ಬೇಲ್​ 
ಸ್ಯಾಂಡಲ್‌ವುಡ್

Bail Movie -ಶಿವಣ್ಣ, ಪವನ್​ ಒಡೆಯರ್ ಚಿತ್ರಕ್ಕೆ ಬೇಲ್​ ಟೈಟಲ್​ ಫಿಕ್ಸ್​

Bail Movie -
ನಿರ್ಮಾಪಕ ವೆಂಕಟ್​ ಕೆ. ನಾರಾಯಣ್​ ಅವರ ಕೆವಿಎನ್​ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಸದ್ಯ ಮೂರು ನಿರೀತ ಚಿತ್ರಗಳು ರೆಡಿಯಾಗುತ್ತಿವೆ. ಅದರಲ್ಲೊಂದು ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ "ಕೆಡಿ & ದ ಡೆವಿಲ್​'. ಮತ್ತೊಂದು ತಮಿಳು ನಟ ವಿಜಯ್​ ನಟಿಸಿರುವ "ಜನನಾಯಗನ್​' ಹಾಗೂ ಇನ್ನೊಂದು ಗೀತು ಮೋಹನದಾಸ್​ ನಿರ್ದೇಶನದಲ್ಲಿ ಯಶ್​ ನಟಿಸುತ್ತಿರುವ ಪ್ಯಾನ್​ ವರ್ಲ್ಡ್​ "ಟಾಕ್ಸಿಕ್​'. ಈ ಮೂರು ಚಿತ್ರಗಳಿಂದ ಬರೋಬ್ಬರಿ <1000 ಕೋಟಿ ಹಣ ಪಣದಲ್ಲಿದೆ ಎನ್ನಲಾಗಿದೆ. ಜತೆಗೆ ಮೂರು ಚಿತ್ರಗಳ ಬಿಡುಗಡೆಯಗೂ ವಿವಿಧ ಕಾರಣಗಳಿಂದ ತಡವಾಗಿರುವ ಕಾರಣ, ನಿರ್ಮಾಣ ಸಂಸ್ಥೆಗೂ ತಲೆಬಿಸಿಯಾಗಿತ್ತು. ಆದರೆ, ಇದೀಗ "ಕೆಡಿ' ಇದೇ ಗುರುವಾರ (ಏ.30) ತೆರೆಗೆ ಬರಲಿದ್ದು, ಅದರ ನಡುವೆಯೇ ಕೆವಿಎನ್​ ಸಂಸ್ಥೆ ನಿರ್ಮಿಸುತ್ತಿರುವ ನಾಲ್ಕನೇ ಸಿನಿಮಾ ಅಪ್​ಡೇಟ್​ ದೊರೆತಿದೆ. ಹೌದು, ಕಳೆದ ಆಗಸ್ಟ್​ನಲ್ಲಿ ಶಿವರಾಜಕುಮಾರ್​ ಮತ್ತು ಪವನ್​ ಒಡೆಯರ್​ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಮುಹೂರ್ತ ನೆರವೇರಿತ್ತು. ಅದಕ್ಕೆ "ಬೇಲ್​' ಎಂದು ಟೈಟಲ್​ ಫಿಕ್ಸ್​ ಎಂಬ ಸುದ್ದಿ ಗಾಂಧಿನಗರದಲ್ಲಿ ಗರಿಬಿಚ್ಚಿತ್ತಾದರೂ, ಚಿತ್ರತಂಡ ಅಧಿಕೃತವಾಗಿ ಘೋಷಿಸಿರಲಿಲ್ಲ. ಇದೀಗ ಡಾ. ರಾಜಕುಮಾರ್​ ಅವರ 97ನೇ ಜಯಂತಿಯಂದು ಟೈಟಲ್​ ಜತೆಗೆ ಶಿವರಾಜಕುಮಾರ್​ ಲುಕ್​ ಕೂಡ ರಿವೀಲ್​ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಕೆವಿಎನ್​ ಪ್ರೊಡಕ್ಷನ್ಸ್​, ಶಿವರಾಜಕುಮಾರ್​ ಮತ್ತು ಪವನ್​ ಒಡೆಯರ್​ ಕೈಜೋಡಿಸಿದ್ದು, "ಬೇಲ್​' ಬಗ್ಗೆ ಕುತೂಹಲ ಹೆಚ್ಚಿಸಿದೆ. ನಿರ್ಮಾಪಕ ವೆಂಕಟ್​ ಕೆ. ನಾರಾಯಣ್​, ""ಬೇಲ್​' ನಮಗೆ ಬಹಳ ವಿಶೇಷವಾದ ಯೋಜನೆ. ಪವನ್​ ಒಡೆಯರ್​ ಅವರಂತಹ ಉತ್ತಮ ನಿರ್ದೇಶಕರ ಜತೆ ಕೈಜೋಡಿಸುವುದು, ಶಿವಣ್ಣ ಅವರಂತಹ ಐಕಾನ್​ ಜತೆ ಕೆಲಸ ಮಾಡುವುದು ನಮ್ಮ ಗೌರವ' ಎನ್ನುತ್ತಾರೆ.
ಕೋಟ್​:
"ಬೇಲ್​' ನನಗೂ ಮತ್ತು ಕೆವಿಎನ್​ ನಿರ್ಮಾಣ ಸಂಸ್ಥೆಗೂ ಅತ್ಯಂತ ವಿಶೇಷ ಚಿತ್ರವಾಗಲಿದೆ. ಪ್ರೇಕ್ಷಕರಿಗಾಗಿ ಹಲವು ಸರ್​ಪೆಸ್​ಗಳಿವೆ. ಅತಿ ಶ್ರೀದಲ್ಲೇ ಟೀಸರ್​ ಬಿಡುಗಡೆ ಮಾಡಲಿದ್ದೇವೆ. ಶಿವಣ್ಣ ಜತೆ ಕೆಲಸ ಮಾಡುವುದು ನನ್ನ ಬಹುದಿನಗಳ ಕನಸಾಗಿತ್ತು. ಇದೀಗ ಆ ಕನಸು ನನಸಾಗಿದೆ. ಅವರನ್ನು ತೆರೆಯ ಮೇಲೆ ಹಿಂದೆಂದೂ ನೋಡಿರದ ರೀತಿಯಲ್ಲಿ ಪ್ರೆಸೆಂಟ್​ ಮಾಡುತ್ತಿರುವುದು ನನಗೆ ತುಂಬ ಸಂತೋಷ ನೀಡಿದೆ.
- ಪವನ್​ ಒಡೆಯರ್​, ನಿರ್ದೇಶಕ.