ಲವ್​ ಮಾಕ್ಟೇಲ್​ 3 
ಸ್ಯಾಂಡಲ್‌ವುಡ್

ಗಟ್ಟಿ ಮಹಿಳಾ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದೆ ಲವ್​ ಮಾಕ್ಟೇಲ್​ 3

Love Mocktail 3
ಡಾರ್ಲಿಂಗ್​ ಕೃಷ್ಣ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಸಿನಿಮಾ "ಲವ್​ ಮಾಕ್ಟೇಲ್​ 3'. "ಲವ್​ ಮಾಕ್ಟೇಲ್​' 2020ರ ಜನವರಿಯಲ್ಲಿ ರಿಲೀಸ್​ ಆಗಿತ್ತು. ನಂತರ ಅದರ ಸೀಕ್ವೆಲ್​ "ಲವ್​ ಮಾಕ್ಟೇಲ್​ 2' 2022ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು. ಇದೀಗ ನಾಲ್ಕು ವರ್ಷಗಳ ನಂತರ ಟ್ರೀಕ್ವೆಲ್​ ಇದೇ ಗುರುವಾರ (ಮಾ.19) ತೆರೆಗೆ ಬರುತ್ತಿದೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಮಿಲನಾ ನಾಗರಾಜ್​, ಅಮೃತಾ ಅಯ್ಯಂಗಾರ್​ ಮತ್ತು ರೇಚೆಲ್​ ಡೇವಿಡ್​ ಜತೆಗೆ ಮೂರನೇ ಭಾಗದಲ್ಲಿ ಶ್ವೇತಾ ಪ್ರಸಾದ್​, ರಜನಿ ಭಾರದ್ವಾಜ್​ ಹಾಗೂ ನಯಾರಾ ಕೂಡ ಸೇರಿಕೊಂಡಿದ್ದಾರೆ. ಆ ಮೂಲಕ ರೊಮ್ಯಾಂಟಿಕ್​ ಡ್ರಾಮಾ ಗಟ್ಟಿ ಮಹಿಳಾ ಪಾತ್ರಗಳ ಮೂಲಕವೂ ಗಮನ ಸೆಳೆಯುತ್ತಿದೆ.

ಮೂರರಲ್ಲಿ ಇದು ಬೆಸ್ಟ್​!

ನಟ, ನಿರ್ದೇಶಕ ಡಾರ್ಲಿಂಗ್​ ಕೃಷ್ಣ ಪ್ರಕಾರ, "ಲವ್​ ಮಾಕ್ಟೇಲ್​' ಸರಣಿಯ ಮೂರು ಚಿತ್ರಗಳಲ್ಲಿ ಈ ಟ್ರೀಕ್ವೆಲ್​ ಬೆಸ್ಟ್​ ಅಂತೆ. "ಮೂರನೇ ಭಾಗ ಮಾಡುತ್ತಿರುವ ಕಾರಣ ತುಂಬ ಜನರಲ್ಲಿ ಹೇಗೆ ಮಾಡಿರುತ್ತಾರೋ ಎಂಬ ಆತಂಕವಿತ್ತು. ಆದರೆ, ನಾವು ಅಂದುಕೊಂಡಂತೆಯೇ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಮೂರು ಭಾಗಗಳಲ್ಲಿ ಈ ಟ್ರೀಕ್ವೆಲ್​ ಜನರಿಗೆ ಹೆಚ್ಚು ಇಷ್ಟವಾಗಲಿದೆ ಎಂಬ ಭರವಸೆಯಿದೆ. ಕಥೆ ಎತ್ತ ಸಾಗುತ್ತಿದೆ ಅಂತ ಜನರಿಗೆ ಗೊತ್ತಾಗದೇ, ಕುತೂಹಲ ಇರಬೇಕು. ಜನ ಥಿಯೇಟರ್​ನಲ್ಲಿ ಸಿನಿಮಾ ನೋಡಿ ಎಕ್ಸೈಟ್​ ಆಗಬೇಕು.. ಅಂತಹ ವಿಷಯಗಳು ಚಿತ್ರದಲ್ಲಿವೆ. ಹಳೆಯ ಪಾತ್ರಗಳ ಜತೆಗೆ ಹಲವು ಹೊಸ ಪಾತ್ರಗಳೂ ತಂಡ ಸೇರಿಕೊಂಡಿವೆ. ಅಮೃತಾ ಅಯ್ಯಂಗಾರ್​ ಅವರ ಜೋ ಪಾತ್ರ "ಲವ್​ ಮಾಕ್ಟೇಲ್​' ಸರಣಿಗೇ ತುಂಬ ಪ್ರಮುಖ ಕ್ಯಾರೆಕ್ಟರ್​. ಸಿಹಿ ಪಾತ್ರಕ್ಕಾಗಿ ಒಬ್ಬ ಮುಗ್ಧ ನಟಿ ಬೇಕಿತ್ತು. ತುಂಬ ಹುಡುಕಾಡಿ ರೇಚೆಲ್​ರನ್ನು ಆಯ್ಕೆ ಮಾಡಿಕೊಂಡೆವು. ನಯಾರಾ ಅವರದು ಹಲವು ಎಮೋಷನ್ಸ್​ ಇರುವ ಪಾತ್ರ. ಕಾನ್ಫಿಡೆಂಟ್​ ಹುಡುಗಿಯಾಗಿ ಶ್ವೇತಾ ಪ್ರಸಾದ್​ ನಟಿಸಿದ್ದಾರೆ. ರಜಿನಿ ಭಾರದ್ವಾಜ್​ ಸ್ವಲ್ಪ ಜೋ ಪಾತ್ರದಂತೆ ಕಾಣಿಸುತ್ತಿದ್ದರು. ಹೀಗಾಗಿ ಅವರನ್ನು ಅದೇ ರೀತಿಯ ಇನ್ನೊಂದು ಪಾತ್ರಕ್ಕೆ ಆಯ್ಕೆ ಮಾಡಿಕೊಂಡೆವು' ಎಂದು ಪಾತ್ರಗಳ ಬಗ್ಗೆ ಮಾಹಿತಿ ನೀಡುತ್ತಾರೆ.

ಜೀವನ ಕೊಟ್ಟ ಸಿನಿಮಾ

ನಟಿ ಅಮೃತಾ ಅಯ್ಯಂಗಾರ್​, ""ಲವ್​ ಮಾಕ್ಟೇಲ್​' ನನಗೆ ಲ್​ೈ ಕೊಟ್ಟ ಸಿನಿಮಾ. ಇದುವರೆಗೆ 17 ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ, ಈಗಲೂ ಜನ ನನ್ನನ್ನು ಜೋ ಎಂದು ನೆನಪಿನಲ್ಲಿಟ್ಟುಕೊಂಡಿದ್ದಾರೆ. ನಾನೇನೇ ಮಾಡಬೇಕೆಂದರೂ ಮೊದಲು ಕೃಷ್ಣ ಮತ್ತು ಮಿಲನಾಗೆ ಕಾಲ್​ ಮಾಡುತ್ತೇನೆ. ಅಷ್ಟರ ಮಟ್ಟಿಗೆ ನನ್ನ ಬದುಕಿನ ಭಾಗವಾಗಿದ್ದಾರೆ. ನನ್ನ ಕೊನೆವರೆಗೂ "ಲವ್​ ಮಾಕ್ಟೇಲ್​' ನನ್ನ ೇವರಿಟ್​ ಚಿತ್ರ ಆಗಿರಲಿದೆ' ಎಂದು ಹೇಳಿಕೊಳ್ಳುತ್ತಾರೆ.

ಸಿಹಿಯಾದ ರೇಚೆಲ್​

""ಲವ್​ ಮಾಕ್ಟೇಲ್​' ನನ್ನ ಐಡೆಂಟಿಟಿಯನ್ನೇ ಬದಲಿಸಿದ ಸಿನಿಮಾ' ಎನ್ನುವ ನಟಿ ರೇಚೆಲ್​ ಡೇವಿಡ್​, "ಎಲ್ಲಿಗೆ ಹೋದರೂ ಜನ ನನ್ನನ್ನು ಸಿಹಿ ಎಂದು ಕರೆಯುತ್ತಾರೆ. ಅಷ್ಟರ ಮಟ್ಟಿಗೆ ನನ್ನ ಪಾತ್ರ ಇಷ್ಟಪಟ್ಟಿದ್ದಾರೆ. ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿಯೂ ಈ ಚಿತ್ರದ ಬಳಿಕ ತುಂಬ ಬೆಳೆದಿದ್ದೇನೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ.

ಅತಿದೊಡ್ಡ ಉಡುಗೊರೆ

ನಟಿ ನಿಯಾರಾ ದೀಪಕ್​, ""ಚಾರ್ಲಿ' ಚಿತ್ರದ ಮೂಲಕ ನಾನು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದೆ. ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ ನಟಿಸಿದ್ದ ಚಿತ್ರವದು. ಬಳಿಕ ವೈಯಕ್ತಿಕ ಕಾರಣಗಳಿಂದ ನಾನು ಬ್ರೇಕ್​ ತೆಗೆದುಕೊಂಡಿದ್ದೆ. ಚಿತ್ರರಂಗಕ್ಕೆ ವಾಪಸ್​ ಬರಲು ಯೋಚಿಸುತ್ತಿರುವಾಗ "ಲವ್​ ಮಾಕ್ಟೇಲ್​ 3'ಯಲ್ಲಿ ಅವಕಾಶ ದೊರೆಯಿತು. ಕೃಷ್ಣ ಮತ್ತು ಮಿಲನಾ ನನ್ನ ಕರಿಯರ್​ನ ಅತಿದೊಡ್ಡ ಉಡುಗೊರೆ ನೀಡಿದ್ದಾರೆ' ಎಂದು ಖುಷಿ ಹಂಚಿಕೊಂಡರು.

ವಿಭಿನ್ನ ಶ್ವೇತಾ, ವಿಶೇಷ ರಜನಿ

ನಟಿ ಶ್ವೇತಾ ಪ್ರಸಾದ್​, "ನಾನು ಮೊದಲಿನಿಂದಲೂ ಕೃಷ್ಣ, ಮಿಲನಾ ಜೋಡಿಯ ಅಭಿಮಾನಿ. ಈ ಚಿತ್ರದಲ್ಲಿ ನಾನು ನಟಿಸದೇ ಇದ್ದರೂ, ಈ ಸರಣಿಯ ಬಗ್ಗೆ ಕುತೂಹಲವಿತ್ತು. ಮೊದಲು ಚಿತ್ರದಲ್ಲಿ ನಟಿಸಲು ಕರೆ ಬಂದಾಗ, ಇಷ್ಟೊಂದು ಜನ ನಟಿಯರಿದ್ದಾರೆ, ನನಗೆ ಯಾವ ರೀತಿಯ ಪಾತ್ರ ನೀಡಬಹುದು ಅಂತ ಕ್ಯೂರಿಯಸ್​ ಆಗಿದ್ದೆ. ಆದರೆ ಒಂದೊಳ್ಳೆ ಪಾತ್ರವಿದೆ' ಎಂದು ಹೇಳಿಕೊಂಡರು. ದರು. ಮತ್ತೊಬ್ಬ ನಟಿ ರಜನಿ ಭಾರದ್ವಾಜ್​, "ನನ್ನ ಪಾತ್ರವನ್ನು ತೆರೆಯ ಮೇಲೆ ನೋಡಿದರೆ ಚಂದ' ಎನ್ನುತ್ತಾರೆ.