Ram Gopal Varma (ಚಿತ್ರ Instagram)
- 2026 ನೇ ಸಾಲಿನ ಬಾಲಿವುಡ್ನಲ್ಲಿ ತೆರೆ ಕಾಣಲಿವೆ ಧುರಂಧರ್ 2, ದಿ ರಿವೆಂಜ್ ಮತ್ತು ಟಾಕ್ಸಿಕ್!
- ಧುರಂಧರ್ 2 ಟೀಸರ್ ಬಗ್ಗೆ ಹೊಗಳಿದರೆ, ಟಾಕಿಕ್ಸ್ಗೆ ಕಷ್ಟವಾಗಬಹುದು ಎಂದಿದ್ದೇಕೆ ರಾಮ್ ಗೋಪಾಲ್ ವರ್ಮಾ
- ಧುರಂಧರ್ ಮುಂದೆ ಬರುವವರ ಬಗ್ಗೆ ನನಗೆ ವಿಷಾದವಿದೆ! ಯಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ್ರಾ ವರ್ಮಾ
Ram Gopal Varma: 2026 ನೇ ಸಾಲಿನ ಬಾಲಿವುಡ್ನಲ್ಲಿ ತೆರೆ ಕಾಣಲಿರುವ ಎರಡು ದೈತ್ಯ ಚಿತ್ರಗಳಾದ ಧುರಂಧರ್ 2: ದಿ ರಿವೆಂಜ್ ಮತ್ತು ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಬಗ್ಗೆ ಹಿರಿಯ ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಣವೀರ್ ಸಿಂಗ್ ಅವರ ಧುರಂಧರ್ 2 ಚಿತ್ರದ ಟೀಸರ್ ಮಂಗಳವಾರ (ಫೆ.03) ರಂದು ಬಿಡುಗಡೆಯಾದ ನಂತರ, ರಾಮ್ ಗೋಪಾಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಹಂಚಿಕೊಂಡಿದ್ದು, ಟೀಸರ್ ಬಗ್ಗೆ ಹೊಗಳಿದರೆ, ಟಾಕಿಕ್ಸ್ಗೆ ಕಷ್ಟವಾಗಬಹುದು ಎಂದು ಹೇಳಿಕೆ ನೀಡಿದ್ದು, ಇದು ಯಶ್ ಅವರ ಟಾಕ್ಸಿಕ್ ಚಿತ್ರದ ಬಗ್ಗೆ ಪರೋಕ್ಷವಾಗಿ ಟೀಕೆ ಮಾಡುತ್ತಿರುವುದಾಗಿ ಕಂಡುಬಂದಿದೆ.
ಪೋಸ್ಟ್ನಲ್ಲೇನಿದೆ?
ವರ್ಮಾ, ಧುರಂಧರ್ 2 ಟೀಸರ್ ಅನ್ನು ಮರು ಪೋಸ್ಟ್ ಮಾಡಿ, "ಇದು ರಿವೇಂಜ್ ಅಲ್ಲ, ಇದು ಆದಿತ್ಯ ಧರ್ ಅವರ RAMPAGE. ಇದರ ಹಾದಿಯಲ್ಲಿ ಅಡ್ಡ ಬರುವ ಚಿತ್ರಗಳ ಬಗ್ಗೆ ನನಗೆ ವಿಷಾದವಿದೆ.. RIP (ಆತ್ಮಕ್ಕೆ ಶಾಂತಿ ಸಿಗಲಿ) ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಅವರು ಟಾಕ್ಸಿಕ್ ಚಿತ್ರದ ಹೆಸರನ್ನು ಹೇಳದಿದ್ದರೂ, ಅವರ ಪ್ರತಿಕ್ರಿಯೆ ಯಶ್ ಅವರ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಬಗ್ಗೆಯೇ ಆಗಿರಬಹುದು ಎಂಬ ಕುತೂಹಲ ಹುಟ್ಟುಹಾಕಿದೆ. ಆದಾಗ್ಯೂ, ಈ ಚಿತ್ರವೂ ಕೂಡಾ ಧುರಂಧರ್ 2 ರಂತೆಯೇ ಮಾರ್ಚ್ 19, 2026 ರಂದು ಬಿಡುಗಡೆಯಾಗಲಿದ್ದು, ಟಾಕ್ಸಿಕ್ ಉದ್ದೇಶಿಸಿ ಆಡಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.
ಈ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತು. ನೆಟ್ಟಿಗರು ವರ್ಮಾ ಪರೋಕ್ಷವಾಗಿ ಟಾಕ್ಸಿಕ್ ಟೀಸರ್ ಮತ್ತು ಧುರಂಧರ್ 2 ರೊಂದಿಗೆ ಸ್ಪರ್ಧಿಸುವ ಸಾಮರ್ಥ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ ಬರೆದಿದ್ದಾರೆ. ಇನ್ನೂ ಕೆಲವು ಅಭಿಮಾನಿಗಳು "ನೇರವಾಗಿ ಬರೆಯಿರಿ... RIP ಟಾಕ್ಸಿಕ್" ಎಂದು ಕಾಮೆಂಟ್ ಮಾಡಿದ್ದಾರೆ.
ಎರಡು ಚಿತ್ರಗಳ ನಡುವಿನ ಘರ್ಷಣೆಯ ಬಗ್ಗೆ ವರ್ಮಾ ಸಾರ್ವಜನಿಕವಾಗಿ ಚರ್ಚಿಸುತ್ತಿರುವುದು ಇದೇನು ಮೊದಲಲ್ಲ. ಅವರು ಹಿಂದಿನ ಹೇಳಿಕೆಗಳು ಹೆಡ್-ಟು-ಹೆಡ್ ಬಿಡುಗಡೆಯ ಶೈಲಿಯನ್ನು ನೆಲಮಟ್ಟದ ಆಕ್ಷನ್ ಸಿನಿಮಾ ನಡುವಿನ ಸಾಂಕೇತಿಕ ಯುದ್ಧ ಎಂದು ರೂಪಿಸಿ, ಡ್ರುರಾಕ್ಸಿಕ್ ಎಂದು ಕರೆದಿದ್ದರು.
2025ರಲ್ಲಿ ತೆರೆಕಂಡು ಸಿನಿರಂಗದಲ್ಲಿ ಸಂಚಲನ ಮೂಡಿಸಿದ್ದ 'ಧುರಂಧರ್: ದಿ ರಿವೆಂಜ್' ಚಿತ್ರದ ಮುಂದುವರಿದ ಭಾಗವಾಗಿ 'ಧುರಂಧರ್ 2' ಸಿದ್ಧವಾಗುತ್ತಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತೊಮ್ಮೆ ತಮ್ಮ ಹಳೆಯ ಪಾತ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ.
ಇನ್ನೊಂದೆಡೆ, ಕೆಜಿಎಫ್ ನಂತರ ಯಶ್ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಯಶ್, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ನಯನತಾರಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ(ಏಜೆನ್ಸೀಸ್).