ಸ್ಯಾಂಡಲ್‌ವುಡ್

ರಾವಣನ ಮಕ್ಕಳು ಮೆಚ್ಚಿದ ‘ರಾಮಾಯಣ’: ಪೌರಾಣಿಕ ಸಿನಿಮಾ ವೀಕ್ಷಿಸಿದ ಯಶ್ ಮಕ್ಕಳಾದ ಐರಾ, ಯಥರ್ವ್ RAMAYANA

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಭಾಗ 1’ ಚಿತ್ರವು ಯಶ್ ಕುಟುಂಬಕ್ಕೆ ವಿಶೇಷವಾಗಲಿದೆ. ಮಕ್ಕಳಾದ ಐರಾ ಮತ್ತು ಯಥರ್ವ್, ತಂದೆ ಯಶ್ ಅಭಿನಯದ ಸಿನಿಮಾವನ್ನು ಮೊದಲ ಬಾರಿಗೆ ಥಿಯೇಟರ್‌ನಲ್ಲಿ ವೀಕ್ಷಿಸಿದ್ದಾರೆ.

ಬೆಂಗಳೂರು: ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಭಾಗ 1’ ಚಿತ್ರವು ಯಶ್ ಕುಟುಂಬಕ್ಕೆ ವಿಶೇಷವಾಗಲಿದೆ. ಮಕ್ಕಳಾದ ಐರಾ ಮತ್ತು ಯಥರ್ವ್, ತಂದೆ ಯಶ್ ಅಭಿನಯದ ಸಿನಿಮಾವನ್ನು ಮೊದಲ ಬಾರಿಗೆ ಥಿಯೇಟರ್‌ನಲ್ಲಿ ವೀಕ್ಷಿಸಿದ್ದಾರೆ. ಈ ಹಿಂದೆ ತೆರೆಕಂಡಿದ್ದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ವಯಸ್ಕರ ಚಿತ್ರವಾಗಿದ್ದರಿಂದ ಯಶ್ ಮಕ್ಕಳೊಂದಿಗೆ ಸಿನಿಮಾ ವೀಕ್ಷಿಸಲು ಆಗಿರಲಿಲ್ಲ. ಈಗ ಪೌರಾಣಿಕಾ ಸಿನಿಮಾ ‘ರಾಮಾಯಣ’ ಎಲ್ಲ ವಯೋಮಾನದವರು ವೀಕ್ಷಿಸಬಹುದಾಗಿದ್ದು, ಇತ್ತೀಚೆಗೆ ಲಾಸ್ ಏಂಜೆಲಾಸ್‌ನಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಶೋನಲ್ಲಿ ಮಕ್ಕಳು ‘ರಾಮಾಯಣ’ ವೀಕ್ಷಿಸಿ ಸಂಭ್ರಮಿಸಿದ್ದಾರೆ. ಇನ್ನು ಐರಾ, ಯಥರ್ವ್ ಥಿಯೇಟರ್‌ನಲ್ಲಿ ವೀಕ್ಷಿಸಿದ ಇದೇ ಮೊದಲ ಮೊದಲ ಸಿನಿಮಾವಾಗಿದೆ. ಮಕ್ಕಳು ಚಿತ್ರವನ್ನು ಹೇಗೆ ಅಸ್ವಾದಿಸಿದರು ಎಂಬ ವಿವರಗಳನ್ನು ಕುಟುಂಬ ಗೌಪ್ಯವಾಗಿರಿಸಿದೆ. ಶುಕ್ರವಾರ ಪುತ್ರ ಯಥರ್ವ್ ಜನ್ಮದಿನವನ್ನು ಯಶ್ ಮತ್ತು ರಾಧಿಕಾ ಆಚರಿಸಿದ್ದಾರೆ. ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ ಭಾಗ: 1’ ಚಿತ್ರದಲ್ಲಿ ನಟರಾದ ರಣಬೀರ್ ಕಪೂರ್, ಯಶ್, ಸನ್ನಿ ಡಿಯೋಲ್, ಸಾಯಿ ಪಲ್ಲವಿ, ರಕುಲ್ ಪ್ರೀತ್ ಸಿಂಗ್, ಲಾರಾ ದತ್ ಅಭಿನಯಿಸಿದ್ದಾರೆ. ಇದೇ 5ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. -ಏಜೆನ್ಸೀಸ್

ಮುಂಗಡ ಬುಕಿಂಗ್

ಇದೇ 5ರಂದು ತೆರೆಗೆ ಬರಲಿರುವ ‘ರಾಮಾಯಣ ಭಾಗ: 1’ ಚಿತ್ರದ ಮುಂಗಡ ಬುಕಿಂಗ್ ಆರಂಭವಾಗಿದೆ. ಈಗಾಗಲೇ ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಮುಂಗಡ ಟಿಕೆಟ್‌ಗಳು ಮಾರಾಟವಾಗಿವೆ. ಅದರಿಂದ ಚಿತ್ರಕ್ಕೆ 40 ಕೋಟಿ ರೂ.ಕಲೆಕ್ಷನ್ ಆಗಿದೆ ಎಂದು ತಿಳಿದುಬಂದಿದೆ. ಟಿಕೆಟ್ ಬೆಲೆ ಕೂಡ ಏರಿಕೆಯಾಗಿದ್ದು, ಮುಂಬೈನ ಖಾಸಗಿ ಮಲ್ಟಿಪ್ಲೆಕ್ಸ್ ಒಂದರಲ್ಲಿ 3,170 ರೂ. ಟಿಕೆಟ್ ಸೇಲ್ ಆಗಿದೆ. ಇನ್ನು ಬೆಂಗಳೂರಿನಲ್ಲಿ 250 ರೂ.ರಿಂದ 1800 ರೂ.ಗೆ ಬೆಲೆ ಇರುವುದು ತಿಳಿದುಬಂದಿದೆ.