ನಟ ದುಷ್ಯಂತ್ 
ಸ್ಯಾಂಡಲ್‌ವುಡ್

Actor Dushyanth : ಗತವೈಭವ ಬಳಿಕ ಹೊಸ ಕಥೆಗೆ ನಟ ದುಷ್ಯಂತ್ ಸಿದ್ಧತೆ

"ಗತವೈಭವ' ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದ ನಟ ದುಷ್ಯಂತ್​, ಚೊಚ್ಚಲ ಚಿತ್ರದಲ್ಲೇ ನಾಲ್ಕು ಶೇಡ್​ಗಳಲ್ಲಿ ಮಿಂಚಿದರು. ಹಾಗೇ ಸೈಮಾ ಸೇರಿ ಕೆಲ ಪ್ರಶಸ್ತಿಗಳನ್ನೂ ಗೆದ್ದು ಸೈ ಎನಿಸಿಕೊಂಡರು. "ಗತವೈಭವ' ತೆಲುಗು ರಿಲೀಸ್​, ಒಟಿಟಿ ಬಿಡುಗಡೆ ಬಳಿಕ ಕಳೆದ ಫೆಬ್ರವರಿಯಲ್ಲಿ ಮದುವೆಯಾದ ಅವರು, ಕಳೆದ ಆರು ತಿಂಗಳಿನಿಂದ ಹೊಸ ಕಥೆಗಳನ್ನು ಕೇಳುತ್ತಿದ್ದಾರಂತೆ.

ಬೆಂಗಳೂರು: "ಗತವೈಭವ' ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದ ನಟ ದುಷ್ಯಂತ್​, ಚೊಚ್ಚಲ ಚಿತ್ರದಲ್ಲೇ ನಾಲ್ಕು ಶೇಡ್​ಗಳಲ್ಲಿ ಮಿಂಚಿದರು. ಹಾಗೇ ಸೈಮಾ ಸೇರಿ ಕೆಲ ಪ್ರಶಸ್ತಿಗಳನ್ನೂ ಗೆದ್ದು ಸೈ ಎನಿಸಿಕೊಂಡರು. "ಗತವೈಭವ' ತೆಲುಗು ರಿಲೀಸ್​, ಒಟಿಟಿ ಬಿಡುಗಡೆ ಬಳಿಕ ಕಳೆದ ಫೆಬ್ರವರಿಯಲ್ಲಿ ಮದುವೆಯಾದ ಅವರು, ಕಳೆದ ಆರು ತಿಂಗಳಿನಿಂದ ಹೊಸ ಕಥೆಗಳನ್ನು ಕೇಳುತ್ತಿದ್ದಾರಂತೆ. ""ಗತವೈಭವ' ಕಮರ್ಷಿಯಲ್​ಆಗಿ ದೊಡ್ಡ ಮಟ್ಟದ ಸಕ್ಸಸ್​ ಆಗಲಿಲ್ಲ. ಆದರೆ, ಚಿತ್ರದ ಪ್ಲಸ್​ ಏನು? ಮೈನಸ್​ ಏನು? ಅಂತ ಅರ್ಥ ಮಾಡಿಕೊಳ್ಳಲು, ಇದ್ದಿಕೊಳ್ಳಲು ಸಹಾಯ ಮಾಡಿತು. ಜತೆಗೆ ನಟನಾಗಿ ನನ್ನನ್ನು ನಾನು ಪ್ರೂವ್​ ಮಾಡಿಕೊಳ್ಳಲು ಸಹಕಾರಿಯಾಯಿತು. ಮೊದಲ ಚಿತ್ರದಲ್ಲೇ ನಾಲ್ಕು ವಿವಿಧ ಶೇಡ್​ಗಳಲ್ಲಿ ನಟಿಸಿದೆ, ಅತ್ಯುತ್ತಮ ನಟ ಪ್ರಶಸ್ತಿಗಳೂ ದೊರೆತವು. ಜತೆಗೆ ಯಾವ ಪಾತ್ರ ಕೊಟ್ಟರೂ ಮಾಡಬಲ್ಲೆ ಅಂತ ಬರಹಗಾರರಿಗೆ, ನಿರ್ದೇಶಕರಿಗೆ ಅನ್ನಿಸಿತು. ಮೊದಲು ರಂಗಭೂಮಿ ಅನುಭವ, ಬೀದಿ ನಾಟಕ, ಕಿರುಚಿತ್ರ ತೋರಿಸಿ ಅವಕಾಶ ಕೇಳುತ್ತಿದ್ದೆ. ಈಗ ಅವಕಾಶಗಳೇ ನನ್ನ ಬಳಿ ಬರುತ್ತಿವೆ' ಎಂದು ಸಂತಸ ವ್ಯಕ್ತಪಡಿಸುತ್ತಾರೆ ದುಷ್ಯಂತ್​.

ಗತವೈಭವ ಚಿತ್ರದ ಪೋಸ್ಟರ್

104 ಕಥೆಗಳನ್ನು ಕೇಳಿದ್ದೇನೆ!

"ಗತವೈಭವ' ಬಳಿಕ ಹೊಸ ಹೊಸ ಕಥೆಗಳು ಬರುತ್ತಿರುವ ಬಗ್ಗೆ ದುಷ್ಯಂತ್​, "ಇದುವರೆಗೆ ಕನ್ನಡದಲ್ಲಿ 96 ಮತ್ತು ತೆಲುಗಿನಲ್ಲಿ ಎಂಟು ಕಥೆಗಳನ್ನು ಕೇಳಿದ್ದೇನೆ. ನಾಲ್ಕೆ$ದು ಸಿನಿಮಾಗಳ ಮೂಲಕ ಜನರಿಗೆ ಹತ್ತಿರವಾಗಬೇಕು, ಅವರಿಗೆ ನಮ್ಮ ಹುಡುಗ ಅಂತನ್ನಿಸಬೇಕು. ಸದ್ಯಕ್ಕೆ ಅಂತಹ ಕಥೆಗಳತ್ತ ಹೆಚ್ಚು ಗಮನ ಹರಿಸಿದ್ದೇನೆ. ಹೊಸಬರಷ್ಟೇ ಅಲ್ಲದೇ ಸ್ಟಾರ್​ಗಳಿಗೆ ನಿರ್ದೇಶನ ಮಾಡಿರುವ ದೊಡ್ಡ ಡೈರೆಕ್ಟರ್​ಗಳ ಬಳಿಯೂ ಕಥೆ ಕೇಳಿದ್ದೇನೆ. ಎಲ್ಲ ಕಥೆಗಳ ಡ್ರಾಫ್ಟ್​ ಮಾಡಿಟ್ಟುಕೊಂಡಿದ್ದೇನೆ. ಅವುಗಳಲ್ಲಿ ಎಂಟು ಸ್ಟೋರಿಗಳು ಇಷ್ಟವಾಗಿವೆ. ಅದರಲ್ಲಿ ಒಂದು ಸಿನಿಮಾ ಇದೇ ನವೆಂಬರ್​ ಅಂತ್ಯದಲ್ಲಿ ಸೆಟ್ಟೇರಲಿದೆ. ಇದು ಹಳ್ಳಿ ಸೊಗಡಿನ ಚಿತ್ರವಾಗಿದ್ದು, ಅಧಿಕೃತವಾಗಿ ಘೋಷಣೆಯಾದ ಬಳಿಕ ಹೆಚ್ಚಿನ ಮಾಹಿತಿ ನೀಡುತ್ತೇನೆ. ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಪಾತ್ರ, ಕಥೆ ವಿಭಿನ್ನವಾಗಿರಬೇಕು. ಹಾಗಂತ ನಾನು ಈಗಲೇ ಪೌರಾಣಿಕ ಅಥವಾ ರಾಜನ ಕಥೆ ಮಾಡಿದರೆ ಚೆನ್ನಾಗಿರಲ್ಲ. ಹೀಗಾಗಿಯೇ ಎರಡನೇ ಪ್ರಾಜೆಕ್ಟ್​ ಯಾವುದಾಗಿರಬೇಕು? ಮೂರನೇ ಸಿನಿಮಾ, ನಾಲ್ಕನೇ ಚಿತ್ರ ಹೇಗಿರಬೇಕು? ಹೀಗೆ 2027ರಿಂದ ವರ್ಷಕ್ಕೆರಡು ಸಿನಿಮಾ ಮಾಡಲು ಪ್ಲಾ$್ಯನ್​ ಮಾಡಿಕೊಂಡಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.

ನಟ ದುಷ್ಯಂತ್

ದೊಂಬಿ ನಡುವೆಯೇ ಯೂರೋಪ್​ ಪ್ರವಾಸ!

ಕಳೆದ ಫೆಬ್ರವರಿಯಲ್ಲಿ ರಚನಾ ಜತೆ ಸಪ್ತಪದಿ ತುಳಿದ ದುಷ್ಯಂತ್​ ಕೆಲ ದಿನಗಳ ಹಿಂದಷ್ಟೇ ಯೂರೋಪ್​ ಪ್ರವಾಸ ತೆರಳಿದ್ದರಂತೆ. ಆಗಷ್ಟೇ ಕೆಲವೆಡೆ ಪ್ರತಿಭಟನೆಗಳು ಪ್ರಾರಂಭವಾಗಿದ್ದು, ನವಜೋಡಿ ಸ್ವಲ್ಪದರಲ್ಲೇ ಪಾರಾಗಿದೆ. "20 ದಿನ ಯೂರೋಪ್​ಗೆ ತೆರಳಿದ್ದೆವು. ನಾವು ನಮ್ಮ ಪಾಡಿಗೆ ಪ್ಯಾರಿಸ್​, ಸ್ವಿರ್ಜಲೆಂಡ್​, ಇಟಲಿ, ಮಿಲಾನ್​ ಅಂತ ಸುತ್ತಾಡುತ್ತಿದ್ದೆವು. ನಾವು ಪ್ಯಾರಿಸ್​ನಿಂದ ಹೊರಟ ಒಂದೇ ದಿನದಲ್ಲಿ ನಾವು ಓಡಾಡಿದ್ದ ಜಾಗಗಳಲ್ಲೇ ದೊಡ್ಡ ಮಟ್ಟದ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದಿತ್ತು. ನಮಗಂತೂ ನೋಡಿ ಶಾಕ್​ ಆಯಿತು. ದೇವರ ಕೃಪೆ, ನಮಗೆ ಗೊತ್ತಿಲ್ಲದೆಯೇ ಸರಿಯಾದ ಸಮಯಕ್ಕೆ ಅಲ್ಲಿಂದ ವಾಪಸ್​ ಹೊರಟೆವು' ಎಂದು ಅನುಭವ ಬಿಚ್ಚಿಡುತ್ತಾರೆ ದುಷ್ಯಂತ್​.

ಪ್ಯಾರಿಸ್​ನಲ್ಲಿ ಪತ್ನಿ ರಚನಾ ಜತೆ ನಟ ದುಷ್ಯಂತ್