ಬೆಂಗಳೂರು: "ಭಲೇ ಅದೃಷ್ಟವೋ ಅದೃಷ್ಟ (1971), "ಅದೃಷ್ಟ ರೇಖೆ' (1989), "ಅದೃಷ್ಟ' (2009), "ಲಕ್ಕಿ' (2012), "ಲಕ್ಕಿ ಮ್ಯಾನ್' (2022), "ಲಕ್'(2024) ಹೀಗೆ ಅದೃಷ್ಟ ಮತ್ತು ಲಕ್ ಶೀರ್ಷಿಕೆಗಳೊಂದಿಗೆ ಅದೃಷ್ಟ ಪರೀೆಗಳಿದ ಸಿನಿಮಾಗಳ ಸಾಲೇ ಇದೆ. ಇದೀಗ ಈ ಸಾಲಿಗೆ "ಮಿಸ್ಟರ್ ಲಕ್ಕಿ' ಎಂಬ ಸಿನಿಮಾ ಸೇರಿಕೊಂಡಿದೆ. ಯುವ ನಿರ್ದೇಶಕ ಹರ್ಷಿತ್ ರಂಗಸ್ವಾಮಿ ಚೊಚ್ಚಲ ಬಾರಿಗೆ ಆ್ಯಕ್ಷನ್&ಕಟ್ ಹೇಳಿರುವ ಈ ಚಿತ್ರದ ಶೂಟಿಂಗ್ ಸದ್ದಿಲ್ಲದೇ ಪೂರ್ಣಗೊಂಡಿದೆ. ಇದೊಂದು ಫ್ಯಾಂಟಸಿ ಥ್ರಿಲ್ಲರ್ ಜಾನರ್ ಕಥೆಯಾಗಿದ್ದು, ಹೊಸ ದೃಷ್ಟಿಕೋನವನ್ನು ಪರಿಚಯಿಸವ ವಿಭಿನ್ನ ಪ್ರಯತ್ನವಾಗಿದೆ. ಯುವನಟ ರಾಮ್ ತೇಜ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, "ಬ್ಲಿಂಕ್', "ವಿಡಿಯೋ' ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಚೊಚ್ಚಲ ಬಾರಿಗೆ ನಟಿಸುತ್ತಿದ್ದಾರೆ. ಹಾಗೇ ರಾಯ, ರಿತಿ ಶೆಟ್ಟಿ, ಐಶ್ವರ್ಯಾ ದೇವರಾಜ್ ಪ್ರಮುಖ ತಾರಾಗಣದಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಸದ್ಯ ಪೋಸ್ಟ್&ಪ್ರೊಡಕ್ಷನ್ ಕಾರ್ಯಗಳಲ್ಲಿ ಬಿಜಿಯಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಅದರಂತೆ ಇದೇ ತಿಂಗಳ 30ರಂದು "ಮಿ. ಲಕ್ಕಿ' ತೆರೆಗೆ ಬರಲಿದೆ. ಉಳಿದಂತೆ ಪ್ರಸನ್ನ ಕುಮಾರ್ ಎಂ.ಎಸ್. ಸಂಗೀತ, ಸಾಗರ್ ಎನ್. ಛಾಯಾಗ್ರಹಣ ಚಿತ್ರಕ್ಕಿದೆ.