ನಟಿ ಡೈಸಿ ಷಾ ಕೈ ಹಿಡಿದುಕೊಂಡ ನಿರ್ದೇಶಕ
- ದಕ್ಷಿಣ ಭಾರತದ ನಿರ್ದೇಶಕನ ದುವರ್ತನೆ
- ನಟಿ ಡೈಸಿ ಷಾ ಕೈ ಹಿಡಿದುಕೊಂಡ ನಿರ್ದೇಶಕ
- ಆಡಿಷನ್ಗೆ ಕರೆಸಿ ಅಡ್ವಾನ್ಟೆಜ್ ತೆಗೆದುಕೊಂಡ: ಡೈಸಿ
ಮುಂಬೈ: ಕನ್ನಡದ ಭದ್ರ ಮತ್ತು ಚಿಂಗಾರಿ ಸಿನಿಮಾದಲ್ಲಿ ನಟಿಸಿ ನಂತರ ಬಾಲಿವುಡ್ನಲ್ಲಿ ಖ್ಯಾತನಾಮ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ನಟಿ ಡೈಸಿ ಷಾ (Daisy Shah), ದಕ್ಷಿಣ ಭಾರತದ ಸಿನಿಮಾ ನಿರ್ದೇಶಕನೊಬ್ಬ ಅನುಚಿಯವಾಗಿ ವರ್ತಿಸಿದ ಬಗ್ಗೆ ಮೌನ ಮುರಿದ್ದಿದ್ದಾರೆ.
ಆತ ನನ್ನನ್ನು ಮುಟ್ಟಿದ
ನಟ ಸಲ್ಮಾನ್ ಖಾನ್ ಜೊತೆ ಜೈ ಹೋ ಸಿನಿಮಾ ಮೂಲಕ ಬಾಲಿವುಡ್ಗೆ ಪ್ರವೇಶ ಮಾಡಿದ ನಟಿ, ಡೈಸಿ ಷಾ ದಕ್ಷಿಣ ಭಾರತದ ಒಬ್ಬ ನಿರ್ದೇಶಕನಿಂದ ಉಂಟಾದ ಮುಜುಗರದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ಈ ಘಟನೆಯು ಮುಂಬೈನಲ್ಲಿಯೇ ನಡೆದಿತ್ತು. ಆಗ ದಕ್ಷಿಣದ ಒಂದು ಸಿನಿಮಾಗೆ ನಟಿಯ ಅಗತ್ಯವಿದೆ ಎಂದು ನಾನು ಆಡಿಷನ್ ಕೊಟ್ಟಿದ್ದೆ. ಆ ದಿನ ನನ್ನ ಜೊತೆ ಇನ್ನು 6-7 ಹುಡುಗಿಯರಿದ್ದರು. ಆಗ ಕೋಣೆಯ ಒಳಗೆ ಕರೆದ ನಿರ್ದೇಶಕ ನನ್ನ ಕೈಗಳನ್ನು ಹಿಡಿದುಕೊಂಡ, ಮತ್ತು ನನಗೆ ಅಸಹ್ಯ ಎನ್ನಿಸುವ ಹಾಗೆ ನನ್ನ ಜೊತೆ ನಡೆದುಕೊಂಡ.
ನನಗೆ ಯಾರು ನನ್ನನ್ನು ಮುಟ್ಟುವುದು ಇಷ್ಟವಾಗುವುದಿಲ್ಲ, ಅದು ಹೆಣ್ಣಾಗಿದ್ದರು ಅಷ್ಟೇ, ಗಂಡಾಗಿದ್ದರೂ ಅಷ್ಟೇ. ನನಗೆ ಇದರ ಬಗ್ಗೆ ಅಲರ್ಜಿ ಇದ್ದು ನಾನು ಮಸಾಜ್ ಸಹ ಮಾಡಿಸಿಕೊಳ್ಳುವುದಿಲ್ಲ ಎಂದು ಡೈಸಿ ಹೇಳಿದ್ದಾರೆ. ಆದರೆ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ ನಿರ್ದೇಶಕನ ಹೆಸರನ್ನು ಅವರು ಹೇಳಿಲ್ಲ.
ಯಾರು ಈ ಡೈಸಿ ಷಾ?
ಡೈಸಿ ಷಾ ಭಾರತೀಯ ಚಿತ್ರರಂಗದ ಪ್ರಮುಖ ನಟಿ, ಮಾಡೆಲ್ ಮತ್ತು ನೃತ್ಯ ಸಂಯೋಜಕಿಯಾಗಿದ್ದಾರೆ. ಡೈಸಿ ಷಾ 2011 ರಲ್ಲಿ ತೆರೆಕಂಡ ಕನ್ನಡದ ಸೂಪರ್ ಹಿಟ್ ಸಿನಿಮಾ 'ಭದ್ರ' ಮೂಲಕ ನಾಯಕ ನಟಿಯಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ಚಿಂಗಾರಿ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನೆಮಾತಾದರು.
ಕನ್ನಡದ ನಂತರ ಇವರು ಬಾಲಿವುಡ್‌ನತ್ತ ಮುಖ ಮಾಡಿ, ಸಲ್ಮಾನ್ ಖಾನ್ ಅಭಿನಯದ ಜೈ ಹೋ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಅದ್ಧೂರಿ ಪ್ರವೇಶ ಪಡೆದರು. ಇವರು ಹೇಟ್ ಸ್ಟೋರಿ 3 ಮತ್ತು ರೇಸ್ 3 ನಂತಹ ಚಿತ್ರಗಳಲ್ಲಿ ನಟಿಸಿದ್ದು, ನಟನೆಯ ಜೊತೆಗೆ ಉತ್ತಮ ಸಾಹಸ ಕೌಶಲ್ಯ ಮತ್ತು ನೃತ್ಯಕ್ಕೂ ಹೆಸರಾಗಿದ್ದಾರೆ. ರಿಯಾಲಿಟಿ ಶೋ ಖತ್ರೋನ್ ಕೆ ಕಿಲಾಡಿ ಸೀಸನ್ 13 ರಲ್ಲೂ ಸ್ಪರ್ಧಿಯಾಗಿ ಭಾಗವಹಿಸಿ ತಮ್ಮ ಸಾಹಸವನ್ನು ಪ್ರದರ್ಶಿಸಿದ್ದಾರೆ, (ಏಜನ್ಸೀಸ್).