ನಟ ರಮೇಶ್ ಅರವಿಂದ್ 40 ವರ್ಷ ಮೀರಿದ ಲಾಂಗೆಸ್ಟ್ ಸಿನಿಜರ್ನಿಯಲ್ಲಿ ಮೊದಲ ಬಾರಿ ಲಾಂಗ್ ಹಿಡಿದಿರುವ ಸಿನಿಮಾ "ಕೆಡಿ - ದ ಡೆವಿಲ್'. ಅವರಿಲ್ಲಿ "ಧರ್ಮ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಬಲಗೈಲಿ ಹ್ಯಾಂಡಲ್ ಹಿಡಿದು ಬಜಾಜ್ ಚೇತಕ್ ಸ್ಕೂಟರ್ ಓಡಿಸುತ್ತಾ, ಎಡಗೈಲಿ ಲಾಂಗ್ ಹಿಡಿದಿರುವ ಲುಕ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇತ್ತೀಚೆಗಷ್ಟೆ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ಅವರು, "ಪ್ರೇಮ್ ಮೊದಲ ಬಾರಿ ಕಥೆ ಹೇಳಿದಾಗ, ನಾನು ಕಳೆದ 15, 20 ವರ್ಷಗಳಿಂದ ನಾಯಕನ ಪಾತ್ರವನ್ನಷ್ಟೇ ಮಾಡುತ್ತಾ ಬಂದಿದ್ದೇನೆ. ಬೇರೆ ಪಾತ್ರ ಮಾಡಿಲ್ಲ. ಬೇರೆ ರೀತಿಯ ಪಾತ್ರದಲ್ಲಿ ನಟಿಸಲೂ ನನಗಿಷ್ಟವಿಲ್ಲ. ನನ್ನ ಮನಸ್ಸು ಒಪ್ಪುವುದಿಲ್ಲ ಎಂದೆ. ಆದರೆ, ಪ್ರೇಮ್ ನೀವೇ ಈ ಪಾತ್ರ ಮಾಡಬೇಕು ಎಂದು ಹಠ ಹಿಡಿದರು. ನನ್ನ ಕೆಲ ಕಂಡೀಷನ್ಗಳಿದ್ದವು. ಅದಕ್ಕೆ ಒಪ್ಪಿದರು. ಹೀಗಾಗಿ ನಟಿಸಿದೆ. ನಾನಿಲ್ಲಿ ಧರ್ಮ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಇಂತಹ ಪಾತ್ರಗಳು ಶುರುವಾದರೆ ಚೆನ್ನಾಗಿರುತ್ತದೆ. ಪ್ರೇಕ್ಷಕರಿಗೆ ಮಾತ್ರವಲ್ಲ, ಕಲಾವಿದರಿಗೂ ಹೊಸ ಪಾತ್ರ ಬೇಕು. ನಾವು ಕಲಾವಿದರು ಎಂತಹ ಪಾತ್ರ ಮಾಡಲೂ ರೆಡಿ. ಹೊಸ ಪಾತ್ರ ಸಿಗುತ್ತಾ ಅಂತ ನಾನಂತೂ ಕಾಯುತ್ತಿರುತ್ತೇನೆ. ಅದಕ್ಕೆ ತಕ್ಕಂತೆ ಕಥೆಗಾರರು ಮತ್ತು ನಿರ್ದೇಶಕರು, ಬೇರೆ ಬೇರೆ ರೀತಿಯಲ್ಲಿ ಕಲ್ಪಿಸಿಕೊಂಡು ಪಾತ್ರಗಳನ್ನು ಬರೆದರೆ, ನಮ್ಮಂತಹ ಕಲಾವಿದರಿಗೆ ಬಹಳ ಇಷ್ಟ. ನಟರು, ನಿರ್ದೇಶನಕ್ಕೆ ಮುಂದಾದಾಗ ಯಾಕೆ ಡೈರೆಕ್ಷನ್ ಎಂದು ಕೇಳುತ್ತಾರಲ್ಲಾ? ಅದಕ್ಕೆ ಕಾರಣವೇ ಇದು. ನಾವು ಎದುರು ನೋಡುತ್ತಿರುವ ಪಾತ್ರ ಸಿಗದಿದ್ದಾಗ, ನಾವೇ ಆ ಪಾತ್ರ ಸೃಷ್ಟಿಸಲು ಮುಂದಾಗುತ್ತೇವೆ' ಎಂದು ಮಾಹಿತಿ ನೀಡುತ್ತಾರೆ.
ಪ್ರೇಮ್ ಒಳ್ಳೆ ಸೈಕಿಯಾಟಿಸ್ಟ್
"ನಿರ್ದೇಶಕ ಪ್ರೇಮ್ ಅವರ ಸಿನಿಮಾ ಪ್ಯಾಷನ್ ನನಗೆ ಇಷ್ಟ' ಎನ್ನುವ ರಮೇಶ್ ಅರವಿಂದ್, "ಒಂದು ಕಡೆ ಸಂಜಯ್ ದತ್, ಇನ್ನೊಂದು ಕಡೆ ರವಿಚಂದ್ರನ್ ಮತ್ತೊಂದು ಕಡೆ ರಮೇಶ್ ಅರವಿಂದ್, ಹೀಗೆ ಕಲಾವಿದರನ್ನು ಒಂದೆಡೆ ಸೇರಿಸಿ, ಯಾರಿಗೂ ಬೇಸರ, ವೈಮನಸ್ಸು ಆಗದಂತೆ ಮ್ಯಾನೇಜ್ ಮಾಡುವುದು ಕಷ್ಟ. ಆ ವಿಷಯದಲ್ಲಿ ಪ್ರೇಮ್ಗೆ ಜಾಣರು. ಅವರೊಬ್ಬ ಸೈಕಿಯಾಟಿಸ್ಟ್. ಎಲ್ಲರ ಸೈಕಾಲಜಿಯನ್ನೂ ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಾರೆ. ಕೇವಲ ತಂತ್ರಜ್ಞ, ನಿರ್ದೇಶಕ, ಕಥೆಗಾರನಾಗಿದ್ದರೆ ತುಂಬ ಕಷ್ಟ. ಏಳೆಂಟು ಜನ ದೊಡ್ಡ ದೊಡ್ಡ ಹೀರೋಗಳಿದ್ದರೆ ಇನ್ನೂ ಕಷ್ಟ. ತಕ್ಕಡಿಯಲ್ಲಿ ಹಾಕಿದ ಕಪ್ಪೆಗಳಂತೆ ಎಲ್ಲರೂ ಎಗರುತ್ತಿರುತ್ತಾರೆ. ನಾಲ್ಕೆ$ದು ವರ್ಷ ಇಡೀ ತಂಡವನ್ನು ಸಂಭಾಳಿಸಿದ್ದಾರೆ' ಎನ್ನುತ್ತಾರೆ.
ಇದುವರೆಗೆ 120ಕ್ಕೂ ಅಧಿಕ ಸಿನಿಮಾಗಳಲ್ಲಿ ರಮೇಶ್ ಅರವಿಂದ್ ನಟಿಸಿದ್ದು, ಎಲ್ಲ ಜಾನರ್ ಕಥೆಗಳಲ್ಲೂ ಮಿಂಚಿದ್ದಾರೆ. "ಮೊದಲು ಪ್ರೇಮಕಥೆಗಳು ನಂತರ ಪ್ರೀತಿಯನ್ನು ತ್ಯಾಗ ಮಾಡುವ ಪಾತ್ರಗಳಲ್ಲಿ ನಟಿಸುತ್ತಿದ್ದೆ. ಹಿಟ್ ಆಗುತ್ತಿದ್ದ ಕಾರಣ ಅಂಥದ್ದೇ ಪಾತ್ರ ಮತ್ತು ಕಥೆಗಳು ಹೆಚ್ಚು ಬರುತ್ತಿದ್ದವು. ಒಂದು ಸಮಯದಲ್ಲಿ ಬದಲಾವಣೆ ಬೇಕು ಅಂತ ಅನ್ನಿಸತೊಡಗಿತು. ಆಗ "ಉಲ್ಟಾ ಪಲ್ಟಾ' ಅಂತ ಕಾಮಿಡಿಯತ್ತ ಗಮನ ಹರಿಸಿದೆ. ಅದು ಸೂಪರ್ಹಿಟ್ ಆಯಿತು. ನಂತರ "ಕೋತಿಗಳು ಸರ್ ಕೋತಿಗಳು', "ಕುರಿಗಳು ಸರ್ ಕುರಿಗಳು'... ಹೀಗೆ ಹೆಚ್ಚು ಕಾಮಿಡಿ ಚಿತ್ರಗಳನ್ನು ಮಾಡಿದೆ. ನಂತರ "ತುತ್ತ ಮುತ್ತ'ದಂತೆ ಕೌಟುಂಬಿಕ ಕಥೆಗಳೂ ಬಂದವು. ನಮ್ಮ ವ್ಯಕ್ತಿತ್ವಕ್ಕೆ, ನಟನಾ ಶೈಲಿಗೆ ಪಾತ್ರ ಹೊಂದಿಕೊಂಡರೆ, ನಮಗಲ್ಲದೇ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ. ಆದರೆ, ಏನಾದರೂ ವಿಭಿನ್ನವಾಗಿ ಮಾಡಬೇಕು ಅಂತ ಹುಚ್ಚುಚ್ಚಾಗಿ ಮಾಡಲು ಹೋಗಬಾರದು. ಹೀಗಾಗಿಯೇ ನನ್ನ ಶೈಲಿಗೆ ಹೊಂದುವ ಪಾತ್ರದಲ್ಲೇ "ಕೆಡಿ'ಯಲ್ಲೂ ನಟಿಸಿದ್ದೇನೆ. ಈ ಸಿನಿಮಾ ನೋಡಿದಾಗ ಬೇರೆ ಬೇರೆ ಕಥೆಗಾರರು, ನಿರ್ದೇಶಕರಿಗೂ ರಮೇಶ್ ಹೀಗೂ ಮಾಡುತ್ತಾರಲ್ಲವೇ ಅಂತನ್ನಿಸಿ, ಭಿನ್ನ&ವಿಭಿನ್ನ ಕಥೆ, ಪಾತ್ರಗಳನ್ನು ಬರೆಯುವ ನಿರೀೆಯಿದೆ. ನೋಡೋಣ' ಎಂದು ನಿರೀೆ ವ್ಯಕ್ತಪಡಿಸುತ್ತಾರೆ.