- ಮಾ.19ಕ್ಕೆ ಯಶ್ 'ಟಾಕ್ಸಿಕ್' ತೆರೆಗೆ ಬರಲು ಸಿದ್ಧ
- ಈಗಾಗಲೇ ಟೀಸರ್ನಿಂದ ಭಾರೀ ವಿವಾದ, ಟೀಕೆಗಳಿಗೆ ಗುರಿ
- ರಿಲೀಸ್ಗೂ ಮೊದಲೇ ಚಿತ್ರದ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ ಪ್ರಶಾಂತ್ ಕಿನಿ
ಬೆಂಗಳೂರು: ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್, ನಟ ಯಶ್ ಅಭಿನಯದ ಹಾಗೂ ಮಾಲಿವುಡ್ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' (Toxic) ಚಿತ್ರದ ಹವಾ ಸದ್ಯ ಭಾರತೀಯ ಚಿತ್ರೋದ್ಯಮದಲ್ಲಿ ಜೋರಾಗಿದೆ. ಈಗಾಗಲೇ ಸಿನಿಮಾದ ಟೀಸರ್ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಆದ ವಿವಾದಗಳು ಒಂದೆರೆಡಲ್ಲ. ಚಿತ್ರದಲ್ಲಿ ಒಂದಷ್ಟು ಹಸಿಬಿಸಿ ದೃಶ್ಯಗಳನ್ನು ತೋರಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೂಡ ಕೇಳಿಬಂದಿವೆ.
ಟೀಸರ್ನಲ್ಲಿ ತೋರಿಸಲಾದ ಹಸಿಬಿಸಿ ದೃಶ್ಯಗಳು ವ್ಯಾಪಕ ಟೀಕೆ, ಅಸಮಾಧಾನಕ್ಕೆ ಗುರಿಯಾಗಿದೆ. ಈ ನಿಟ್ಟನಲ್ಲಿ, ಹಲವರು ಸಿನಿಮಾ ಹೇಗಿರಬಹುದು ಎಂಬುದನ್ನು ತಮಗೆ ಅನಿಸಿದಂತೆ ಹೇಳಲಾರಂಭಿಸಿದ್ದಾರೆ. ಕೆಲವರು ಟೀಸರ್ನಲ್ಲಿದ್ದ ದೃಶ್ಯ ಕಂಡು ಚಿತ್ರವನ್ನು ಹಾಲಿವುಡ್ ಲೆವೆಲ್ಗೆ ಮಾಡಲಾಗಿದೆ. ಅಲ್ಲಿ ತೋರಿಸುವಂತೆಯೇ ಕೆಟ್ಟ ಸೀನ್ಗಳನ್ನು ಇಲ್ಲಿಯೂ ತೋರಿಸಿದ್ದಾರೆ ಎಂದೆಲ್ಲ ಅಭಿಪ್ರಾಯಿಸಿದ್ದಾರೆ. ಸಿನಿಮಾದ ಬಿಡುಗಡೆಗೂ ಮೊದಲೇ ಸಾಕಷ್ಟು ನೆಗೆಟಿವ್ ಕಮೆಂಟ್ಸ್ ಕೇಳಿಬಂದಿರುವುದು ಚಿತ್ರದ ಯಶಸ್ಸಿನ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗಳು ಮೂಡಿವೆ.
ಇನ್ನೊಂದು 'ಕೆಜಿಎಫ್'?
ಮಾ.19ಕ್ಕೆ ಯಶ್ 'ಟಾಕ್ಸಿಕ್' ತೆರೆಗೆ ಬರಲು ಸಿದ್ಧವಾಗಿದ್ದು, ನಟನ ಅಭಿಮಾನಿಗಳು ಹಾಗೂ ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಕೆರಳಿದೆ. ಮತ್ತೊಂದೆಡೆ, ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಎಂಬಂತೆ ತಮ್ಮ ಭವಿಷ್ಯ ನುಡಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಜ್ಯೋತಿಷಿ ಪ್ರಶಾಂತ್ ಕಿನಿ, ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಇನ್ನೊಂದು 'ಕೆಜಿಆಫ್' ಆಗುವುದಿಲ್ಲ ಎಂದಿದ್ದಾರೆ. ಇದಕ್ಕೆ ಕಾರಣ ಕೂಡ ತಿಳಿಸಿದ್ದಾರೆ.
'ಟಾಕ್ಸಿಕ್' ಭವಿಷ್ಯ
ಕೆಜಿಎಫ್ ಮುಂದಿಟ್ಟು ಮಾಡಿದ್ದ ವ್ಯಕ್ತಿಯೊಬ್ಬರ ಟ್ವೀಟ್ ಮೇಲೆ ಭವಿಷ್ಯ ನುಡಿದ ಕಿನಿ, 'ಟಾಕ್ಸಿಕ್' ಇನ್ನೊಂದು 'ಕೆಜಿಆಫ್' ಆಗುವುದಿಲ್ಲ. ವಿತರಕರು, ಯಶ್ ಅವರ ಕ್ರೆಡಿಬಲಿಟಿ, ಬಿಗ್ ಬಜೆಟ್, ವಿಲಕ್ಷಣ, ವಯಸ್ಕರ ಕಂಟೆಂಟ್, ಭವ್ಯತೆ, ಸ್ಟಾರ್ಡಮ್ ಸಕ್ಸಸ್ ಅನ್ನು ಗ್ಯಾರಂಟಿ ಮಾಡೋದಿಲ್ಲ ಎಂದು ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ. ಹಲವರು ಇದಕ್ಕೆ ಕಮೆಂಟ್ ಮಾಡಿದ್ದು, ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
2026ರ ಮಾರ್ಚ್ 19ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ಗೆ ಸಜ್ಜಾಗಿರುವ 'ಟಾಕ್ಸಿಕ್' ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಆ್ಯಕ್ಷನ್-ಥ್ರಿಲ್ಲರ್ ಸಿನಿಮಾದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ಥೋವಿನೋ ಥಾಮಸ್, ಅಕ್ಷಯ್ ಓಬ್ರಾಯ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).