ನಟಿ ಪ್ರೀತು ಪೂಜಾ 
ಸ್ಯಾಂಡಲ್‌ವುಡ್

Dasara Celebration - ನಮ್ಮೂರ ದಸರಾ ಎಷ್ಟೊಂದು ಸುಂದರ

ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಮೈಸೂರಿನಲ್ಲಂತೂ ದಸರಾ ಸಡಗರ ಪ್ರತಿ ವರ್ಷದಂತೆ ಜೋರಾಗಿದೆ. ಹೀಗಾಗಿಯೇ ಸಾಂಸ್ಕೃತಿಕ ನಗರದ ಜನರಿಗೆ ಪ್ರತಿ ಬಾರಿ ದಸರಾ ಬಂದಾಗಲೂ ವಿಶೇಷವೇ. ಮೂಲತಃ ಮೈಸೂರಿನವರಾದ ನಟಿ ಪ್ರೀತು ಪೂಜಾ ಕೂಡ ದಸರಾ ಹಬ್ಬದ ಸಂಭ್ರಮದ ನಡುವೆಯೂ ತಮ್ಮ ಊರನಲ್ಲೇ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ.

ಬೆಂಗಳೂರು:

ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಮೈಸೂರಿನಲ್ಲಂತೂ ದಸರಾ ಸಡಗರ ಪ್ರತಿ ವರ್ಷದಂತೆ ಜೋರಾಗಿದೆ. ಹೀಗಾಗಿಯೇ ಸಾಂಸ್ಕೃತಿಕ ನಗರದ ಜನರಿಗೆ ಪ್ರತಿ ಬಾರಿ ದಸರಾ ಬಂದಾಗಲೂ ವಿಶೇಷವೇ. ಮೂಲತಃ ಮೈಸೂರಿನವರಾದ ನಟಿ ಪ್ರೀತು ಪೂಜಾ ಕೂಡ ದಸರಾ ಹಬ್ಬದ ಸಂಭ್ರಮದಲ್ಲಿದ್ದಾರೆ. "ದ ಚೆಕ್​ಮೇಟ್​', "ಫೀಲ್​ ಮೈ ಲವ್​', "90 ಬಿಡಿ ಮನೀಗ್​ ನಡಿ', "ಮನದರಸಿ' ಚಿತ್ರಗಳಲ್ಲಿ ನಟಿಸಿರುವ ಅವರು, ಸದ್ಯ ಮೈಸೂರಿನಲ್ಲೇ ಹೊಸ ಚಿತ್ರವೊಂದರ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ.

ನಟಿ ಪ್ರೀತು ಪೂಜಾ

"ಕಳೆದ ಕೆಲ ದಿನಗಳಿಂದ ಮೈಸೂರಿನಲ್ಲೇ "ಎರೆಯ' ಚಿತ್ರದ ಶೂಟಿಂಗ್​ ನಡೆಸುತ್ತಿದ್ದೆವು. ದಸರಾ ಆರಂಭವಾಗುತ್ತಿದ್ದಂತೆಯೇ ರಾಜ್ಯದ ಮೂಲೆ ಮೂಲೆಗಳಿಂದ, ದೇಶ ವಿದೇಶಗಳಿಂದ ಜನ ಹೆಚ್ಚು ಬರುವ ಕಾರಣ ಸದ್ಯ ಚಿತ್ರೀಕರಣ ಸ್ಥಗಿತಗೊಳಿಸಿದ್ದೇವೆ. ನಾನು ಮೈಸೂರಿನವಳೇ ಆದ ಕಾರಣ ಪ್ರತಿ ವರ್ಷ ಅದ್ಧೂರಿಯಾಗಿ ದಸರಾ ಆಚರಿಸುತ್ತೇವೆ. ಮೊದಲೆಲ್ಲ ಜನ ಎಲ್ಲೆಡೆಯಿಂದ ದಸರಾ ಅಂಬಾರಿ, ವಸ್ತುಪ್ರದರ್ಶನ, ಅರಮನೆ ಲೈಟಿಂಗ್ಸ್​ ನೋಡಲು ಬರುತ್ತಿದ್ದರು. ಈಗಂತೂ ಸೋಷಿಯಲ್​ ಮೀಡಿಯಾಗಾಗಿ ವಿಡಿಯೋ ಮಾಡಲು ಬರುವವರೇ ಹೆಚ್ಚು. ಬಾಲ್ಯದಿಂದಲೂ ಅಪ್ಪ, ಅಮ್ಮನ ಜತೆ ದಸರಾ ಜಂಬೂ ಸವಾರಿ, ಎಕ್ಸಿಬಿಷನ್​, ್ಲವರ್​ ಶೋ, ಆಹಾರ ಮೇಳ... ಎಲ್ಲೆಡೆ ಹೋಗುತ್ತಿದ್ದೆ. ಇನ್ನು ದಸರಾ ಆರಂಭಕ್ಕೂ ಮುನ್ನ ಆನೆಗಳನ್ನು ವಾಕಿಂಗ್​ ಕರೆದುಕೊಂಡು ಹೋಗುವುದನ್ನು ನೋಡಲು ಹೋಗುತ್ತೇನೆ. ಹೀಗೆ ದಸರಾ ನನಗಂತು ಅದ್ಭುತ ನೆನಪುಗಳನ್ನು ನೀಡಿದೆ. ಸದ್ಯ "ಎರೆಯ' ಶೂಟಿಂಗ್​ ನಡೆಯುತ್ತಿದೆ, ಎರಡು ಸಿನಿಮಾಗಳು ರಿಲೀಸ್​ಗೆ ರೆಡಿಯಿವೆ. ತೆಲುಗು, ತಮಿಳಿನಲ್ಲೂ ಕಥೆಗಳು ಬಂದಿವೆ. ಸ್ಯಾರಿ ಶೋರೂಂ ಪ್ರಾರಂಭಿಸುತ್ತಿದ್ದೇನೆ. ಹೀಗೆ ಈ ಬಾರಿಯ ದಸರಾ ನನಗೆ ವೃತ್ತಿಯಲ್ಲಿ ಮತ್ತು ವಯಕ್ತಿಕವಾಗಿ ತುಂಬ ವಿಶೇಷ' ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ನಟಿ ಪ್ರೀತು ಪೂಜಾ