ಬ್ಲಡ್ ರೋಸಸ್ 
ಸ್ಯಾಂಡಲ್‌ವುಡ್

Blood Roses - ಟಾಲಿವುಡ್ ಡೆಬ್ಯೂನಲ್ಲಿ ಮಿಂಚುವ ಧರ್ಮ ಕೀರ್ತಿರಾಜ್​

ಅಂದಹಾಗೆ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿರುವ ಬ್ಲಡ್​ ರೋಸಸ್​ ಶೀರ್ಷಿಕೆಯೇ ಹೇಳುವಂತೆ ಕ್ರೈಮ್​ ಥ್ರಿಲ್ಲರ್, ಸಸ್ಪೆನ್ಸ್ ಜಾನರ್​ ಸಿನಿಮಾ. ಸಾಲು ಸಾಲು ಕೊಲೆಗಳ ಬೆನ್ನುಹತ್ತುವ ತನಿಖಾಧಿಕಾರಿ ಅರುಣ್ ಗೋಗೋಯ್, ಅನುಮಾನದ ಮೇಲೆ ರಾಜಕಾರಣಿ ದೇವಿದಾಸ್ ಪುತ್ರ ಮದನ್‌ನನ್ನು ಬಂಧಿಸುತ್ತಾನೆ. ಆದರೆ ರಾಜಕಾರಣಕ್ಕೆ ಬಲಿಯಾಗುವ ಅರುಣ್ ಸಸ್ಪೆಂಡ್ ಆಗುತ್ತಾನೆ. ನಂತರ ಈ ಪ್ರಕರಣ ಸಿಬಿಐಗೆ ಹೋಗುತ್ತದೆ. ಆಗ ಸಿಬಿಐ ಆಫೀಸರ್​ ಅಧಿರಾ ಎಂಟ್ರಿಯಾಗುತ್ತದೆ. ಆಕೆಯ ತನಿಖೆಯಲ್ಲಿ ಕೆಲ ಕುತೂಹಲಕಾರಿ ವಿಷಯಗಳು ಬಹಿರಂಗಗೊಳ್ಳುತ್ತವೆ. ಇಷ್ಟಕ್ಕೂ ಹತ್ಯೆಗಳನ್ನು ಮಾಡುತ್ತಿರುವವರು ಯಾರು? ಯಾವ ಕಾರಣಕ್ಕೆ ಎಂದು ಕೆದಕಲು ಹೋದಾಗ ಒಂದೊಂದೇ ಉಪಕಥೆಗಳು ತೆರೆದುಕೊಳ್ಳುತ್ತವೆ. ಕೊನೆಗೆ ಅಪರಾಧಿಯನ್ನು ಹಿಡಿಯಲು ಅಧಿರಾಗೆ ಅರುಣ್ ಗೋಗೋಯ್ ನೆರವಾಗುತ್ತಾನೆ. ಕೊಲೆಗಾರನನ್ನು ಈ ಜೋಡಿ ಹೇಗೆ ಮಟ್ಟ ಹಾಕುತ್ತದೆ ಬ್ಲಡ್​ ರೋಸಸ್​ ಸಿನಿಮಾ ನೋಡಿ.
ನಿರ್ದೇಶಕ ಎಂಜಿಆರ್ ಪ್ರೇಕ್ಷಕರಿಗೆ ಬೋರ್ ಆಗದಂತೆ ಕಥೆ ಕಟ್ಟಿಕೊಟ್ಟಿದ್ದಾರೆ. ಕನ್ನಡದ ಹುಡುಗ ಧರ್ಮ ಕೀರ್ತಿರಾಜ್ ಮೊದಲ ಬಾರಿ ಟಾಲಿವುಡ್‌ಗೆ ನಾಯಕನಾಗಿ ಪಾದಾರ್ಪಣೆ ಮಾಡಿರುವ ಕಾರಣ ಅವರ ಅಭಿಮಾನಿಗಳಿಗೆ ವಿಶೇಷ ಸಿನಿಮಾ. ಜತೆಗೆ ಅವರಿಲ್ಲಿ ಖಡಕ ಪೊಲೀಸ್ ಅಧಿಕಾರಿಯಾಗಿ ಮಾಸ್ ಲುಕ್​ನಲ್ಲಿ ಮಿಂಚಿದ್ದಾರೆ. ಅಧಿರಾ ಎಂಬ ಗಂಭೀರ್ ಸಿಬಿಐ ಆಫೀಸರ್​ ಪಾತ್ರದಲ್ಲಿ ಗ್ಲಾಮರಸ್​ ಅಪ್ಸರಾ ರಾಣಿ ಕೂಡ ಆ್ಯಕ್ಷನ್​ ಮಾಡಿದ್ದಾರೆ. ಇವರೊಂದಿಗೆ ಕ್ರಾಂತಿ ಕಿಲ್ಲಿ, ಹಿರಿಯ ನಟ ಸುಮನ್, ಘರ್ಷಣಾ ಶ್ರೀನಿವಾಸ್, ಟಾರ್ಜನ್, ರಾಜೇಂದ್ರ, ಜ್ಯೂ. ರೇಲಂಗಿ, ಜಗದೀಶ್ವರಿ, ಮಣಿಕುಮಾರ್, ಧ್ರುವ, ಅನಿಲ್, ಪ್ರಗ್ಯಾ, ನವಿತಾ, ವೈಷ್ಣವಿ, ಜಬರ್‌ದಸ್ತ್ ಜಿಎಂಆರ್, ಜಬರ್‌ದಸ್ತ್ ಬಾಬು, ಜಬರ್‌ದಸ್ತ್ ರಾಮು, ಈಟಿವಿ ಜೀವನ್, ಮಮತಾರೆಡ್ಡಿ ಮುಂತಾದವರು ತಮಗೆ ನೀಡಿದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.