ಸಪ್ತಮಿ ಗೌಡ, ಸತೀಶ್ ನೀನಾಸಂ 
ಸ್ಯಾಂಡಲ್‌ವುಡ್

ಅಶೋಕನ ಹಾಡಿಗೆ ಕುಣಿದ ಪ್ರೇಕ್ಷಕರು!: ಸತೀಶ್ ನೀನಾಸಂ, ಸಪ್ತಮಿ ಗೌಡ ಹೆಜ್ಜೆ ಹಾಕಿದ ‘ಯಾಕೋ ಯಾಕೋ’ ಸಾಂಗ್ ವೈರಲ್

ಪ್ರಮುಖ ಮುಖ್ಯಾಂಶಗಳು

  • ದ ರೈಸ್ ಆಫ್ ಅಶೋಕ ಚಿತ್ರದ ಯಾಕೋ ಯಾಕೋ ಸಾಂಗ್ ವೈರಲ್
  • 10 ದಿನದಲ್ಲಿ 5 ಲಕ್ಷಕ್ಕೂ ಅಧಿಕ ವೀಕ್ಷಣೆ
  • ಕನ್ನಡ. ತೆಲುಗು, ತಮಿಳಿನಲ್ಲಿ ಸಾಂಗ್ ರಿಲೀಸ್
ಬೆಂಗಳೂರು: ‘ಮ್ಯಾಟ್ನಿ’ ಬಳಿಕ ಸತೀಶ್ ನೀನಾಸಂ ಅಭಿನಯಿಸಿರುವ ಚಿತ್ರ ‘ದ ರೈಸ್ ಆ್ ಅಶೋಕ’. ಇಲ್ಲಿ ಅವರಿಗೆ ಸಪ್ತಮಿ ಗೌಡ ಜೋಡಿಯಾಗಿದ್ದಾರೆ. ಈಗಾಗಲೇ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡವು ಪ್ರಚಾರಕ್ಕೆ ಧುಮುಕಿದೆ. ಫೆಬ್ರವರಿಯಲ್ಲಿ ಸಿನಿಮಾ ರಿಲೀಸ್‌ಗೆ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡವು ಈಗಾಗಲೇ ‘ಏಳೋ ಮಾದೇವ’ ಹಾಗೂ ‘ಯಾಕೋ ಯಾಕೋ’ ಎಂಬ ಸಾಂಗ್‌ಗಳನ್ನು ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆ ಮಾಡಿದೆ. ಅದರಲ್ಲಿ ರೊಮ್ಯಾಂಟಿಕ್ ‘ಯಾಕೋ ಯಾಕೋ’ ಸಾಂಗ್ ವೈರಲ್ ಆಗಿದ್ದು, ಹೆಚ್ಚು ರೀಲ್ಸ್ ಕಂಡಿದೆ. ಕನ್ನಡದಲ್ಲಿ 20 ಲಕ್ಷ, ತೆಲುಗು ಹಾಗೂ ತಮಿಳಿನಲ್ಲಿ ತಲಾ 10ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ‘ಯಾಕೋ ಯಾಕೋ’ ಹಾಡಿಗೆ ಪೂರ್ಣಚಂದ್ರ ತೇಜಸ್ವಿ ರಚಿಸಿ, ಸಂಗೀತ ನೀಡಿದ್ದು, ಪಂಚಮ್ ಜೀವ ಹಾಗೂ ಪೃಥ್ವಿ ಭಟ್ ಧ್ವನಿಯಾಗಿದ್ದಾರೆ. ಸತೀಶ್, ಸಪ್ತಮಿ ಕುಣಿದು ಕುಪ್ಪಳಿಸಿದ್ದಾರೆ. ‘ಕನ್ನಡದಲ್ಲಿ ಮೆಲೋಡಿ ಸಾಂಗ್ ಕೇಳದೆ ತುಂಬಾ ದಿನ ಆಗಿತ್ತು. ಆ ಸ್ಥಾನ ತುಂಬಿದ ‘ಯಾಕೋ ಯಾಕೋ’ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಷ್ಟೇ ಚೆಂದವಾಗಿ ದೃಶ್ಯದ ಮೂಲಕ ಸೆರೆಹಿಡಿದಿದ್ದಾರೆ. ಈ ಹಾಡಿನಲ್ಲಿ ಶಹನಾಹಿ ವಾದ್ಯವೇ ಹೈಲೈಟ್. ಧಾರವಾಡದ ಶಹನಾಹಿ ವಾದಕ ರುದ್ರೇಶ್ ‘ಮುಖರಿ ರಾಗ’ ನುಡಿಸಿದ್ದು, ಚೆನ್ನಾಗಿ ಮೂಡಿಬಂದಿದೆ. ಇದೇ ಹಾಡಿನ ಮೂಲಕವೇ ಚಿತ್ರದ ಕಥೆ ಸಾಗುತ್ತದೆ. ಇಲ್ಲಿ ಶಹನಾಹಿ ಕೇವಲ ವಾದ್ಯವಾಗಿಲ್ಲ, ಅದೊಂದು ಪಾತ್ರವಾಗಿದೆ. ಸಂತೋಷದ ಪರಾಕಾಷ್ಠೆ ಹಾಗೂ ಭಾವನಾತ್ಮಕ ಅಂಶಗಳು ಈ ಹಾಡಿನಲ್ಲಿವೆ’ ಎಂದು ಹಾಡಿನ ಬಗ್ಗೆ ಪೂರ್ಣಚಂದ್ರ ತೇಜಸ್ವಿ ಹಂಚಿಕೊಂಡರು.