ಜಾಕಿ 42 ಚಿತ್ರತಂಡ 
ಸ್ಯಾಂಡಲ್‌ವುಡ್

ಡಿ. 18ಕ್ಕೆ ‘ಜಾಕಿ 42’ : ‘ರಾನಿ’ ಬಳಿಕ ಒಂದಾದ ಕಿರಣ್ ರಾಜ್- ಗುರುತೇಜ್ ಶೆಟ್ಟಿ

‘ರಾನಿ: ದ ರೂಲರ್’ ಬಳಿಕ ನಟ ಕಿರಣ್ ರಾಜ್ ಮತ್ತು ಗುರುತೇಜ್ ಶೆಟ್ಟಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಚಿತ್ರ ‘ಜಾಕಿ 42’. ಕುದುರೆ ರೇಸ್ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ಕಿರಣ್‌ಗೆ ಹೃತಿಕಾ ಶ್ರೀನಿವಾಸ್ ಜೋಡಿಯಾಗಿದ್ದಾರೆ. ಈಗಾಗಲೇ ಎರಡು ಹಾಡುಗಳ ಮೂಲಕ ಗಮನ ಸೆಳೆದಿರುವ ಚಿತ್ರತಂಡವು ಇತ್ತೀಚೆಗೆ ರಿಲೀಸ್ ಡೇಟ್ ಅನೌನ್ಸ್ ಜತೆಗೆ ‘ಸೆಲ್ಫಿ ಸರೋಜಾ’ ಎಂಬ ಶೀರ್ಷಿಕೆಯ ಮೂರನೇ ಹಾಡು ಬಿಡುಗಡೆ ಮಾಡಿದೆ.

ಬೆಂಗಳೂರು: ‘ರಾನಿ: ದ ರೂಲರ್’ ಬಳಿಕ ನಟ ಕಿರಣ್ ರಾಜ್ ಮತ್ತು ಗುರುತೇಜ್ ಶೆಟ್ಟಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಚಿತ್ರ ‘ಜಾಕಿ 42’. ಕುದುರೆ ರೇಸ್ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ಕಿರಣ್‌ಗೆ ಹೃತಿಕಾ ಶ್ರೀನಿವಾಸ್ ಜೋಡಿಯಾಗಿದ್ದಾರೆ. ಈಗಾಗಲೇ ಎರಡು ಹಾಡುಗಳ ಮೂಲಕ ಗಮನ ಸೆಳೆದಿರುವ ಚಿತ್ರತಂಡವು ಇತ್ತೀಚೆಗೆ ರಿಲೀಸ್ ಡೇಟ್ ಅನೌನ್ಸ್ ಜತೆಗೆ ‘ಸೆಲ್ಫಿ ಸರೋಜಾ’ ಎಂಬ ಶೀರ್ಷಿಕೆಯ ಮೂರನೇ ಹಾಡು ಬಿಡುಗಡೆ ಮಾಡಿದೆ. ನಾಗಾರ್ಜುನ ಶರ್ಮಾ ಸಾಹಿತ್ಯ ಇರುವ ಈ ಹಾಡಿಗೆ ವಿನೋದ್ ಯಜಮಾನ್ಯ ಸಂಗೀತ ನೀಡಿದ್ದಾರೆ. ಕಿರಣ್ ರಾಜ್, ಮುಂಬೈ ಬೆಡಗಿ ಕೃತಿ ವರ್ಮಾ ಹಾಗೂ ಭೂಷಣ್ ಮಾಸ್ಟರ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ, ರಿಲೀಸ್ ಡೇಟ್ ಕೂಡ ಘೋಷಿಸಿದ್ದು, ಅದರಂತೆ ಡಿ. 18ಕ್ಕೆ ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರಲಿದೆ. ನಟ ಕಿರಣ್ ರಾಜ್ ಸಿನಿಮಾ ಜರ್ನಿ ಕುರಿತು, ‘‘ಸೆಲ್ಫಿ ಸರೋಜಾ’ ಹಾಡಿನಲ್ಲಿ ಆರಂಭದಲ್ಲಿ ನಾನೇ ಅಭಿನಯಿಸಬೇಕಿತ್ತು. ನನ್ನ ನೃತ್ಯ ಅಷ್ಟಾಗಿ ಹೊಂದಿಕೆಯಾಗುವುದಿಲ್ಲ ಎಂದು ತಿಳಿದು ಭೂಷಣ್ ಮಾಸ್ಟರ್‌ರನ್ನೇ ಆಯ್ಕೆ ಮಾಡಲಾಯಿತು. ‘ಜಾಕಿ 42’ ನನ್ನ ಜೀವನದ ದೊಡ್ಡ ಪಣ. ಕಲ್ಲಿಗೆ ಏಟು ಬಿದ್ದಾಗಲೇ ಅದು ಶಿಲೆಯಾಗುತ್ತದೆ. ನಿರಂತರ ಏಟು ಬಿದ್ದರೆ ಕಲ್ಲೂ ಮಣ್ಣಾಗುತ್ತದೆ. ಮಣ್ಣಾಗುವ ಮುನ್ನ ಜೀವನದಲ್ಲಿ ಒಮ್ಮೆಯಾದರೂ ಶಿಲೆಯಾಗಿ ನಿಲ್ಲಬೇಕು ಎಂಬ ಆಸೆ ನನ್ನದು. ಈ ಸಿನಿಮಾ ಪಯಣದಲ್ಲಿ ಗುರುತೇಜ್ ಸ್ನೇಹಿತನಾಗಿ, ಮಾರ್ಗದರ್ಶಕರಾಗಿ ಹಾಗೂ ತಂದೆಯ ಸ್ಥಾನದಲ್ಲಿ ನಿಂತು ಬೆಂಬಲ ನೀಡಿದ್ದಾರೆ’ ಎಂದು ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು.