ನ್ಯೂಸ್

೨೫ ಸಾವಿರ ಕಾರ್ಮಿಕರಿಗೆ ಕೊಕ್ / ಸಂಸತ್ತಿನಲ್ಲಿ ಮಲ್ಲೇಶ್ ಬಾಬು ಪ್ರಸ್ತಾಪ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನರಸಾಪುರ ಬಳಿ ಇರುವ ಟಾಟಾ ಎಲೆಕ್ಟಾçನಿಕ್ಸ್ ಕಂಪನಿಯ ಐಫೋನ್ ಅಸೆಂಬ್ಲಿ ಘಟಕವು ಮೂರು ವರ್ಷಗಳ ಅವಧಿಗೆ ೨೫ ಸಾವಿರ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದರು, ಅವಧಿ ಮುಗಿದ ನಂತರ ಆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹೊಸಬರನ್ನು ನೇಮಿಸಿಕೊಂಡಿದ್ದಾರೆ.

ಇದರಿಂದ ೨೫ ಸಾವಿರ ಕಾರ್ಮಿಕರು ಬೀದಿಗೆ ಬರುವಂತೆ ಆಗಿದೆ. ಹಾಗೂ ಸ್ಥಳೀಯ ಕೈಗಾರಿಕೆಗಳ ಉದ್ಯೋಗದಿಂದಲೂ ವಂಚಿತರಾಗಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇತ್ಯರ್ಥ ಪಡಿಸಬೇಕಾಗಿದೆ ಎಂದು ಲೋಕಸಭೆ ಅಧಿವೇಶನದಲ್ಲಿ ಸಂಸದ ಎಂ.ಮಲ್ಲೇಶ್‌ಬಾಬು ಕೇಂದ್ರ ಕಾರ್ಮಿಕ ಸಚಿವರ ಗಮನ ಸೆಳೆದರು.

ಕಾರ್ಮಿಕ ಸಚಿವರು ಉತ್ತರಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಚಿತ್ರ ೦೫ ಕೆ.ಎಲ್.ಆರ್. ೦೫ : ಎಂ.ಮಲ್ಲೇಶ್‌ಬಾಬು ರವರ ಭಾವಚಿತ್ರ