ಬೆಂಗಳೂರು: ಸ್ಯಾಂಡಲ್ವುಡ್ ನಟ ಶಿವರಾಜಕುಮಾರ್ ಕನ್ನಡ ಸೇರಿ ಪರಭಾಷೆಯ ಸಾಲು ಸಾಲು ಸಿನಿಮಾಗಳ ಶೂಟಿಂಗ್ನಲ್ಲಿದ್ದಾರೆ. ಜತೆಗೆ ಅವರು ಕೆಲ ಚಿತ್ರಗಳಲ್ಲಿ ಅತಿಥಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಿರೂಪ್ ಭಂಡಾರಿ ಅಭಿನಯದ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದಲ್ಲಿ ಶಿವಣ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡ ಘೋಷಿಸಿದ್ದು, ಹಿರಿಯ ನಟನನ್ನು ಸ್ವಾಗತಿಸಿದೆ. ಶಿವಣ್ಣನನ್ನು ಸ್ವಾಗತಿಸಿದ ನಿರೂಪ್, ‘ಶೂಟಿಂಗ್ ಸಮಯದಲ್ಲಿ ನಾವು ನಿರ್ಮಿಸಿದ್ದ ಸೆಟ್ ಮತ್ತು ಚಿತ್ರಕಥೆ ಬರವಣಿಗೆ ಶಿವಣ್ಣಗೆ ಇಷ್ಟವಾಯಿತು. ಚಿತ್ರೀಕರಣದುದ್ದಕ್ಕೂ ಅವರು ನೀಡಿದ ಸಹಕಾರ ಮತ್ತು ಏನರ್ಜಿ ಇಡೀ ತಂಡಕ್ಕೆ ದೊಡ್ಡ ಸ್ಫೂರ್ತಿಯಾಗಿತ್ತು. ಅಷ್ಟೇ ವೇಗವಾಗಿ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿಕೊಟ್ಟರು’ ಎಂದರು. ಯುವ ಪ್ರತಿಭೆ ಸಚಿನ್ ನಿರ್ದೇಶನದ ಈ ಚಿತ್ರದಲ್ಲಿ ನಿರೂಪ್ಗೆ ಬೃಂದಾ ಆಚಾರ್ಯ, ಅಂಕಿತಾ ಅಮರ್ ಜೋಡಿಯಾಗಿದ್ದಾರೆ. ತೀರ್ಥಹಳ್ಳಿ, ಚನ್ನಗಿರಿ ಸೇರಿದಂತೆ ಬಹುತೇಕ ಮಲೆನಾಡಿನ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಚಿತ್ರದ ಮೊದಲಾರ್ಧ ಸಂಪೂರ್ಣ ಹಾಸ್ಯಮಯವಾಗಿದ್ದು, ದ್ವಿತೀಯಾರ್ಧದಲ್ಲಿ ಪ್ರಮುಖ ಸಾಮಾಜಿಕ ಕಾಳಜಿಯ ವಿಷಯದ ಜೊತೆಗೆ ಸಣ್ಣ ಕೋರ್ಟ್ ರೂಮ್ ಡ್ರಾಮಾ ಕೂಡ ಇರಲಿದೆ. ವಿಶೇಷವೆಂದರೆ ಈ ಚಿತ್ರಕ್ಕೆ ನಟ ನಿರೂಪ್ ಭಂಡಾರಿಯೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ
ನನ್ನ ಪಾತ್ರವನ್ನು ವಿಶೇಷವಾಗಿ ವಿನ್ಯಾಸ ಮಾಡಿರುವುದನ್ನು ಗಮನಿಸಿಯೇ ಪಾತ್ರಕ್ಕೆ ಒಪ್ಪಿಕೊಂಡೆ. ನನ್ನ ಜತೆ ನಿರೂಪ್, ಸಾಯಿಕುಮಾರ್ ನಟಿಸಿದ್ದಾರೆ. ತುಂಬಾ ಖುಷಿಪಟ್ಟು ಈ ಪಾತ್ರದಲ್ಲಿ ಅಭಿನಯಿಸಿದ್ದೇನೆ. ವಿಭಿನ್ನ ಸಿನಿಮಾವಾಗಿದ್ದು, ನನ್ನ ಲುಕ್ ಕೂಡ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.ಶಿವರಾಜಕುಮಾರ್, ನಟ