ಶ್ರೀಲೀಲಾ 
ಸ್ಯಾಂಡಲ್‌ವುಡ್

‘ಧರ್ಮನ್’ಗೆ ಶ್ರೀಲೀಲಾ ‘ಓಂ’ಕಾರ : ರಜಿನಿ ಮತ್ತು ಧನುಷ್ ಇಬ್ಬರ ಜತೆಯಲ್ಲೂ ಒಂದೊಂದು ಚಿತ್ರದಲ್ಲಿ ಕನ್ನಡತಿ SREELEELA

ತೆಲುಗಿನ ‘ಭಗವಂತ್ ಕೇಸರಿ’ ಬಳಿಕ ಶ್ರೀಲೀಲಾಗೆ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ, ನಟಿಗೆ ಅದೃಷ್ಟ ಕೈಹಿಡಿದಿರಲಿಲ್ಲ. ಸತತ ಸೋಲಿನ ಮಧ್ಯೆಯೂ ಶ್ರೀಲೀಲಾ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಜತೆಗೆ ದಕ್ಷಿಣದಲ್ಲೂ ಸ್ಟಾರ್ ಸಿನಿಮಾಗಳ ಮೂಲಕ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಲು ಯತ್ನಿಸುತ್ತಿದ್ದಾರೆ. ಸದ್ಯ ಅವರು ತಮಿಳಿನ ‘ಧರ್ಮನ್’, ‘ಓಂ’, ‘ಡೇರ್‌ಡೇವಿಲ್’ ಸೇರಿ ಇನ್ನೂ ಹೆಸರಿಡದ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ತೆಲುಗಿನ ‘ಭಗವಂತ್ ಕೇಸರಿ’ ಬಳಿಕ ಶ್ರೀಲೀಲಾಗೆ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ, ನಟಿಗೆ ಅದೃಷ್ಟ ಕೈಹಿಡಿದಿರಲಿಲ್ಲ. ಸತತ ಸೋಲಿನ ಮಧ್ಯೆಯೂ ಶ್ರೀಲೀಲಾ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಜತೆಗೆ ದಕ್ಷಿಣದಲ್ಲೂ ಸ್ಟಾರ್ ಸಿನಿಮಾಗಳ ಮೂಲಕ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಲು ಯತ್ನಿಸುತ್ತಿದ್ದಾರೆ. ಸದ್ಯ ಅವರು ತಮಿಳಿನ ‘ಧರ್ಮನ್’, ‘ಓಂ’, ‘ಡೇರ್‌ಡೇವಿಲ್’ ಸೇರಿ ಇನ್ನೂ ಹೆಸರಿಡದ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕಾಕತಾಳೀಯ ಎಂಬಂತೆ, ನಟಿಯ ಮುಂದಿನ ಎರಡು ತಮಿಳು ಚಿತ್ರಗಳ ಅಪ್‌ಡೇಟ್ ಒಂದೇ ದಿನ ಸಿಕ್ಕಿದೆ. ರಜಿನಿಕಾಂತ್ ಅಭಿನಯದ ‘ಧರ್ಮನ್’ ಚಿತ್ರದಲ್ಲಿ ಶ್ರೀಲೀಲಾ ಅಭಿನಯಿಸುತ್ತಿರುವುದು ಈ ಮೊದಲೇ ಖಚಿತವಾಗಿತ್ತು. ಮೈಸೂರಿನಲ್ಲಿ ನಡೆದ ಶೂಟಿಂಗ್‌ನಲ್ಲಿ ಅವರೂ ಪಾಲ್ಗೊಂಡಿದ್ದರು. ಇದೀಗ ಚಿತ್ರತಂಡ ವಿಶೇಷ ಪೋಸ್ಟರ್ ಮೂಲಕ ಅಧಿಕೃತವಾಗಿ ನಟಿಯನ್ನು ಸ್ವಾಗತಿಸಿದೆ. ಆದರೆ, ಪಾತ್ರದ ಹೆಸರನ್ನು ಘೋಷಿಸಿಲ್ಲ. ಚಿತ್ರದಲ್ಲಿ ಕೇವಲ ಒಂದು ಸಾಂಗ್‌ಗೆ ಶ್ರೀಲೀಲಾ ಸೀಮಿತವಾಗಲಿದ್ದಾರೆ ಎನ್ನಲಾಗಿತ್ತು. ಇದೀಗ ಚಿತ್ರತಂಡ ಪಾತ್ರವನ್ನು ಪರಿಚಯಿಸಿರುವುದು ನೋಡಿದರೆ, ನಟಿಯು ಮುಖ್ಯ ಪಾತ್ರದಲ್ಲಿರಲಿದ್ದಾರೆ ಎನ್ನಲಾಗುತ್ತಿದೆ. ಅಶ್ವತ್ಥ್ ಮಾರಿಮುತ್ತು ನಿರ್ದೇಶನದ ‘ಧರ್ಮನ್’ ಚಿತ್ರದಲ್ಲಿ ರಜಿನಿಕಾಂತ್ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಜತೆ ಸಿಮ್ರನ್, ರಾಮ್ ಪೋತಿನೇನಿ, ರಾಶಿ ಖನ್ನಾ, ಶ್ರೀಲೀಲಾ ಹಾಗೂ ಇತ್ತೀಚೆಗೆ ನಯನತಾರಾ ಕೂಡ ಸೇರ್ಪಡೆಯಾಗಿದ್ದಾರೆ. ಪಾತ್ರ ವರ್ಗದಿಂದಲೇ ‘ಧರ್ಮನ್’ ನಿರೀಕ್ಷೆ ಮೂಡಿಸಿದ್ದು, 2027ರ ಮೊದಲರ್ಧದಲ್ಲಿ ತೆರೆ ಮೇಲೆ ನಿರೀಕ್ಷಿಸಬಹುದು. -ಏಜೆನ್ಸೀಸ್

ಧನುಷ್ ಪ್ರೀತಿಯ ‘ರೋಜಾ’

ನಟ ಧನುಷ್, ಮಮ್ಮೂಟ್ಟಿ ಅಭಿನಯದ ತಮಿಳಿನ ‘ಓಂ’ ಚಿತ್ರದ ನಟಿ ಸಾಯಿ ಪಲ್ಲವಿ ಪಾತ್ರ ಪರಿಚಯಿಸಿದ್ದ ಚಿತ್ರತಂಡ ಇದೀಗ ಶ್ರೀಲೀಲಾ ಕ್ಯಾರಕ್ಟರ್ ಪರಿಚಯಿಸಿದೆ. ಇಲ್ಲಿ ಅವರು ‘ರೋಜಾ’ ಎಂಬ ಪಾತ್ರದಲ್ಲಿದ್ದು, ಧನುಷ್ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟ್ ಲುಕ್‌ನಲ್ಲಿ ಗೃಹಿಣಿಯಾಗಿ ಮಿಂಚಿದ್ದು, ‘ಅವಳು ಹೊಳೆಯುವ ನಗುವಿನಿಂದ ಬೆಳಗಲು ಬರುತ್ತಿದ್ದಾಳೆ’ ಎಂದು ಕ್ಯಾಪ್ಶನ್ ನೀಡಲಾಗಿದೆ. ‘ಅಮರನ್’ ಖ್ಯಾತಿಯ ರಾಜಕುಮಾರ್ ಪೆರಿಯಾಸ್ವಾಮಿ ‘ಓಂ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು, ಇದೇ ನ.20ಕ್ಕೆ ಸಿನಿಮಾ ರಿಲೀಸ್ ಆಗಲಿದೆ.