ಕನ್ನಡದ ‘ಸಪ್ತಸಾಗರದಾಚೆ ಎಲ್ಲೋ’ ಸರಣಿ, ‘ಕಾಂತಾರ’ ನಟಿ ರುಕ್ಮಿಣಿ ವಸಂತ್ ಸ್ಯಾಂಡಲ್ವುಡ್ ಜತೆಗೆ ಪರಭಾಷೆಯಲ್ಲೂ ಬಿಜಿಯಾಗಿದ್ದಾರೆ. ಸದ್ಯ ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸುತ್ತಿರುವ ಮಧ್ಯೆಯೇ ಅವರು ಮತ್ತೆ ಕಾಲಿವುಡ್ಗೆ ಕಾಲಿಟ್ಟಿದ್ದಾರೆ. ಶುಕ್ರವಾರ ನಟಿ ತಮಿಳಿನ ಹೊಸ ಚಿತ್ರ ಘೋಷಿಸಿದ್ದಾರೆ. ‘ಏಸ್’ ಮೂಲಕ ಕಾಲಿವುಡ್ಗೆ ಪರಿಚಯವಾಗಿದ್ದ ರುಕ್ಮಿಣಿ ವಸಂತ್ ಬಳಿಕ ‘ಮದರಾಸಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಮತ್ತೊಮ್ಮೆ ತಮಿಳು ಚಿತ್ರರಂಗದಲ್ಲಿ ಛಾಪು ಮೂಡಿಸಲು ಮುಂದಾಗುತ್ತಿದ್ದಾರೆ. ಹೊಸ ಚಿತ್ರಕ್ಕೆ ತಮಿಳಿನ ‘ಕನಂ’, ತೆಲುಗಿನ ‘ಒಕೆ ಒಕ ಜೀವಿತಂ’ ಖ್ಯಾತಿಯ ಎಸ್.ಎಸ್.ಶ್ರೀ ಕಾರ್ತಿಕ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಸಿನಿಮಾ ಅನೌನ್ಸ್ ಜತೆಗೆ ರುಕ್ಮಿಣಿ ಪಾತ್ರದ ಟೀಸರ್ ರಿಲೀಸ್ ಮಾಡಲಾಗಿದೆ. ಇಲ್ಲಿ ಅವರು ‘ತಾರಾ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಟ್ರಾವೆಲ್ ಸ್ಟೋರಿ ಎಂಬುದು ಟೀಸರ್ ನೋಡಿದರೆ ಗೊತ್ತಾಗುತ್ತದೆ. ಇನ್ನು ರುಕ್ಮಿಣಿ ಜತೆಗೆ ದೇವ್ ರಾಮ್ನಾಥ್ ಮತ್ತು ವಿನಾಯಕ್ ವೈದಿನಾಥನ್ ಅಭಿನಯಿಸುತ್ತಿದ್ದಾರೆ. ಸಿನಿಮಾ ಟೈಟಲ್ ಇನ್ನಷ್ಟೇ ಘೋಷಿಸಬೇಕಿದೆ. ಶೀಘ್ರದಲ್ಲಿ ಚಿತ್ರತಂಡ ಶೂಟಿಂಗ್ ಆರಂಭಿಸಲಿದ್ದು, 2027ಕ್ಕೆ ಸಿನಿಮಾ ತೆರೆಗೆ ಬರಲಿದೆ. -ಏಜೆನ್ಸೀಸ್
ರುಕ್ಮಿಣಿ ವಸಂತ್ ದಕ್ಷಿಣ ಚಿತ್ರರಂಗಗಳಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಸದ್ಯ ಅವರು ಕನ್ನಡದಲ್ಲಿ ‘ಮಂಗಳಗೌರಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಜತೆಗೆ ಮಾಲಾಶ್ರೀ ಕಲಾಬಳಗದಲ್ಲಿದ್ದಾರೆ. ಜೂ.ಎನ್ಟಿಆರ್ ನಟನೆಯ ತೆಲುಗಿನ ‘ಡ್ರಾೃಗನ್’ ಮತ್ತು ಮಲಯಾಳಂನಲ್ಲಿ ನಿವಿನ್ ಪೌಲಿ ಅಭಿನಯಿಸುತ್ತಿರುವ ಇನ್ನು ಹೆಸರಿಡದ ಸಿನಿಮಾದಲ್ಲಿ ರುಕ್ಮಿಣಿ ಮುಖ್ಯಪಾತ್ರದಲ್ಲಿದ್ದಾರೆ. ಈ ಬಿಜಿ ಮಧ್ಯೆ ನಟಿ ಇದೀಗ ತಮಿಳು ಚಿತ್ರಕ್ಕೆ ಸಹಿ ಮಾಡಿದ್ದಾರೆ.