ಅಲ್ಫಾ ಚಿತ್ರತಂಡ 
ಸ್ಯಾಂಡಲ್‌ವುಡ್

ಅಲ್ಫಾ ಗೆ ಶ್ರೀಮುರಳಿ ಸಾಥ್​: ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಶುಭ ಕೋರಿದ ನಟ

ಶಿವಮಲ್ಲಯ್ಯ ಸ್ಥಾವರಮಠ

ಪ್ರಮುಖ ಮುಖ್ಯಾಂಶಗಳು

  • ಅಲ್ಫಾ ಮೂಲಕ ಹೇಮಂತ್​ ಕುಮಾರ್ ಸ್ಯಾಂಡಲ್ ವುಡ್ ಗೆ ಪರಿಚಯ
  • ಕಲ್ಟ್​ ಜತೆಗೆ ತಂದೆ-ಮಗನ ಬಾಂಧವ್ಯದ ಸಿನಿಮಾ
  • ಹೇಮಂತ್​ ಜತೆಗೆ ಸೆಣಸಾಡುತ್ತಿದ್ದಾರೆ ಬಿಗ್ ಬಾಸ್ ಕಾರ್ತಿಕ್ ಮಹೇಶ್
ಬೆಂಗಳೂರು: ಗೀತ, ಗುರುದೇವ ಹೊಯ್ಸಳ ಖ್ಯಾತಿಯ ನಿರ್ದೇಶಕ ವಿಜಯ್​ ಆ್ಯಕ್ಷನ್​-ಕಟ್ ಹೇಳಿರುವ ಚಿತ್ರ ಆಲ್ಫಾ. ಟೈಟಲ್ ಕಾರಣದಿಂದ ಈ ಚಿತ್ರ ಹೆಚ್ಚು ಸದ್ದು ಮಾಡುತ್ತಿದೆ. ಮಾಲೂರು ಮೂಲದ ಹೊಸ ಪ್ರತಿಭೆ ಹೇಮಂತ್​ ಕುಮಾರ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಅವರಿಗೆ ಇಬ್ಬರು ನಾಯಕಿಯಿದ್ದು, ಎಕ್ಸ್ ಆ್ಯಂಡ್ ವೈ ನಟಿ ಅಯನಾ, ಕೇರಳ ಮೂಲದ ಗೋಪಿಕಾ ಸುರೇಶ್​ ಜೋಡಿಯಾಗಿದ್ದಾರೆ. ಇದೇ ತಿಂಗಳ 20ಕ್ಕೆ ಸಿನಿಮಾ ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಟ ಶ್ರೀಮುರಳಿ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ, ಶುಭ ಕೋರಿದರು. "ಚಿತ್ರಕ್ಕಾಗಿ ಹೇಮಂತ್​, ಕಾರ್ತಿಕ್ ಮಹೇಶ್ ನಡೆಸಿದ ತಯಾರಿ ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ. ಡಯಟ್ ಮಾಡ್ಕೊಂಡು ಸ್ಕ್ರೀನ್ ಮೇಲೆ ಚೆನ್ನಾಗಿ ಕಾಣುವುದು ದೊಡ್ಡ ಟಾಸ್ಕ್​. ಇನ್ನು ಇಬ್ಬರು ನಾಯಕಿಯರು ಚೆನ್ನಾಗಿ ಕಾಣುತ್ತಿದ್ದಾರೆ. ಕಾರ್ತಿಕ್‌ ಮಹೇಶ್‌ ಕಣ್ಣಲ್ಲಿ ಸ್ಪಾರ್ಕ್‌ ಕಾಣಿಸ್ತಿದೆ, ನನ್ನ ಜಡ್ಜ್‌ಮೆಂಟ್‌ ಸುಳ್ಳಾಗಲ್ಲ ಎಂದು ಶುಭ ಕೋರಿದರು.
ಆಲ್ಫಾ ಆಕ್ಷನ್ ಜತೆಗೆ ಅಪ್ಪ ಮತ್ತು ಮಗನ ಭಾವನಾತ್ಮಕ ಸಂಬಂಧ ಚಿತ್ರದ ಹೈಲೈಟ್.
ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್, ಅಲ್ಫಾ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಹಾಡುಗಳಿಗಿಂತ ಸಿನಿಮಾ ಕುರಿತು ಮಾತನಾಡುವುದು ಪೂರಕವಾಗಿರುತ್ತದೆ. ನಿರ್ದೇಶಕರು ಕಥೆನಾ ಚೆನ್ನಾಗಿ ಹೆಣೆದಿದ್ದಾರೆ. ಸಿನಿಮಾ ರಿಚ್‌ ಆಗಿರುವುದಕ್ಕಿಂತ ಸ್ಟೈಲಿಷ್‌ ಆಗಿ ಇದೆ. ಕಾರ್ತಿಕ್‌ ಮಹೇಶ್‌ ಆಕ್ಟಿಂಗ್‌ ಚೆನ್ನಾಗಿ ಮಾಡಿದ್ದಾರೆ. ಕನ್ನಡವನ್ನು ಅದ್ಭುತವಾಗಿ ಮಾತನಾಡುತ್ತಾರೆ. ಇವರ ನಟನೆಗೆ ನಾನು ಅಭಿಮಾನಿ ಎಂದರು.