"ಅಮೃತ್ ಅಪಾರ್ಟ್ಮೆಂಟ್ಸ್' ಮತ್ತು "ದ ಜಡ್ಜ್ಮೆಂಟ್' ಚಿತ್ರಗಳ ಬಳಿಕ ಗುರುರಾಜ ಕುಲಕರ್ಣಿ (ನಾಡಗೌಡ) ಆ್ಯಕ್ಷನ್-ಕಟ್ ಹೇಳುತ್ತಿರುವ ಹೊಸ ಸಿನಿಮಾ "ಡಿಯರ್ ಹಸ್ಬೆಂಡ್'. ಅದಕ್ಕೆ "ಐ ಲವ್ ಯೂ' ಎಂಬ ಅಡಿಬರಹವಿದೆ. ಇದೊಂದು ರೊಮ್ಯಾಂಟಿಕ್ ಕ್ರೈಮ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು "ನಿನ್ನ ಸನಿಹಕೆ' ಖ್ಯಾತಿಯ ಸೂರಜ್ ಗೌಡ, ಪ್ರವಿಣ್ ಮತ್ತು ಶರಣ್ಯಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ. ಇತ್ತೀಚೆಗಷ್ಟೆ ನಟ ಸುದೀಪ್ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡಿ, "ನಾವು ಚಿತ್ರರಂಗಕ್ಕೆ ಬಂದಾಗ ಅನೇಕ ಹಿರಿಯರು ನಮಗೆ ಪ್ರೋತ್ಸಾಹಿಸಿದಂತೆಯೇ, ನಾವು ಈಗ ಹೊಸಬರಿಗೆ ಬೆನ್ನು ತಟ್ಟುತ್ತಿದ್ದೇವೆ. ಅಂತಿಮವಾಗಿ ಕನ್ನಡ ಚಿತ್ರರಂಗ ಬೆಳೆಯಬೇಕು. ಇಡೀ ತಂಡಕ್ಕೆ ಶುಭವಾಗಲಿ' ಎಂದ ಹಾರೈಸಿದರು. ಕುಮಾರ್ ಬಂಗಾರಪ್ಪ, ಪ್ರವಿಣ್ ತೇಜ್, ವಿ. ಹರಿಕೃಷ್ಣ, ಶಶಾಂಕ್, ಎ.ಪಿ.ಅರ್ಜುನ್ ಜತೆ ಕ್ರಿಕೆಟಿಗರಾದ ವೈಶಾಖ್ ವಿಜಯಕುಮಾರ್, ರಿತೇಶ್ ಭಟ್ಕಳ ಸೇರಿ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ, ತಂಡಕ್ಕೆ ಶುಭಹಾರೈಸಿದರು. ಸದ್ಯ "ಡಿಯರ್ ಹಸ್ಬೆಂಡ್' ಚಿತ್ರದ ಬಹುತೇಕ ಪ್ರಿ&ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇದೇ ತಿಂಗಳಂತ್ಯದಿಂದ ಶೂಟಿಂಗ್ ಪ್ರಾರಂಭವಾಗಲಿದೆ. ಬೆಂಗಳೂರು, ಗೋವಾ ಸೇರಿ ಹಲವೆಡೆ ಚಿತ್ರೀಕರಣ ನಡೆಸುವ ಪ್ಲಾ$್ಯನ್ ಗುರುರಾಜ ಕುಲಕರ್ಣಿ ಮತ್ತು ತಂಡದ್ದು. ವೀರ್ ಸಮರ್ಥ್ ಸಂಗೀತ, ಪ್ರಮೋದ್ ಮರವಂತೆ ಸಾಹಿತ್ಯ, ರು ನಿಡುವಳ್ಳಿ ಸಂಭಾಷಣೆ, ಹರ್ಷ ಕುಮಾರ್ ಗೌಡ ಛಾಯಾಗ್ರಹಣ, ಬಿ.ಎಸ್. ಕೆಂಪರಾಜ್ ಸಂಕಲನದಲ್ಲಿ ಸಿನಿಮಾ ಮೂಡಿಬರಲಿದೆ.
ಸ್ಪ್ಯಾನಿಶ್ನಲ್ಲೂ ಬರಲಿದೆ ಸಿನಿಮಾ
"ಡಿಯರ್ ಹಸ್ಬೆಂಡ್' ನಿರ್ದೇಶಕ ಗುರುರಾಜ ಕುಲಕರ್ಣಿ, 2017ರಲ್ಲಿ "ಲಾಸ್ಟ್ ಬಸ್' ಸಿನಿಮಾ ನಿರ್ಮಿಸಿದ್ದರು. ಆಗ ಆ ಚಿತ್ರವನ್ನು ಫ್ರೆಂಚ್ ಭಾಷೆಯಲ್ಲಿ ಡಬ್ ಮಾಡಿ ಫ್ರಾನ್ಸ್ನಲ್ಲಿ ಬಿಡುಗಡೆ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಇದೀಗ "ಡಿಯರ್ ಹಸ್ಬೆಂಡ್' ಸಮಯದಲ್ಲೂ ಅದೇ ರೀತಿಯ ಸಾಹಸಕ್ಕೆ ಮುಂದಾಗಿದ್ದಾರೆ. "ಕಳೆದ ಒಂದೂವರೆ ವರ್ಷಗಳಿಂದ ನಾವು ಕಾಣುತ್ತಿದ್ದ ಕನಸು, ಇದೀಗ ಸಿನಿಮಾ ಆಗಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಇದು ಇವತ್ತಿನ ಯುವಕರಿಗೆ ಇಷ್ಟವಾಗುವ, ನೋಡುಗರಿಗೆ ಹೊಸ ರೀತಿಯ ಅನುಭವ ನೀಡುವ ಚಿತ್ರವಾಗಲಿದೆ. ನಾನು ನಾಲ್ಕು ವರ್ಷ ಇಂಗ್ಲೆಂಡ್ನಲ್ಲಿದ್ದೆ. ಆ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನೇ ಡೆವೆಲಪ್ ಮಾಡಿ ಈ ಕಥೆ ಮಾಡಿಕೊಂಡೆ. ವಿಶ್ವಾದ್ಯಂತ ಯಾವುದೇ ನಗರದಲ್ಲಿ ನಡೆಯಬಹುದಾದ ಕಥೆಯಿದು. ಯೂನಿವರ್ಸಲ್ ಟೈಟಲ್ ಇರುವ ಕನ್ನಡದ ಜತೆ ಸ್ಪ್ಯಾನಿಶ್ನಲ್ಲೂ ಸಿನಿಮಾ ರಿಲೀಸ್ ಮಾಡಲಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ.
"ಡಿಯರ್ ಹಸ್ಬೆಂಡ್' ಇವತ್ತಿನ ಪೀಳಿಗೆಗೆ ಕನೆಕ್ಟ್ ಆಗುವಂತಹ ಯೂಥ್ಫುಲ್ ವಿಷಯವಿರುವ ಚಿತ್ರ. ನಾನಿಲ್ಲಿ ವಾಸಂತಿ ಎಂಬ ಪಾತ್ರದಲ್ಲಿ ನಟಿಸಲಿದ್ದೇನೆ. ಇಂತಹ ವಿಭಿನ್ನ ಕಥೆಗಳು ಕಲಾವಿದರಿಗೆ ಸಿಗುವುದು ಬಹಳ ಅಪರೂಪ. ಗುರುರಾಜ್ ಸರ್ಗೆ ಧನ್ಯವಾದಗಳು. ನನಗಂತೂ ಚಿತ್ರದ ಮೇಲೆ ತುಂಬ ನಿರೀೆ ಇದೆ.