ನಿರೂಪಕಿ ಜಾಹ್ನವಿ ಜೆಡಿಎಸ್ ಸೇರ್ಪಡೆಯಾಗಿರುವುದು.
ಬೆಂಗಳೂರು: ಸುದ್ದಿವಾಹಿನಿಗಳಲ್ಲಿ ನಿರೂಪಕಿಯಾಗಿ, ಟಿವಿ ಶೋ, ರಿಯಾಲಿಟಿ ಶೋ, ಸಿನಿಮಾಗಳ ಮೂಲಕ ಗುರುತಿಸಿಕೊಂಡು ಕಳೆದ ಸೀಸನ್ ಬಿಗ್ಬಾಸ್ನಲ್ಲಿ ಭಾಗವಹಿಸಿದ್ದ ನಿರೂಪಕಿ ಜಾಹ್ನವಿ ಇಂದು (ಮೇ 24) ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ.
ಜೆಪಿಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಹ್ನವಿ ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರಿಕೊಂಡಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಧ್ವಜ ನೀಡಿ ಸ್ವಾಗತ ಮಾಡಿದ್ದಾರೆ. ಈ ವೇಳೆ ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಶೈಲಜಾ ರಾವ್ ಉಪಸ್ಥಿತರಿದ್ದರು.
ಸುದ್ದಿ ವಾಹನಿಯ ನಿರೂಪಕಿಯಾಗಿದ್ದ ಜಾಹ್ನವಿ ಬಳಿಕ ಗಿಚ್ಚಿ ಗಿಲಿ ಸೇರಿದಂತೆ ಹಲವು ಟಿವಿ ಶೋ ಗಳ ಮೂಲಕ ಮನರಂಜನಾ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದರು. ಕಳೆದ ಸೀಸನ್ ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದ ಅವರು 50ಕ್ಕೂ ಹೆಚ್ಚು ದಿನ ಇದ್ದರು. ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ.
ಮುಂಬರುವ ಗ್ರೇಟರ್ ಬೆಂಗಳೂರು ಚುನಾವಣೆ ಮತ್ತು ಸ್ಥಳೀಯ ಚುನಾವಣೆ ಮೇಲೆ ಕಣ್ಣಿಟ್ಟೀರುವ ಜೆಡಿಎಸ್ ಯುವ ಸಮುದಾಯದವನ್ನು ಸೆಳೆಯುವ ಚಿತ್ತ ಹರಿಸಿದೆ. ಅದರ ಭಾಗವಾಗಿಯೇ ಯುವಜನರನ್ನು ಸೆಳೆಯಲು ಜಾಹ್ನವಿಯವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ ಎನ್ನಲಾಗಿದೆ.