ನಟಿ ಸಂಧ್ಯಾ ಅರಕೆರೆ  
ಸ್ಯಾಂಡಲ್‌ವುಡ್

ಬೇಬಿ ಬಂಪ್​ ಫೋಟೋ ಶೇರ್​ ಮಾಡಿ ತಾಯಿಯಾಗುತ್ತಿರುವ ಖುಷಿ ಹಂಚಿಕೊಂಡ ಫ್ರಮ್ ಸೋ ಭಾನು! Sandhya Arakere

ಪ್ರಮುಖ ಮುಖ್ಯಾಂಶಗಳು

  • ಸು ಫ್ರಮ್ ಸೋ’ ಚಿತ್ರದಲ್ಲಿ ಭಾನು ಪಾತ್ರದಲ್ಲಿ ಮಿಂಚಿದ್ದ ನಟಿ ಸಂಧ್ಯಾ ಅರಕೆರೆ ಬಾಳಲ್ಲಿ ಈಗ ಖುಷಿಯ ಕ್ಷಣ
  • ಸಂಧ್ಯಾ ಅರೆಕರೆ ಅವರು ಶೀಘ್ರವೇ ತಾಯಿ ಆಗಿ ಬಡ್ತಿ ಪಡೆಯುತ್ತಿದ್ದಾರೆ
  • ಬೇಬಿ ಬಂಪ್ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ
ಬೆಂಗಳೂರು: ಕಳೆದ ವರ್ಷದ ಬ್ಲಾಕ್​ಬಸ್ಟರ್​ ಸಿನಿಮಾಗಳಲ್ಲಿ ಒಂದಾದ ‘ಸು ಫ್ರಮ್ ಸೋ’ ಚಿತ್ರದಲ್ಲಿ ಭಾನು ಹೆಸರಿನ ಮುಖ್ಯ ಪಾತ್ರದಲ್ಲಿ ಮಿಂಚಿದ್ದ ನಟಿ ಸಂಧ್ಯಾ ಅರಕೆರೆ ( Sandhya Arakere ) ಬಾಳಲ್ಲಿ ಈಗ ಖುಷಿಯ ಕ್ಷಣ ಬಂದಿದೆ.
ಹೌದು, ಸಂಧ್ಯಾ ಅವರು ಶೀಘ್ರವೇ ತಾಯಿ ಆಗುತ್ತಿದ್ದಾರೆ. ತಮ್ಮ ಬೇಬಿ ಬಂಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಎಲ್ಲರ ಗಮನವನ್ನು ಸೆಳೆದಿದ್ದಾರೆ. ತಾಯಿ ಆಗುತ್ತಿರುವ ಸಿಹಿ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಅಂದಹಾಗೆ, ಸಂಧ್ಯಾ ಅವರು ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅರಕೆರೆ ಗ್ರಾಮದವರು. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದ ಸಂಧ್ಯಾ, ಅಭಿನಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಕೇವಲ ಪ್ರಧಾನ ಪಾತ್ರಗಳೇ ಬೇಕು ಅನ್ನದೇ ಸಣ್ಣಪುಟ್ಟ ಪಾತ್ರಗಳಿದ್ದರೂ ತಮ್ಮ ಪ್ರಬುದ್ಧ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸಂಧ್ಯಾ ಯಶಸ್ವಿಯಾಗಿದ್ದಾರೆ.
ರಾಜ್ ಬಿ ಶೆಟ್ಟಿ ಅವರ ನಿರ್ಮಾಣದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಮತ್ತು 'ಟೋಬಿ' ಅಂತಹ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಇವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇತ್ತೀಚೆಗೆ ಅಂದರೆ, 2025ರಲ್ಲಿ ತೆರೆಕಂಡ 'ಸು ಫ್ರಮ್ ಸೋ' (Su From So) ಚಿತ್ರದಲ್ಲಿ 'ಭಾನು' ಎಂಬ ಪಾತ್ರದ ಮೂಲಕ ಸಂಧ್ಯಾ ಅವರು ಮನೆಮಾತಾಗಿದ್ದಾರೆ.
ಈ ಚಿತ್ರದಲ್ಲಿ ಸಂಧ್ಯಾ ಅವರ ಭಾವನಾತ್ಮಕ ನಟನೆಗೆ ವಿಮರ್ಶಕರು ಮತ್ತು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕೇವಲ ನಟನೆಯಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯರಾಗಿರುವ ಸಂಧ್ಯಾ, ಇದೀಗ ತಮ್ಮ ಬೇಬಿ ಬಂಪ್​ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.