ನಮ್ ಗಣಿ ಬಿಕಾಂ ಪಾಸ್ 2 ಚಿತ್ರದ ಪೋಸ್ಟರ್ 
ಸ್ಯಾಂಡಲ್‌ವುಡ್

Abhishek Shetty - ನ. 27ಕ್ಕೆ ನಮ್​ ಗಣಿಯ ಬಿಕಾಂ ರಿಸಲ್ಟ್​!

"ನಮ್​ ಗಣಿ ಬಿಕಾಂ ಪಾಸ್​' (2019) ಮೂಲಕ ಚಿತ್ರರಂಗಕ್ಕೆ ನಾಯಕ, ನಿರ್ದೇಶಕನಾಗಿ ಪದಾರ್ಪಣೆ ಮಾಡಿದ ಅಭಿಷೇಕ್​ ಶೆಟ್ಟಿ, ಚೊಚ್ಚಲ ಪ್ರಯತ್ನದಲ್ಲೇ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಸಕ್ಸಸ್​ ಆಗಿದ್ದರು. ನಂತರ "ಗಜಾನನ ಆ್ಯಂಡ್​ ಗ್ಯಾಂಗ್​' ಮತ್ತು "ಆರಾಮ್​ ಅರವಿಂದಸ್ವಾಮಿ' ಚಿತ್ರಗಳನ್ನು ನಿರ್ದೇಶಿಸಿದ್ದ ಅವರು, ಇದೀಗ ಏಳು ವರ್ಷಗಳ ಬಳಿಕ ಗಣಿ ಕಥೆಯನ್ನು ಮುಂದುವರಿಸುವ ಮೂಲಕ ಮತ್ತೊಮ್ಮೆ ನಗಿಸಲು ರೆಡಿಯಾಗಿದ್ದಾರೆ. ಹೌದು, "ನಮ್​ ಗಣಿ ಬಿಕಾಂ ಪಾಸ್​ 2' ಇದೇ ನ. 27ಕ್ಕೆ ರಿಲೀಸ್​ ಆಗಲಿದೆ.

ಬೆಂಗಳೂರು: "ನಮ್​ ಗಣಿ ಬಿಕಾಂ ಪಾಸ್​' (2019) ಮೂಲಕ ಚಿತ್ರರಂಗಕ್ಕೆ ನಾಯಕ, ನಿರ್ದೇಶಕನಾಗಿ ಪದಾರ್ಪಣೆ ಮಾಡಿದ ಅಭಿಷೇಕ್​ ಶೆಟ್ಟಿ, ಚೊಚ್ಚಲ ಪ್ರಯತ್ನದಲ್ಲೇ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಸಕ್ಸಸ್​ ಆಗಿದ್ದರು. ನಂತರ "ಗಜಾನನ ಆ್ಯಂಡ್​ ಗ್ಯಾಂಗ್​' ಮತ್ತು "ಆರಾಮ್​ ಅರವಿಂದಸ್ವಾಮಿ' ಚಿತ್ರಗಳನ್ನು ನಿರ್ದೇಶಿಸಿದ್ದ ಅವರು, ಇದೀಗ ಏಳು ವರ್ಷಗಳ ಬಳಿಕ ಗಣಿ ಕಥೆಯನ್ನು ಮುಂದುವರಿಸುವ ಮೂಲಕ ಮತ್ತೊಮ್ಮೆ ನಗಿಸಲು ರೆಡಿಯಾಗಿದ್ದಾರೆ. ಹೌದು, "ನಮ್​ ಗಣಿ ಬಿಕಾಂ ಪಾಸ್​ 2' ಇದೇ ನ. 27ಕ್ಕೆ ರಿಲೀಸ್​ ಆಗಲಿದೆ. ಚಿತ್ರದ ಬಗ್ಗೆ ನಾಯಕ, ನಿರ್ದೇಶಕ ಅಭಿಷೇಕ್​ ಶೆಟ್ಟಿ, "ಮೊದಲ ಕಥೆಯಲ್ಲಿ ಏನೆಲ್ಲ ನಡೆದಿತ್ತು ಎಂಬುದನ್ನು ಸಂಪ್ತವಾಗಿ ಆ್ಯನಿಮೇಷನ್​ ಮೂಲಕ ಹೇಳಿ, ನಂತರ ಎರಡನೇ ಭಾಗದ ಕಥೆ ಮುಂದುವರಿಯಲಿದೆ. ಮನೆ ಅಳಿಯನಾಗಿ ಶ್ರೀಮಂತರ ಮನೆ ಸೇರಿಕೊಳ್ಳುವ ಗಣಿ ಅಲ್ಲಿ ಏನೆಲ್ಲ ಮಾಡುತ್ತಾನೆ ಎಂಬುದರ ಸುತ್ತ ಈ ಸೀಕ್ವೆಲ್​ ಸಾಗಲಿದೆ. ಯುವಜನರನ್ನು ಪ್ರೇರೇಪಿಸುವ ್ಯಾಮಿಲಿ ಎಂಟರ್​ಟೇನರ್​ ಚಿತ್ರವಿದು. ಮೊದಲ ಸಿನಿಮಾ 116 ನಿಮಿಷವಿತ್ತು. ಅದೇ ರೀತಿ 110 ನಿಮಿಷಗಳಲ್ಲಿ ಎಲ್ಲೂ ಬೋರ್​ ಆಗದಂತೆ ನಗುತ್ತಾ, ನಗಿಸುತ್ತಾ ಸಾಗುವ ಫಿಲ್​ ಗುಡ್​ ಕಥೆಯನ್ನು ಇಲ್ಲಿ ನಿರೂಪಿಸಿದ್ದೇವೆ. ಬೆಂಗಳೂರು, ಸಕಲೇಶಪುರ ಸುತ್ತಮುತ್ತ 35 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಈಗಾಗಲೇ ಪೋಸ್ಟ್​&ಪ್ರೊಡಕ್ಷನ್​ ಪೂರ್ಣಗೊಂಡಿದ್ದು, ಸದ್ಯ "ನಮ್​ ಗಣಿ ಬಿಕಾಂ ಪಾಸ್​ 2' ಸೆನ್ಸಾರ್​ ಹಂತದಲ್ಲಿದೆ' ಎಂದು ಮಾಹಿತಿ ನೀಡುತ್ತಾರೆ. ಚಿತ್ರದಲ್ಲಿ ಅಭಿಷೇಕ್​ಗೆ ಹೃತಿಕಾ ಶ್ರೀನಿವಾಸ್​ ಜೋಡಿಯಾಗಿದ್ದಾರೆ.

ನಮ್ ಗಣಿ ಬಿಕಾಂ ಪಾಸ್ ಚಿತ್ರದ ಪೋಸ್ಟರ್

ತೆಲುಗಿನಲ್ಲೂ ಬರಲಿದೆ ಸೀಕ್ವೆಲ್​

ಒಟಿಟಿಗಳಲ್ಲಿ ಇವತ್ತು ಜನ ಎಲ್ಲ ಭಾಷೆಗಳ ಸಿನಿಮಾಗಳನ್ನು ನೋಡುತ್ತಿದ್ದಾರೆ. ಅದೇ ರೀತಿ "ಕನ್ನಡದಲ್ಲಿ ಮಾತ್ರ ರಿಲೀಸ್​ ಆಗಿದ್ದ "ನಮ್​ ಗಣಿ ಬಿಕಾಂ ಪಾಸ್​' ಚಿತ್ರವನ್ನು ತೆಲುಗು ಪ್ರೇಕ್ಷಕರು ಇಷ್ಟಪಟ್ಟಿದ್ದರು. ಟಾಲಿವುಡ್​ನಲ್ಲಿ ಈ ಕ್ರೇಜ್​ ನೋಡಿ, ತಂಡವೊಂದು ರಿಮೇಕ್​ ರೈಟ್ಸ್​ ಕೂಡ ಖರೀದಿಸಿತ್ತು. ಹೀಗಾಗಿ ಈ ಸೀಕ್ವೆಲ್​ಅನ್ನು ತೆಲುಗಿನಲ್ಲೂ ರಿಲೀಸ್​ ಮಾಡಬೇಕು ಅಂತ ಅಂದುಕೊಂಡಿದ್ದು, ಡಬ್ಬಿಂಗ್​ ಕೆಲಸಗಳೂ ಮುಗಿದಿದೆ. ನ. 27ರಂದು ಮೊದಲು ಕನ್ನಡದಲ್ಲಿ ರಿಲೀಸ್​ ಮಾಡಿ ನಂತರ ತೆಲುಗಿನಲ್ಲಿ ಬಿಡುವ ಮಾಡುವ ಆಲೋಚನೆಯಿದೆ' ಎನ್ನುತ್ತಾರೆ ಅಭಿಷೇಕ್​.