ನವದೆಹಲಿ: ಕಳೆದ ಕೆಲ ದಿನಗಳಿಂದ ಮಾಜಿ ರಾಜ್ಯಸಭಾ ಸಂಸದೆ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕಿ, ಸೋನಿಯಾ ಗಾಂಧಿ ಅವರ ಜೀವನ ಚರಿತ್ರೆಯ ಪುಸ್ತಕ ಭಾರೀ ಸದ್ದನ್ನು ಮಾಡುತ್ತಿದೆ. ತಮ್ಮ ಆತ್ಮಕತೆಯಲ್ಲಿ ಸೋನಿಯಾ ಗಾಂಧಿ ಅವರು ತಮ್ಮ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಜತೆಗಿನ ಬಂಧವನ್ನು ಈ ಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ.
ಬಿಲಾಂಗ್‌ಗಿಂಗ್: ಅ ಜರ್ನಿ ಆಫ್ ಲವ್ (Belonging: A Journey of Love) ಎನ್ನುವುದು ಸೋನಿಯಾ ಅವರ ಆತ್ಮಕತೆಯಾಗಿದ್ದು, ಈಗ ಈ ಪುಸ್ತಕದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಕುರಿತು ಉಲ್ಲೇಖಿಸಿರುವ ಕೆಲ ಸಂಗತಿಗಳು ಈಗ ಚರ್ಚೆಗೆ ಗ್ರಾಸವಾಗಿದೆ.
ತಮ್ಮ ಆತ್ಮಕಥನದಲ್ಲಿ ಸೋನಿಯಾ ಗಾಂಧಿ, ಕಾಂಗ್ರೆಸ್ನ ಹಿರಿಯ ನಾಯಕರಾದ, ಪ್ರಣಬ್ ಮುಖರ್ಜಿ, ಮಧ್ಯಪ್ರದೇಶದ ಮಾಜಿ ಸಿಎಂ ಅರ್ಜುನ್ ಸಿಂಗ್, ಕೇರಳದ ಮಾಜಿ ಸಿಎಂ ಎ.ಕೆ. ಅಂಟೋನಿ ಮೊದಲಾದವರು ತಮ್ಮ ಜತಗೆ ರಾಜಕೀಯ ಚರ್ಚೆ ಹಾಗೂ ಕಾಂಗ್ರೆಸ್ನ ಕಾರ್ಯರೀತಿ ಹೇಗಿರಬೇಕೆಂದು ಸಹಲೆ ಹಾಗೂ ಚರ್ಚೆ ನಡೆಸುತ್ತಿದ್ದರೆಂದು ತಿಳಿಸಿದ್ದಾರೆ.
ಒಂದು ಹಂತದಲ್ಲಿ ಅಂದಿನ ವಿತ್ತ ಸಚಿವ ಪಿ. ಚಿದಂಬರಂ ಹಾಗೂ ಪ್ರಣಬ್ ಮುಖರ್ಜಿ ಅವರಲ್ಲಿ ಏನೋ ಮನಸ್ಥಾಪವಿತ್ತು. ನಂತರ, ಒಂದು ದಿನ 2010 ರಲ್ಲಿ ಪ್ರಣಬ್ ಮುಖರ್ಜಿ, "ನನ್ನ (ಸೋನಿಯಾ) ಜತೆ ಚರ್ಚೆ ಮಾಡುತ್ತಾ, ನಮ್ಮ ಸರ್ಕಾರದಲ್ಲಿ ಮುಂದಿನ ದಿನಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಬದಲಾವಣೆ ಅಗತ್ಯವಾಗಿದೆ. ಎಲ್ಲರನ್ನು ಹಿಡಿತಕ್ಕೆ, ವಿಶ್ವಾಸಕ್ಕೆ ತೆಗೆದುಕೊಳ್ಳುವವರಿಗೆ ಮಾನ್ಯತೆ ಮತ್ತು ಜವಾಬ್ದಾರಿ ನೀಡಬೇಕೆಂದು ಹೇಳಿದ್ದರು".
ಅವರು ನನ್ನ ಬಳಿ ನೇರವಾಗಿ ಹೇಳದಿದ್ದರೂ, ಇವರಿಗೆ ಪ್ರಧಾನಿ ಹುದ್ದೆ ಮೇಲೆ ಆಸಕ್ತಿ ಇದೆ ಎನ್ನುವುದನ್ನು ನಾನು ಗ್ರಹಿಸಿದೆ. ಕೂಡಲೇ ನಾನು ಆ ವಿಷಯವನ್ನು ಮರೆಸಿದೆ. ಅದು ಅವರ ಬೇಸರಕ್ಕೆ ಕೂಡ ಕಾರಣವಾಗಿರಬಹುದು. ಆದರೆ ಅವರು ನನ್ನ ವಿರುದ್ಧ ಯಾವುದೇ ಷಡ್ಯಂತ್ರ ಮಾಡಿಲ್ಲ ಎನ್ನವುದು ಮಾತ್ರ ಸತ್ಯ ಎಂದಿದ್ದಾರೆ.
ನಂತರ 2012 ರಲ್ಲಿ ಅಂದಿನ ಯುಪಿಎ ಸರ್ಕಾರ ಪ್ರಣಬ್ ಮುಖರ್ಜಿ ಅವರನ್ನು ರಾಷ್ಟ್ರಪತಿ ಸ್ಪರ್ಧಿಯನ್ನಾಗಿ ಘೋಷಿಸಿ, ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿತು. ಈ ಮೂಲಕ ಅವರು ದೇಶದ ಅತ್ಯುನ್ನತ ಪದವಿಯನ್ನು ಪ್ರಣಬ್ ಮುಖರ್ಜಿ ಪಡೆಯುವಂತಾಯಿತು. ಅವರು ರಾಷ್ಟ್ರಪತಿ ಸ್ಥಾನದಲ್ಲಿದ್ದಾಗಲೂ ನಾನು ಅವರನ್ನು ಆಗ್ಗಾಗೆ ಭೇಟಿಯಾಗುತ್ತಿದೆ. ಅವರಂತ ವಿದ್ವತ್ಪೂರ್ಣ ಹಾಗೂ ಜ್ಞಾನಿ ರಾಜಕಾರಣಿ ಜತೆ ಸಂಭಾಷಣೆ ನಡೆಸಲು ನಾನು ಹೀಗೆ ಮಾಡುತ್ತಿದ್ದೆ ಎಂದು ಸೋನಿಯಾ ಗಾಂಧಿ ಬರೆದುಕೊಂಡಿದ್ದಾರೆ.
ಇನ್ನು 2004 ರಿಂದ 2014 ರ ವರೆಗೆ ಪ್ರಧಾನ ಮಂತ್ರಿಯಾಗಿದ್ದ, ಮನಮೋಹನ್ ಸಿಂಗ್ ಅವರ ಅಧಿಕಾರದ ಸಮಯದಲ್ಲಿ, ಸೋನಿಯಾ ಗಾಂಧಿ ಅಧಿಕಾರ ದರ್ಬಳಿಕೆ ಮಾಡಿಕೊಂಡು, ಪ್ರಧಾನಿ ಮಂತ್ರಿಗಳ ಕಚೇರಿ ಕೆಲಸದಲ್ಲಿ ಕೂಡ ಮೂಗುತೂರಿಸುತ್ತಿದ್ದರು. ಪ್ರಮುಖ ಸ್ಥಾನಗಳ ನೇಮಕಾತಿ ತಾವೇ ಮಾಡುತ್ತಿದ್ದರು. ಸರ್ಕಾರಿ ಕಾಗದ ಪತ್ರಗಳನ್ನೂ ಅವರೇ ನಿರ್ವಹಣೆ ಮಾಡುತ್ತಿದ್ದರೆಂಬ ಆರೋಪಗಳು ಸೋನಿಯಾ ಗಾಂಧಿ ಮೇಲೆ ದಶಕಗಳಿಂದ ಕೇಳಿ ಬರುತ್ತಿವೆ.
ಆದರೆ, ಈ ಎಲ್ಲಾ ಆರೋಪಗಳನ್ನು ಸೋನಿಯಾ ಗಾಂಧಿ ಅವರ, ಆತ್ಮಕತೆಯಲ್ಲಿ ಅಲ್ಲಗೆಳಿದಿದ್ದಾರೆ. ನಾನು ಪ್ರಧಾನಿ ಮಂತ್ರಿಗಳ ಕೆಲಸಕ್ಕೆ ಅಡ್ಡ ಪಡಿಸುತ್ತಿರಲಿಲ್ಲ. ನಾನು ನನ್ನ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿದೆ. ಆದರೆ, ಅವರಿಗೆ ದೇಶದ ಹಿತ ದೃಷ್ಟಿಯಿಂದ ಕೆಲ ಸಲಹೆ, ಸೂಚನೆ ಹಾಗೂ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದೆ ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).