ಫಸ್ಟ್​ ಲವ್ ಗುರು ಚಿತ್ರತಂಡ 
ಸ್ಯಾಂಡಲ್‌ವುಡ್

ಫಸ್ಟ್​ ಲವ್​ ಗುರು ಚಿತ್ರದ ಫಸ್ಟ್​ ಸಾಂಗ್​ ಬಿಡುಗಡೆ

ವಿಶೇಷ ಅಂದರೆ ನಿರ್ದೇಶಕ ಗುರುಪ್ರಸಾದ್​ ಮತ್ತು ಸಂಗೀತ ನಿರ್ದೇಶಕ ಮನೋಜವಂ ಆತ್ರೇಯಗೂ ಫಸ್ಟ್​ ಲವ್ ಗುರು ಮೊದಲ ಚಿತ್ರ. ಸಿನಿಮಾ ಪತ್ರಕರ್ತ, ಪ್ರಚಾರಕರ್ತ ಕ ಪಿಚ್ಚರ್​ ಖ್ಯಾತಿಯ ಪ್ರವಿಣ್​ ಏಕಾಂತ "ಫಸ್ಟ್​ ಲವ್​ ಗುರು' ಆಡಿಯೋ ಹಕ್ಕುಗಳನ್ನು ಪಡೆದು ಕ ಮ್ಯೂಸಿಕ್​ ಮೂಲಕ ರಿಲೀಸ್​ ಮಾಡಿದ್ದಾರೆ.

ಬೆಂಗಳೂರು:

ಈ ಬಾರಿಯ ಕನ್ನಡ ರಾಜ್ಯೋತ್ಸವ ಚಿತ್ರರಂಗದಲ್ಲಿ ಹಲವು ಮೊದಲುಗಳಿಗೆ ಸಾಯಾಗಿದೆ. "ಫಸ್ಟ್​ ಲವ್​ ಗುರು' ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದ್ದು, ಕ ಮ್ಯೂಸಿಕ್​ ಮೂಲಕ ರಿಲೀಸ್​ ಆದ ಮೊದಲ ಆಡಿಯೋ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ವಿಶೇಷ ಅಂದರೆ ನಿರ್ದೇಶಕ ಗುರುಪ್ರಸಾದ್​ ಮತ್ತು ಸಂಗೀತ ನಿರ್ದೇಶಕ ಮನೋಜವಂ ಆತ್ರೇಯಗೂ ಇದು ಮೊದಲ ಚಿತ್ರ. ಸಿನಿಮಾ ಪತ್ರಕರ್ತ, ಪ್ರಚಾರಕರ್ತ ಕ ಪಿಚ್ಚರ್​ ಖ್ಯಾತಿಯ ಪ್ರವಿಣ್​ ಏಕಾಂತ "ಫಸ್ಟ್​ ಲವ್​ ಗುರು' ಆಡಿಯೋ ಹಕ್ಕುಗಳನ್ನು ಪಡೆದು ಕ ಮ್ಯೂಸಿಕ್​ ಮೂಲಕ ರಿಲೀಸ್​ ಮಾಡಿದ್ದಾರೆ.

ಪ್ರವೀಣ್ ಏಕಾಂತ ಜತೆ ಫಸ್ಟ್​ ಲವ್ ಗುರು ಚಿತ್ರತಂಡ

ಭಾನುವಾರ (ನ. 1) ನಾದಬ್ರಹ್ಮ ಹಂಸಲೇಖರ ಅಮೃತವಾಣಿಯೊಂದಿಗೆ, ಚಿತ್ರಸಾಹಿತಿ ಕವಿರಾಜ್​ ಕ ಮ್ಯೂಸಿಕ್​ ಆಡಿಯೋ ಲೇಬಲ್​ ಲಾಂಚ್​ ಮಾಡಿದರು. ಅವರಿಗೆ ನಿರ್ದೇಶಕ ಚೇತನ್​ ಕುಮಾರ್​ ಮತ್ತು ಚಿತ್ರಸಾಹಿತಿ ನಾಗಾರ್ಜುನ್​ ಶರ್ಮಾ ಜತೆಯಾದರು. ಇದೇ ಸಂದರ್ಭದಲ್ಲಿ "ಫಸ್ಟ್​ ಲವ್​ ಗುರು' ಮೊದಲ ಟೈಟಲ್​ ಸಾಂಗ್​ ರಿಲೀಸ್​ ಮಾಡಲಾಯಿತು. ಪ್ರಮೋದ್​ ಮರವಂತೆ ಸಾಹಿತ್ಯ, ವರುಣ್​ ರಾಮಚಂದ್ರ ಮತ್ತು ಸುರಭಿ ಧ್ವನಿಯಲ್ಲಿ ಹಾಡು ಮೂಡಿಬಂದಿದೆ. ಈ ರೊಮ್ಯಾಂಟಿಕ್​ ಸಾಂಗ್​ನಲ್ಲಿ ಯುದೀತ್​ ಶೆಟ್ಟಿ, ರಾಧ್ಯಾ ರಾಜ್​ ಹದಿಹರೆಯದ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದು, ಯುವಮನಸ್ಸುಗಳನ್ನು ಸೆಳೆಯುವಂತಿದೆ. ಯುದೀತ್​, ರಾಧ್ಯಾ ಜತೆ ಶೋಭರಾಜ್​, ಚಂದ್ರಕಲಾ ಮೋಹನ್​, ಭಾಗ್ಯಶ್ರೀ, ಮ್ಯಾಜಿಕ್​ ರಮೇಶ್​, ಶ್ರೀಧರ್​ ತಾರಾಗಣದಲ್ಲಿದ್ದಾರೆ. ಇದೇ 27ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ.