ವನ್ಯ ಚಿತ್ರದ ದೃಶ್ಯ 
ಸ್ಯಾಂಡಲ್‌ವುಡ್

ಬೆಂಗಳೂರು ಫಿಲಂ ಫೆಸ್ಟಿವಲ್ ಪ್ರಶಸ್ತಿ ಪಡೆದ ಸಿನಿಮಾಗಳ ಪಟ್ಟಿ ಇಲ್ಲಿದೆ: ಕನ್ನಡದ ವನ್ಯ ಅತ್ಯುತ್ತಮ ಸಿನಿಮಾ

ಶಿವಮಲ್ಲಯ್ಯ ಸ್ಥಾವರಮಠ

ಪ್ರಮುಖ ಮುಖ್ಯಾಂಶಗಳು

  • ಪ್ರಥಮ ಸ್ಥಾನಕ್ಕೆ 10 ಲಕ್ಷ ರೂ. ನಗದು ಹಾಗೂ ಬಹುಮಾನ
  • ಮೂರು ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ
  • ಭಾರತೀಯ ವಿಭಾಗದಲ್ಲಿ ಸೋಬರ್ ಬೊಂದಾಗೆ ಪ್ರಶಸ್ತಿಯ ಗರಿಮೆ
ಬೆಂಗಳೂರು : ಕಳೆದ ಎಂಟು ದಿನಗಳಿಂದ ನಡೆಯುತ್ತಿದ್ದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಶುಕ್ರವಾರಕ್ಕೆ ಸಂಪನ್ನಗೊಂಡಿತು. ದೇವೇಂದ್ರ ಬಡಿಗೇರ್ ನಿರ್ದೇಶನದ ‘ವನ್ಯ’ ಚಿತ್ರವು ಕನ್ನಡದ ಅತ್ಯುತ್ತಮ ಸಿನಿಮಾ ಆಗಿ ಹೊರಹೊಮ್ಮಿತು. ಪ್ರತಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸಿನಿಮಾಗೆ 10 ಲಕ್ಷ ರೂ., ದ್ವಿತೀಯ 5 ಲಕ್ಷ ರೂ. ಹಾಗೂ ತೃತೀಯ ಸ್ಥಾನಕ್ಕೆ 2 ಲಕ್ಷ ರೂ. ನೀಡಲಾಯಿತು.

ಪ್ರಶಸ್ತಿ ವಿಜೇತ ಸಿನಿಮಾಗಳು

ಕನ್ನಡ ಸ್ಪರ್ಧಾ ವಿಭಾಗ
ಪ್ರಥಮ ಸ್ಥಾನ: ವನ್ಯಾ (ನಿ: ದೇವೇಂದ್ರ ಬಡಿಗೇರ್)
ದ್ವಿತೀಯ: ನಮ್ ಸಾಲಿ (ಅರುಣ್ ಕುಮಾರ್)
ತೃತೀಯ: ರಾವಣರಾಜ್ಯದಲ್ಲಿ ನವದಂಪತಿಗಳು (ರಂಗ)
ನೆಟ್‌ಪ್ಯಾಕ್ ಜೂರಿ ಅವಾರ್ಡ್: ಹಕ್ಕಿಗಾಗಿ (ಗಾರ್ಗಿಕರೇಹೈಕ್ಳು)
ಜ್ಯೂರಿ ವಿಶೇಷ ಮನ್ನಣೆ ಪ್ರಶಸ್ತಿ: ಮೃಗತೃಷ್ಣ (ಅಜಯ್ ಗುರುನಾಥ)
ಜ್ಯೂರಿ ವಿಶೇಷ ಮನ್ನಣೆ ಪ್ರಶಸ್ತಿ: 4 ಬೈ 4 (ತೃಪ್ತಿ, ಮೇಘನಾ, ಚೈತ್ರಾ, ಪೂಜಿತಾ
ಭಾರತೀಯ ಸಿನಿಮಾ
ಪ್ರಥಮ ಸ್ಥಾನ: ಸಬರ್ ಬೊಂದಾ (ಮರಾಠಿ)
ದ್ವಿತೀಯ: ಮೋಹಂ (ಮಲಯಾಳಂ)
ತೃತೀಯ: ಕಾಡು (ಮಲಯಾಳಂ)
ವಿಮರ್ಶಕರ ಮೆಚ್ಚುಗೆ ಪಡೆದ ಸಿನಿಮಾ: ಗೋಂಧಲ್ (ಮರಾಠಿ)
ಜ್ಯೂರಿ ವಿಶೇಷ ಮನ್ನಣೆ ಪಡೆದ ಸಿನಿಮಾ: ಸರ್ಕೀಟ್ (ಮಲಯಾಳಂ)
ಏಷ್ಯನ್ ವಿಭಾಗ
ಪ್ರಥಮ: ಲಾಸ್ಟ್ ಲ್ಯಾಂಡ್ (ಜಪಾನ್)
ದ್ವಿತೀಯ: ಶೇಪ್ ಆಫ್​ ಮೊಮೊ (ಭಾರತ)
ತೃತೀಯ: ದ ಡೀಪೆಸ್ಟ್ ಇನ್ ಅಸ್ (ಜಪಾನ್)
"

ಚಿತ್ರರಂಗದ ಅನುಭವಿ ಹಾಗೂ ನುರಿತವರೇ ನಿರ್ಣಾಯಕರಾಗಿದ್ದರು. ಅವರಿಂದ ಪ್ರಶಸ್ತಿ ಪಡೆದಿರುವುದೇ ನಮ್ಮ ಸಿನಿಮಾದ ಶಕ್ತಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಲಿದ್ದೇವೆ. ಬೇಸಿಗೆ ರಜೆಯಲ್ಲಿ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ. ಕಾಡು-ನಾಡಿನ ದ್ವಂದ್ವ, ತಾಯಿ-ಮಗಳ ಪ್ರೀತಿಯನ್ನು ನಮ್ಮ ಸಿನಿಮಾದಲ್ಲಿ ಕಾಣಬಹುದು.