ಹಿರಿಯ ನಟ ಅರ್ಜುನ್ ಸರ್ಜಾ  
ಸ್ಯಾಂಡಲ್‌ವುಡ್

ಅಂದು ಸೋಹನ್​ ಬಾಬು ಅವರ ಮಾತು ಕೇಳಿದಿದ್ರೆ ಇಂದು ನನ್ನ... ಬೇಸರ ಹೊರಹಾಕಿದ 'ಆ್ಯಕ್ಷನ್ ಕಿಂಗ್' | Arjun Sarja

ಪ್ರಮುಖ ಮುಖ್ಯಾಂಶಗಳು

  • ಮಗಳ ಚಿತ್ರದ ಪ್ರಚಾರ ಕಾರ್ಯದಲ್ಲಿ 'ಆ್ಯಕ್ಷನ್​ ಕಿಂಗ್'​ ಅರ್ಜುನ್​ ಸರ್ಜಾ ಮಾತು
  • ಇದೇ ಫೆ.13ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ
  • ಅಂದು ಸೋಹನ್​ ಬಾಬು ಅವರ ಮಾತು ನೆನೆದು ಬೇಸರ ವ್ಯಕ್ತಪಡಿಸಿದ ನಟ
ಬೆಂಗಳೂರು: ಕನ್ನಡ ಚಿತ್ರರಂಗ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ, ಸಿನಿಪ್ರಿಯರಿಂದ ಸೈಎನಿಸಿಕೊಂಡಿರುವ ಹಿರಿಯ ನಟ, 'ಆ್ಯಕ್ಷನ್​ ಕಿಂಗ್'​ ಅರ್ಜುನ್​ ಸರ್ಜಾ, ತಾವೇ ನಿರ್ದೇಶಿಸಿರುವ ತಮ್ಮ ಪುತ್ರಿಯ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಕೆಲವು ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ.
ಪುತ್ರಿ ಐಶ್ವರ್ಯ ಅರ್ಜುನ್ ನಾಯಕಿಯಾಗಿ ನಟಿಸಿರುವ ಸೀತಾ ಪಯಣಂ ಚಿತ್ರ ಇದೇ ಫೆ.13ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈ ಸಿನಿಮಾ ಮೂಲಕ ಈಗ ನಿರ್ದೇಶಕರಾಗಿ ಕಣಕ್ಕಿಳಿದಿರುವ ಅರ್ಜುನ್ ಸರ್ಜಾ, ವೇದಿಕೆಯಲ್ಲಿ ತಮ್ಮ ಸಿನಿ ಕರಿಯರ್​ನ​ ಆರಂಭದ ದಿನಗಳಲ್ಲಿ ಮಾಡಿಕೊಂಡ ಎಡವಟ್ಟಿನ ಬಗ್ಗೆ ಮುಕ್ತವಾಗಿ ಮಾತನಾಡಿದರು.
ಆಗಿನ ಸ್ಟಾರ್​ ಹೀರೋ ಶೋಭನ್ ಬಾಬು ಅವರು ಹೂಡಿಕೆ ಬಗ್ಗೆ ತುಂಬ ಜನರಿಗೆ ಸಲಹೆ ಕೊಡುತ್ತಿದ್ದರು. ಹೆಚ್ಚಾಗಿ ಭೂಮಿ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ ಚೆನ್ನೈನಲ್ಲಿ ನೂರಾರು ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿರುವ ಅವರು, ಒಂದು ಕಾಲದಲ್ಲಿ ಅರ್ಜುನ್‌ ಅವರಿಗೂ ಇದೇ ರೀತಿಯ ಮಹತ್ವದ ಸಲಹೆಯನ್ನು ನೀಡಿದ್ದರಂತೆ. ಆದ್ರೆ, ಅರ್ಜುನ್​ ಅವರು ಶೋಭನ್​ ಮಾತನ್ನು ಕೇಳಲಿಲ್ಲವಂತೆ.
ನಾನು ಶೋಭನ್ ಬಾಬು ಜೊತೆ ಒಂದೇ ಒಂದು ಸಿನಿಮಾದಲ್ಲಿ ನಟಿಸಿದ್ದೇನೆ. ಆದರೂ ಅವರು ನನಗೆ ತುಂಬಾ ಆಪ್ತರು. ನಮ್ಮಿಬ್ಬರ ನಡುವೆ ಉತ್ತಮ ಸಂಬಂಧವಿದೆ. ಅವರು ನನ್ನ ಪಕ್ಕದಲ್ಲಿ ಕುಳಿತು ಹೂಡಿಕೆ ಮಾಡುವ ಬಗ್ಗೆ ಹಲವು ಬಾರಿ ಸಲಹೆ ಕೊಟ್ಟಿದ್ದರು. ಆ ಸಮಯದಲ್ಲಿ, ನಾನು ಅವರ ಮಾತುಗಳನ್ನು ಕೇಳಲಿಲ್ಲ. ಅವರು ಎಲ್ಲಿ ಮತ್ತು ಹೇಗೆ ಹೂಡಿಕೆ ಮಾಡಬೇಕೆಂದು ಸಾಕಷ್ಟು ಬಾರಿ ತಿಳಿ ಹೇಳಿದರು, ಆದರೆ, ಅದೇನೋ ತಿಳಿಯದ ವಯಸ್ಸಿನಲ್ಲಿ ನಾನು ಅವರ ಮಾತುಗಳಿಗೆ ಗಮನ ಕೊಡಲಿಲ್ಲ. ಅಂದು ಅವರ ಮಾತು ಕೇಳಿದಿದ್ರೆ ಇಂದು ನನ್ನ ಬಳಿಯೂ ಸಾಕಷ್ಟು ಆಸ್ತಿ ಇರುತ್ತಿತ್ತು ಎಂದು ಬೇಸರ ಹೊರಹಾಕಿದರು,(ಏಜೆನ್ಸೀಸ್).