ಲಂಬೋದರದ 2.0 ಚಿತ್ರತಂಡ 
ಸ್ಯಾಂಡಲ್‌ವುಡ್

Lambodara 2.0 - ಹಿಂದಿಯಲ್ಲೂ ಬರಲಿದೆ ಕನ್ನಡದ ಲಂಬೋದರ 2.0

ಸರಳ ಕಥೆಗಳ ಸರದಾರ ನಿರ್ದೇಶಕ ಸಿಂಪಲ್​ ಸುನಿ ಆ್ಯಕ್ಷನ್​-ಕಟ್​ ಹೇಳಿರುವ ಸೈನ್ಸ್​-ಫಿಕ್ಷನ್​ ಸೋಶಿಯಲ್​ ಥ್ರಿಲ್ಲರ್​ "ಲಂಬೋದರ 2.0' ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಇದೊಂದು ಸೈನ್ಸ್​&ಫಿಕ್ಷನ್​ ಚಿತ್ರವಾಗಿದ್ದು, "ಜಿಯಾ' ಎಂಬ ರೋಬಾಟ್​ ಅಭಿನಯಿಸಿರುವುದು ವಿಶೇಷ. ರಿಲೀಸ್​ ಸಿದ್ಧವಾಗಿರುವ ಸಿನಿಮಾದ ಬಗ್ಗೆ ಮತ್ತೊಂದು ಅಪ್​ಡೇಟ್​ ದೊರೆತಿದ್ದು, ಹಿಂದಿಯ "ಮಲಾಲ್​', "ರಾಮ್​ಸೇತು' ನಿರ್ಮಾಪಕ ಮಹಾವೀರ್​ ಜೈನ್​ ಕನ್ನಡದ "ಲಂಬೋದರ 2.0' ಚಿತ್ರಕ್ಕೆ ಸಾಥ್​ ನೀಡಿದ್ದಾರೆ.

ಬೆಂಗಳೂರು: ಸರಳ ಕಥೆಗಳ ಸರದಾರ ನಿರ್ದೇಶಕ ಸಿಂಪಲ್​ ಸುನಿ ಆ್ಯಕ್ಷನ್​&ಕಟ್​ ಹೇಳಿರುವ ಸೈನ್ಸ್​-ಫಿಕ್ಷನ್​ ಸೋಶಿಯಲ್​ ಥ್ರಿಲ್ಲರ್​ "ಲಂಬೋದರ 2.0' ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಈ ಚಿತ್ರದ ಮೂಲಕ ಯುವ ಉದ್ಯಮಿ ಅನಿಲ್​ ಶೆಟ್ಟಿ ನಾಯಕ ನಟನಾಗಿ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡುತ್ತಿದ್ದು, ಅವರಿಗೆ ಬಾಲಿವುಡ್​ ನಟಿ ಸಾಚಿ ಬಿಂದ್ರಾ ಜೋಡಿಯಾಗಿದ್ದಾರೆ. ಹಾಗೇ ಮತ್ತೊಬ್ಬ ಹಿಂದಿ ನಟಿ ಕುನಾಲ್​ ಕಪೂರ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದೊಂದು ಸೈನ್ಸ್​-ಫಿಕ್ಷನ್​ ಚಿತ್ರವಾಗಿದ್ದು, "ಜಿಯಾ' ಎಂಬ ರೋಬಾಟ್​ ಅಭಿನಯಿಸಿರುವುದು ವಿಶೇಷ. ರಿಲೀಸ್​ ಸಿದ್ಧವಾಗಿರುವ ಸಿನಿಮಾದ ಬಗ್ಗೆ ಮತ್ತೊಂದು ಅಪ್​ಡೇಟ್​ ದೊರೆತಿದ್ದು, ಹಿಂದಿಯ "ಮಲಾಲ್​', "ರಾಮ್​ಸೇತು' ನಿರ್ಮಾಪಕ ಮಹಾವೀರ್​ ಜೈನ್​ ಕನ್ನಡದ "ಲಂಬೋದರ 2.0' ಚಿತ್ರಕ್ಕೆ ಸಾಥ್​ ನೀಡಿದ್ದಾರೆ. ಕನ್ನಡದ ಜತೆಗೆ ಹಿಂದಿಯಲ್ಲೂ ಸಿನಿಮಾ ಪ್ರಸ್ತುತಪಡಿಸಲು ಮುಂದಾಗಿದ್ದಾರೆ. ನಿರ್ದೇಶಕ ಸುನಿ, ನಟ ಅನಿಲ್​ ಶೆಟ್ಟಿ ಇತ್ತೀಚೆಗೆ ಮಹಾವೀರ್​ ಜೈನ್​ರನ್ನು ಭೇಟಿಯಾಗಿ ಚಿತ್ರದ ಕಥೆ, ಮೇಕಿಂಗ್​ ಹಾಗೂ ಪರಿಕಲ್ಪನೆ ಬಗ್ಗೆ ವಿವರಿಸಿದ ಬಳಿಕ ಈ ಸಹಯೋಗ ಏರ್ಪಟ್ಟಿದೆ. ""ಲಂಬೋದರ 2.0' ಚಿತ್ರದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡಿರುವ ರೀತಿ ನೋಡಿ ನಾನು ನಾನು ಮಾರು ಹೋಗಿದ್ದೇನೆ. ಕನ್ನಡ ಚಿತ್ರರಂಗ ಇಂತಹ ಮಹತ್ವಾಕಾಂಕ್ಷೆಯ ಪ್ರಯೋಗಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ. ಆಧುನಿಕ ತಂತ್ರಜ್ಞಾನದಿಂದ ನಾವು ಹೆಚ್ಚು ಸಂತೋಷವಾಗುತ್ತಿದ್ದೇವೆಯೇ ಅಥವಾ ನಮ್ಮ ಸ್ವಂತ ಸಂತೋಷದ ಮೇಲಿನ ನಿಯಂತ್ರಣವನ್ನೇ ಕಳೆದುಕೊಳ್ಳುತ್ತಿದ್ದೇವೆಯೇ? ಎಂಬ ಗಂಭೀರ ಪ್ರಶ್ನೆಯನ್ನು ಈ ಚಿತ್ರ ಎತ್ತುತ್ತದೆ. ದೇಶಾದ್ಯಂತ ಪ್ರೇಕರನ್ನು ತಲುಪಲು ಈ ಸಿನಿಮಾ ಸಂಪೂರ್ಣ ಅರ್ಹವಾಗಿದೆ' ಎಂದು ಮಹಾವೀರ್​ ಜೈನ್​ ಹೇಳಿದ್ದಾರೆ. ಅನಿಲ್​ ಶೆಟ್ಟಿ, ಸಾಚಿ ಬಿಂದ್ರಾ, ಕುನಾಲ್​ ಕಪೂರ್​ ಜತೆ ಮೇನಾ ಗಾಂವ್ಕರ್​ ಮತ್ತು ಮ್ಯಾಕ್​ ಡಿ'ಸೋಜಾ ಕಲಾ ಬಳಗದಲ್ಲಿದ್ದಾರೆ. ನವೆಂಬರ್​ 20ರಂದು ಕನ್ನಡ ಹಾಗೂ ಹಿಂದಿಯಲ್ಲಿ "ಲಂಬೋದರ 2.0' ಚಿತ್ರ ತೆರೆಗೆ ಬರಲಿದೆ.

ಶ್ರೀ ರವಿಶಂಕರ್ ಗುರೂಜಿ ಜತೆ ನಟ ವಿಕ್ರಾಂತ್ ಮಸ್ಸೆ

ಶಾಂತಿ ಸಾರುವ ಮಹಾವೀರ

"ದೇಖ್​ ಇಂಡಿಯನ್​ ಸರ್ಕಸ್​' (2011) ಮಕ್ಕಳ ಸಿನಿಮಾ, "ಚಲೋ ಜೀತೇ ಹೈ' (2018) ಕಿರುಚಿತ್ರಗಳ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕ ಮಹಾವೀರ್​ ಜೈನ್​ ಇದೀಗ "ಲಂಬೋದರ 2.0' ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿರುವುದು ವಿಶೇಷ. ಕೆಲ ತಿಂಗಳ ಹಿಂದಷ್ಟೇ ಅವರು ಆರ್ಟ್​ ಆಫ್​ ಲಿವಿಂಗ್​ನ ಶ್ರೀ ರವಿಶಂಕರ್​ ಗುರೂಜಿ ಜೀವನಾಧಾರಿತ "ವೈಟ್​' ಚಿತ್ರವನ್ನು ಘೋಷಿಸಿದ್ದು, ವಿಕ್ರಾಂತ್​ ಮಸ್ಸೆ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ. ಹಾಗೇ "ಯೇ ಪ್ರೇಮ್​ ಮೋಹ್​ ಲಿಯಾ', "ನಾಗ್​ಜಿಲ್ಲಾ', "ಸೈಡ್​ ಹೀರೋಸ್​', "ರಾಮ್​ಬೋಲಾ' ಸಿನಿಮಾಗಳು ನಿರ್ಮಾಣದ ವಿವಿಧ ಹಂತದಲ್ಲಿವೆ.