ಬೆಂಗಳೂರು: ‘ರೈಡರ್’, ‘ಖಡಕ್’ ಖ್ಯಾತಿಯ ಅನುಷಾ ರೈ ‘ಬಿಗ್‌ಬಾಸ್ ಕನ್ನಡ ಸೀಸನ್-11’ ಬಳಿಕ ಮತ್ತಷ್ಟು ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಸದ್ಯ ಅವರು ಸ್ಯಾಂಡಲ್‌ವುಡ್‌ನಲ್ಲಿ ಬಿಜಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿಯ ‘ಮಹಾಕವಿ’ ರಿಲೀಸ್ ಆಗಿ, ಉತ್ತಮ ಪ್ರದರ್ಶನಗೊಳ್ಳುತ್ತಿದೆ. ಅದರ ಬೆನ್ನಲ್ಲೇ ಅನುಷಾ ಅಭಿನಯದ ಮೂರು ಚಿತ್ರಗಳು ತೆರೆಗೆ ಬರಲಿವೆ. ಈ ತ್ರಿಬಲ್ ಧಮಾಕಾದ ಖುಷಿಯಲ್ಲಿ ಅವರು ‘ವಿಜಯವಾಣಿ’ ಜತೆ ಮಾತಿಗೆ ಸಿಕ್ಕರು.‘‘ಮಹಾಕವಿ’ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 1000 ವರ್ಷಗಳ ಹಿಂದಿನ ಪಾತ್ರವನ್ನು ನಿರ್ವಹಿಸುವುದು ಸವಾಲಾಗಿತ್ತು. ಇದೀಗ ಪಾತ್ರಕ್ಕೆ ಬರುತ್ತಿರುವ ಪ್ರತಿಕ್ರಿಯೆಗಳಿಂದ ಸಂತೋಷವಾಗುತ್ತಿದೆ. ಸದ್ಯ ನಾನು ಅಭಿನಯಿಸಿರುವ ‘ರಾಮರಸ’, ‘ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್’ ಹಾಗೂ ಇನ್ನೊಂದು ಮನೋರಂಜನ್ ರವಿಚಂದ್ರನ್ ನಟನೆಯ ಹೆಸರಿಡದ ಸಿನಿಮಾ ಸೇರಿ ಒಟ್ಟು ಮೂರು ಚಿತ್ರಗಳು ಇದೇ ವರ್ಷ ರಿಲೀಸ್ ಆಗಲಿವೆ. ‘ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್’ ಚಿತ್ರದಲ್ಲಿ ಸಂಗೀತಾ ಮತ್ತು ಸಾಹಿತ್ಯ ಎಂಬ ಎರಡು ಪಾತ್ರದಲ್ಲಿದ್ದೇನೆ. ಇದೇ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಹಾಗೆಯೇ, ಮನೋರಂಜನ್ ಚಿತ್ರದಲ್ಲಿ ಇಂದಿನ ಜೆನ್ ಜಿ ಕಾಲದ ಹುಡುಗಿಯಾಗಿರಲಿದ್ದೇನೆ’ ಎಂದು ಮಾಹಿತಿ ಹಂಚಿಕೊಂಡರು. ಸದ್ಯ ಅನುಷಾ ರೈ, ವಿಜಯ್ ರಾಘವೇಂದ್ರ ನಟನೆಯ ‘ಅದಮ್ಯ ಚೇತನ’ ಹಾಗೂ ತೆಲುಗಿನ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಗಿರಿರಾಜ್ ಬಿ.ಎಂ. ನಿರ್ದೇಶಿಸುತ್ತಿರುವ ಮಿಸ್ಟಿಕಲ್ ಥ್ರಿಲ್ಲರ್ ಡ್ರಾಮಾ ‘ರಾಮರಸ’ ಚಿತ್ರದ ತಾರಾಗಣ ದಿನದಿಂದ ದಿನಕ್ಕೆ ಹಿಗ್ಗುತ್ತಿದೆ. ಬಾಲಿವುಡ್ ನಟಿ ಅದಾ ಶರ್ಮಾ, ಕನ್ನಡ ನಟ ಆದಿತ್ಯ ಸೇರ್ಪಡೆ ಬೆನ್ನಲ್ಲೇ ಇದೀಗ ಅನುಷಾ ರೈ ಪ್ರವೇಶಿಸಿದ್ದಾರೆ. ಇಲ್ಲಿ ಅವರು ಪ್ರಾರ್ಥನಾ ಎಂಬ ಪಾತ್ರದಲ್ಲಿದ್ದು, ಸ್ಟ್ ಲುಕ್ ರಿವೀಲ್ ಮಾಡಲಾಗಿದೆ. ‘ಪ್ರಾರ್ಥನಾ ಪಾತ್ರಕ್ಕೆ ಎರಡು ಶೇಡ್‌ಗಳಿವೆ. 800 ವರ್ಷಗಳ ಹಿನ್ನೆಲೆಯಲ್ಲಿ ಮಹಿಳೆಯಾಗಿ ಹಾಗೂ ಇನ್ನೊಂದು ಆಧುನಿಕ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಕಾರ್ತಿಕ್ ಮಹೇಶ್‌ಗೆ ಗರ್ಲ್‌ರ್ೆಂಡ್ ಆಗಿರಲಿದ್ದೇನೆ. ‘ರಾಮರಸ’ ಬಹುತಾರಾಗಣದ ತುಂಬಾ ್ಯಾಷನೇಟ್ ತಂಡ. ಈವರೆಗೂ ನಿರ್ವಹಿಸದ ಪಾತ್ರವನ್ನೇ ನನಗೆ ನೀಡಿದ್ದಾರೆ. 15 ದಿನಗಳ ಕಾಲ ಶೂಟಿಂಗ್ ಇತ್ತು’ ಎಂದು ಅನುಷಾ ಮಾಹಿತಿ ಹಂಚಿಕೊಳ್ಳುತ್ತಾರೆ.