ಚಿತ್ರ Instagram 
ಸ್ಯಾಂಡಲ್‌ವುಡ್

ವಿಜಯ್ ತಿರುಗಿ ನೋಡಿದಾಗ ರಶ್ಮಿಕಾ ಕಣ್ಣಲ್ಲಿ ನೀರಿತ್ತು... ಮದುವೆ ಮಂಟಪದ ಬಿಗ್​ ಸೀಕ್ರೆಟ್ ಬಿಚ್ಚಿಟ್ಟ ನಟಿ ಕಲ್ಯಾಣಿ ಪ್ರಿಯದರ್ಶನ್! Vijay-Rashmika Wedding

ಪ್ರಮುಖ ಮುಖ್ಯಾಂಶಗಳು

  • ಟಾಲಿವುಡ್​ನ ಸೂಪರ್​ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಗುರುವಾರ ವಿವಾಹವಾದರು
  • ಬೆಳಿಗ್ಗೆ ತೆಲಗು ಸಂಪ್ರದಾಯದಂತೆ ಮದುವೆಯಾದರೆ, ಸಂಜೆ ಕೊಡವ ಪದ್ದತಿಗಳನ್ನು ಅನುಸರಿಸಿದರು
  • ಅವರಿಬ್ಬರು ಜೀವನದಲ್ಲಿ ಒಂದಾಗುವುದನ್ನು ಹತ್ತಿರದಿಂದ ನೋಡುವುದು ನನ್ನ ಸೌಭಾಗ್ಯ ಎಂದ ನಟಿ ಕಲ್ಯಾಣಿ
Vijay-Rashmika Wedding: ಟಾಲಿವುಡ್​ನ ಸೂಪರ್​ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಗುರುವಾರ (ಫೆ.26) ರಂದು ಉದಯಪುರದಲ್ಲಿ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ಈ ಜೋಡಿ ಬೆಳಿಗ್ಗೆ ತೆಲಗು ಸಂಪ್ರದಾಯದಂತೆ ಮದುವೆಯಾದರೆ, ಸಂಜೆ ಕೊಡವ ಪದ್ದತಿಗಳನ್ನು ಅನುಸರಿಸಿದರು.
ವಿವಾಹ ಸಂಭ್ರಮಕ್ಕೆ ತುಂಬಾ ಆಪ್ತ ಬಳಗವನ್ನು ಮಾತ್ರ ಆಹ್ವಾನಿಸಲಾಗಿತ್ತು. ಈ ಸಮಾರಂಭದಲ್ಲಿ ನಟಿ ಕಲ್ಯಾಣಿ ಪ್ರಿಯದರ್ಶನ್​ ಕೂಡಾ ಒಬ್ಬರಾಗಿದ್ದರು. ರಶ್ಮಿಕಾ ಮತ್ತು ವಿಜಯ್​ ತಮ್ಮ ವಿವಾಹದ ಚಿತ್ರಗಳನ್ನು ಹಂಚಿಕೊಂಡ ನಂತರ, ಕಲ್ಯಾಣಿ ತಮ್ಮ ಇಮ್​ಸ್ಟಾಗ್ರಾಮ್​ನಲ್ಲಿ ಅವರಿಬ್ಬರು ಜೀವನದಲ್ಲಿ ಒಂದಾಗುವುದನ್ನು ಹತ್ತಿರದಿಂದ ನೋಡುವುದು ನನ್ನ ಸೌಭಾಗ್ಯ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ಕಲ್ಯಾಣಿ ಪ್ರಿಯದರ್ಶನ್ ಹೇಳಿದ್ದೇನು?

ಇಂದು ನಾನು ಅತ್ಯಂತ ದಯೆಯುಳ್ಳ ಹುಡುಗಿಯನ್ನು ನೋಡಿದ್ದೇನೆ. ತನ್ನ ಪ್ರಾಣ ಸ್ನೇಹಿತನನ್ನೇ ಮದುವೆಯಾಗಿರುವುದು ತುಂಬಾ ಸಂತೋಷದ ವಿಷಯ. ರಶ್ಮಿಕಾ ಮಂಟಪದ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ, ವಿಜಯ್ ಬೆನ್ನು ತಿರುಗಿಸಿ ಅವಳಿಗಾಗಿ ಕಾಯುತ್ತಿದ್ದರು. ಆ ಸಮಯದಲ್ಲಿ ರಶ್ಮಿಕಾ ಅನುಭವಿಸಿದ ಭಾವೋದ್ವೇಗ, ಆಕೆಯ ಪ್ರತಿ ಹೆಜ್ಜೆಯಲ್ಲಿದ್ದ ತೂಕ, ನಿಧಾನವಾದ ಉಸಿರಾಟ ಮತ್ತು ತುಂಬಿ ಬಂದ ಕಣ್ಣುಗಳು ಪದಗಳಿಗಿಂತ ಹೆಚ್ಚು ಅರ್ಥವನ್ನು ನೀಡುತ್ತಿದ್ದವು ಎಂದು ಕಲ್ಯಾಣಿ  ವರ್ಣಿಸಿದ್ದಾರೆ.
ಪ್ರಯತ್ನ, ಗೌರವ ಮತ್ತು ಆಳವಾದ ಸ್ನೇಹದಿಂದ ಪಡೆದುಕೊಂಡ ಪರಿಶುದ್ಧ ಪ್ರೀತಿಗೆ ಸಾಕ್ಷಿಯಾಗುವುದು ಒಂದು ಸೌಭಾಗ್ಯ. ಪ್ರೀತಿಯ ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಅವರಿಗೆ ಅಭಿನಂದನೆಗಳು. ನಿಮ್ಮಿಬ್ಬರ ಜೀವನ ಸುಂದರವಾಗಿ ಆರಂಭವಾಗಲಿ ಎಂದು ಬರೆದು ಪೋಸ್ಟ್ ಮಾಡಿದ್ದರು.
ರಶ್ಮಿಕಾ - ವಿಜಯ್​ ದಾಂಪತ್ಯಕ್ಕೆ ಹಾರೈಸಿದ ಕಲ್ಯಾಣಿ  ಪ್ರಿಯದರ್ಶನ್​
ಟಾಲಿವುಡ್​ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟ ನಂತರ, ನಟ ಆನಂದ್ ದೇವರಕೊಂಡ ಅಣ್ಣ ವಿಜಯ್ ದೇವರಕೊಂಡ ಮತ್ತು ಅತ್ತಿಗೆ ರಶ್ಮಿಕಾ ಮಂದಣ್ಣ ಅವರಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದರು.
ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಆನಂದ್ ನವವಿವಾಹಿತರನ್ನು ಅಪ್ಪಿಕೊಂಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಅಭಿಮಾನಿಗಳು ಅತ್ತಿಗೆ ಹೇಗಿದ್ದಾರೆ ಎಂದು ಕೂಗಿದಾಗ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯುತ್ತಿರಲಿಲ್ಲ. 
ಆದರೆ, ಇಂದು ನನ್ನ ಸಹೋದರ ಮದುವೆಯಾಗಿದ್ದಾನೆ. ನನ್ನ ಅತ್ತಿಗೆ ಅತ್ಯಂತ ಸಹಾನುಭೂತಿ ಮತ್ತು ಒಳ್ಳೆಯ ಗುಣಗಳನ್ನು ಹೊಂದಿದವರು. ಇವರಿಬ್ಬರೂ ಜೀವನಪೂರ್ತಿ ಹೀಗೆಯೇ ನಗುತ್ತಲೇ ಇರಬೇಕೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದು ಪೋಸ್ಟ್​ ಮಾಡಿದ್ದರು.

ವಿಜಯ್​-ರಶ್ಮಿಕಾ ಮದುವೆ

ಅಭಿಮಾನಿಗಳು ಪ್ರೀತಿಯಿಂದ ಕರೆದ ವಿರೋಶ್ ಎಂಬ ಹೆಸರಿನಲ್ಲೇ ಈ ಮದುವೆ ನಡೆದಿದೆ. ಉದಯಪುರದ ಐಟಿಸಿ ಮೆಮೆಂಟೋಸ್ ಹೋಟೆಲ್‌ನಲ್ಲಿ ನಡೆದ ಈ ಖಾಸಗಿ ಸಮಾರಂಭದಲ್ಲಿ ತೆಲುಗು ಮತ್ತು ಕೊಡವ ಸಂಪ್ರದಾಯಗಳೆರಡನ್ನೂ ಪಾಲಿಸಲಾಗಿದೆ. 

ಮಾರ್ಚ್ 4ಕ್ಕೆ ಹೈದರಾಬಾದ್‌ನಲ್ಲಿ ಅದ್ದೂರಿ ರಿಸೆಪ್ಷನ್

ಉದಯಪುರದಲ್ಲಿ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿರುವ ಈ ಜೋಡಿ, ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಬೃಹತ್ ಔತಣಕೂಟವನ್ನು ಆಯೋಜಿಸಿದೆ ಎಂದು ಆಪ್ತ ಮೂಲಗಳು ತಿಳಿಸಿವೆ (ಏಜೆನ್ಸೀಸ್​).