Rashmika Mandanna (ಚಿತ್ರ Instagram)
Rashmika Mandanna: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಈ ಬಾರಿಯ ಹುಟ್ಟುಹಬ್ಬ ಅತ್ಯಂತ ವಿಶೇಷವಾಗಿತ್ತು. 30ನೇ ವಸಂತಕ್ಕೆ ಕಾಲಿಟ್ಟ ನಟಿ ತಮ್ಮ ಹಟ್ಟೂರಾದ ಕೊಡಗಿನಲ್ಲಿ ಪತಿ ವಿಜಯ್ ದೇವರಕೊಂಡ ಅವರೊಂದಿಗೆ ಸಂಭ್ರಮಿಸಿದ್ದಾರೆ. ಮದುವೆಯ ನಂತರ ದಂಪತಿ ಮೊದಲ ಬಾರಿಗೆ ಕೊಡಗಿಗೆ ಭೇಟಿ ನೀಡಿದ್ದು, ಈ ಸುಂದರ ಕ್ಷಣಗಳಿಗೆ ಅವರ ಕುಟುಂಬ ಸಾಕ್ಷಿಯಾಯಿತು.
ದಂಪತಿ ಬಗ್ಗೆ ಎವೊಲ್ಟ್ ಬ್ಯಾಕ್ ರೆಸಾರ್ಟ್ ಪೋಸ್ಟ್!
ಮನೆಗೆ ಮರಳುವಿಕೆ, ಹುಟ್ಟುಹಬ್ಬ ಮತ್ತು ಸುಂದರವಾದ ಹೊಸ ಅಧ್ಯಾಯದೊಂದಿಗೆ ಭಾರತೀಯ ಚಿತ್ರರಂಗದ ತಾರಾ ದಂಪತಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಇತ್ತೀಚೆಗೆ ನಮ್ಮ 'ಇವೋಲ್ವ್ ಬ್ಯಾಕ್ ರೆಸಾರ್ಟ್‌ಗೆ ಭೇಟಿ ನೀಡಿದ್ದಾಗ ಅವರಿಗೆ ಆತಿಥ್ಯ ನೀಡಿದ್ದು ನಮಗೆ ಸಂದ ಗೌರವ. ರಶ್ಮಿಕಾ ಮಂದಣ್ಣ ಅವರು ತಮ್ಮ ಪ್ರೀತಿಪಾತ್ರರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಈ ಸಂದರ್ಭವನ್ನು ಇನ್ನಷ್ಟು ವಿಶೇಷಗೊಳಿಸಿತು.
ಹೆಮ್ಮೆಯ ಕೊಡವತಿ, ಶ್ರೀಮತಿ ಮಂದಣ್ಣ ತಮ್ಮ ಪತಿಯನ್ನು ತಾಯ್ನಾಡಿಗೆ ಪರಿಚಯಿಸುವಲ್ಲಿ ಬಹಳ ಸಂತೋಷಪಟ್ಟರು. ಕುಟುಂಬ ನಮ್ಮೊಂದಿಗೆ ಆತ್ಮೀಯವಾಗಿ ಸಮಯವನ್ನು ಕಳೆದರು. ಆದಾಗ್ಯೂ, ಈ ದಂಪತಿಯನ್ನು ಮತ್ತೊಮ್ಮೆ ಎವಾಲ್ವ್ ಬ್ಯಾಕ್ ಕೂರ್ಗ್‌ಗೆ ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ 300 ಎಕರೆ ಕಾಫಿ ಮತ್ತು ಮಸಾಲೆ ತೋಟದಲ್ಲಿ ನಿರ್ಮಿಸಲಾದ ಐಷಾರಾಮಿ ರೆಸಾರ್ಟ್ ಕೂರ್ಗ್‌ನ ಎವಾಲ್ವ್ ಬ್ಯಾಕ್. ಈ ಹಿಂದೆ ಆರೆಂಜ್ ಕೌಂಟಿ ಎಂದು ಕರೆಯಲ್ಪಡುತ್ತಿದ್ದ ಈ ಆಸ್ತಿಯು ತೋಟ ಶೈಲಿ ಮತ್ತು ಕೊಡವ ಶೈಲಿಯ ವಿಲ್ಲಾಗಳನ್ನು ಹೊಂದಿದೆ. ಇದು ಸುಂದರವಾದ ಪೂಲ್ಗಳನ್ನು ಹೊಂದಿದ್ದು, ರೆಸಾರ್ಟ್ ಪ್ರಕೃತಿ ಆಧಾರಿತ ವಾಸ್ತವ್ಯ ಮತ್ತು ಪ್ರದೇಶದ ಸಂಸ್ಕೃತಿಗೆ ಸಂಬಂಧಪಟ್ಟಂತೆ ಅಲಂಕಾರಗೊಂಡಿದೆ.
ಈ ರೆಸಾರ್ಟ್ ಬಹು ವಸತಿ ರೂಂಗಳನ್ನು ಹೊಂದಿದ್ದು, ಇಬ್ಬರು ಅತಿಥಿಗಳಿಗೆ ಒಂದು ರಾತ್ರಿಗೆ ಉಪಹಾರ ಮತ್ತು ಭೋಜನ ಸೇರಿದಂತೆ ಸುಮಾರು 1,03,000 ರೂ.ಬೆಲೆಯನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ (ಏಜೆನ್ಸೀಸ್).