತ್ರ ಸಾಗುತ್ತದೆ. ರೊಮ್ಯಾಂಟಿಕ್​ ಜತೆಗೆ ಸೈಕಾಲಜಿಕಲ್​ ಥ್ರಿಲ್ಲರ್​ ಮೂಲಕ ಕಥೆಯನ್ನು ನಿರೂಪಿಸಿದ್ದೇವೆ. ಇದೊಂದು ಕಾಲಾತೀತ ಚಿತ್ರವಾಗಿದ್ದು, ಅಹಂಕಾರವೇ ಕೇಂದ್ರಿತವಾಗಿದೆೆ' ಎಂದು ನಿರ್ದೇಶಕ ವೈ.ಕೆ. ಮಾಹಿತಿ ನೀಡುತ್ತಾರೆ. ಉಡುಪಿ, ಗೋಕರ್ಣ, ಹಾಸನ ಸುತ್ತಮುತ್ತ ಚಿತ್ರದ ಶೂಟಿಂಗ್​ ನಡೆಸಲಾಗಿದೆ. ಸದ್ಯ ಪೋಸ್ಟ್​- ಪ್ರೊಡಕ್ಷನ್​ ಕೆಲಸಗಳು ಕೊನೆಯ ಹಂತದಲ್ಲಿದ್ದು, ಶ್ರೀದಲ್ಲೆ ಚಿತ್ರ ಸೆನ್ಸಾರ್​ಗೆ ಹೋಗಲಿದೆ. ಇನ್ನು "ಲಾರ್ಡ್​ ಗಾಗ' ಚಿತ್ರವನ್ನು ಕನ್ನಡದ ಜತೆಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ, ಭೋಜಪುರಿಯಲ್ಲಿ ಏಕಕಾಲಕ್ಕೆ ರಿಲೀಸ್​ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಅಂದುಕೊಂಡಂತಾದರೆ, 2027ರ ಮಾರ್ಚ್​ಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.