ಅಮಲಾ ಪೌಲ್ 
ಸ್ಯಾಂಡಲ್‌ವುಡ್

Amala Paul - ಈಗ ಅಂತಹ ಪಾತ್ರದಲ್ಲಿ ನಟಿಸಲ್ಲ ಎಂದ ನಟಿ ಅಮಲಾ ಪೌಲ್

ಕನ್ನಡದ "ಹೆಬ್ಬುಲಿ' ಸೇರಿ 40ಕ್ಕೂ ಅಧಿಕ ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಅಮಲಾ ಪೌಲ್​ "ಲೆವೆಲ್​ ಕ್ರಾಸ್​' (2024) ಬಳಿಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಇತ್ತೀಚೆಗಷ್ಟೆ 2019ರಲ್ಲಿ ತೆರೆಕಂಡ ಸರ್ವೈವಲ್​ ಥ್ರಿಲ್ಲರ್​ "ಆದೈ' (2019) ಚಿತ್ರದಲ್ಲಿ ಬೋಲ್ಡ್​ ನಟನೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಕನ್ನಡದ "ಹೆಬ್ಬುಲಿ' ಸೇರಿ 40ಕ್ಕೂ ಅಧಿಕ ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಅಮಲಾ ಪೌಲ್​ "ಲೆವೆಲ್​ ಕ್ರಾಸ್​' (2024) ಬಳಿಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ಇತ್ತೀಚೆಗಷ್ಟೆ 2019ರಲ್ಲಿ ತೆರೆಕಂಡ ಸರ್ವೈವಲ್​ ಥ್ರಿಲ್ಲರ್​ "ಆದೈ' (2019) ಚಿತ್ರದಲ್ಲಿ ಬೋಲ್ಡ್​ ನಟನೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. "ನನಗೆ ಮೊದಲು ನಿರ್ದೇಶಕ (ರತ್ನಕುಮಾರ್​) ಮತ್ತು ಛಾಯಾಗ್ರಾಹಕ (ವಿಜಯ್​ ಕಾರ್ತಿಕ್​) ಇಬ್ಬರನ್ನು ಸಂಪೂರ್ಣವಾಗಿ ನಂಬಬೇಕಿತ್ತು. ಇವರು ಭಾವನಾತ್ಮಕವಾಗಿ ಸಾಗುವಂತೆ ಚಿತ್ರಿಸುತ್ತಾರಾ? ಅಥವಾ ಸುಖಾಸುಮ್ಮನೆ ಬೋಲ್ಡ್​ ಆಗಿ ತೋರಿಸುತ್ತಾರಾ ಅಂತ ತುಂಬ ಯೋಚಿಸಿದೆ. ಒಮ್ಮೆ ನನ್ನಲ್ಲಿ ಆ ನಂಬಿಕೆ ಬಂದಾಗ, ಇದೊಂದು ಸುಂದರ ಸೃಜನಾತ್ಮಕ ಪ್ರಕ್ರಿಯೆ ಅಂತ ಪರಿಗಣಿಸಿ, ಒಪ್ಪಿದೆ. ತುಂಬ ಕಡಿಮೆ ಜನರೊಂದಿಗೆ ಅಂತಹ ಸನ್ನಿವೇಶಗಳನ್ನು ಚಿತ್ರೀಕರಿಸಿದೆವು. ಶೂಟಿಂಗ್​ ಸಮಯದಲ್ಲೂ ನನಗೆ ನನ್ನ ಇಮೇಜ್​ ಬಗ್ಗೆ ಭಯವಿತ್ತು. ಇದೀ ರೀತಿಯ ಪಾತ್ರಗಳಿಗೆ ಸೀಮಿತವಾಗುವುದು ನನಗಿಷ್ಟವಿರಲಿಲ್ಲ. ಈಗ ಯಾರಾದರೂ ಬಂದು "ಆದೈ' ರೀತಿಯ ಪಾತ್ರಕ್ಕೆ ಆರ್​ ಮಾಡಿದರೆ, ನಾನು ಖಂಡಿತ ಒಪ್ಪಲ್ಲ' ಎಂದು ಹೇಳಿಕೊಂಡಿದ್ದಾರೆ.

ಆದೈ ಚಿತ್ರದ ಪೋಸ್ಟರ್