ನ್ಯೂಸ್

೨೦೨೫ ರೈತರ ಪಾಲಿಗೆ ಕಹಿ ನೀಡಿರುವ ವರ್ಷ / ಎಲ್ಲಾ ತರಕಾರಿ ಮತ್ತು ವಾರ್ಷಿಕ ಬೆಳೆಗಳಿಗೆ ಸತತ ಬೆಲೆ ಕುಸಿತ / ಕಂಗಾಲಾಗಿರುವ ರೈತರು / ಸಾಲದ ಸುಳಿಯಿಂದ ಪಾರಾಗುವುದು ಹೇಗೆ ಎಂಬ ಆತಂಕ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ರೈತರ ಪಾಲಿಗೆ ೨೦೨೫ ಸಿಹಿಗಿಂತ ಕಹಿ ನೀಡುವ ದಿನಗಳೇ ಹೆಚ್ಚಾಗಿದ್ದು, ಕೋವಿಡ್-೧೯ ರ ಕಹಿ ದಿನಗಳು ಮರುಕಳುಸುವಂತೆ ಆಗಿದ್ದು, ರೈತರ ವಾರ್ಷಿಕ ಬೆಳೆಗಳಿಗೆ ಬೆಲೆ ಇಲ್ಲದೆ ನೆಲಕಚ್ಚಿದ್ದು, ರೈತರ ಬದುಕು ದುಸ್ತರವಾಗಿದೆ.

ಕೋಲಾರ ಜಿಲ್ಲೆಯಲ್ಲಿ ಯಾವುದೇ ನೀರಾವರಿ ಮೂಲಗಳು ಇಲ್ಲದಿದ್ದರು ಕೊಳವೆ ಬಾವಿಗಳಿಂದಲೇ ನೀರನ್ನು ಮೇಲಕ್ಕೆ ಎತ್ತಿ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ ಇದರ ಜೊತೆಗೆ ವಾರ್ಷಿಕ ಬೆಳೆಯಾದ ಮಾವು ಹೆಚ್ಚಾಗಿ ಬೆಳೆಯುತ್ತಾರೆ. ಮಾವಿನ ಬೆಲೆ ಪಾತಾಳಕ್ಕೆ ಕುಸಿದಿದೆ. ರೈತರು ಮಾವಿನ ವಾರ್ಷಿಕ ಬೆಳೆಯ ಮೇಲೆ ಅವಲಂಬಿತರಾಗಿತ್ತಾರೆ. ಮದುವೆ ಮುಂಜಿ ಮುಂತಾದ ಶುಭಕಾರ್ಯಗಳ ಜೊತೆಗೆ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೊಡಿಸಲು ಮಾವಿನ ಫಸಲನ್ನೇ ನಂಬಿದ್ದರು.

೨೦೨೫ ಪ್ರಾರಂಭವಾಗಿದ್ದೇ ಟೊಮೆಟೋ ಬೆಲೆ ೧೫ ಕೆ.ಜಿ.ಬಾಕ್ಸ್ ೪೦೦ ರೂ.ಗಳು ದಾಟಲಿಲ್ಲ. ಜಿಲ್ಲೆಯಲ್ಲಿ ಟೊಮೆಟೋ ಬೆಳೆಗಾರರೇ ಹೆಚ್ಚಾಗಿದ್ದಾರೆ. ಇದನ್ನೇ ನಂಬಿ ಬದುಕುವಂತಹ ಸಾವಿರಾರು ಕುಟುಂಬಗಳು ಇದ್ದಾರೆ. ವರ್ಷಕ್ಕೆ ೨ ರಿಂದ ೩ ಬೆಳೆ ಮಾಡುವ ರೈತರು ಇದ್ದಾರೆ. ಇದಲ್ಲದೆ ಜೂನ್ ಜುಲೈ ಆಗಸ್ಟ್ ತಿಂಗಳಿನಲ್ಲಿ ಟೊಮೆಟೋ ಸುಗ್ಗಿ ಎಂದು ವರ್ಷಪೂರ್ತಿ ಬೆಳೆ ಮಾಡದೆ ಸುಗ್ಗಿ ಕಾಲದಲ್ಲಿ ಟೊಮೆಟೋ ಬೆಳೆದು ರೈತರು ವರ್ಷ ಪೂರ್ತಿ ಬೆಳೆಗಳಿಗೆ ಹಾಕಿದ ಬಂಡವಾಳವನ್ನು ಸುಗ್ಗಿಯಲ್ಲಿ ಬಂದ ಲಾಭವನ್ನು ಸರಿದೂಗಿಸಿಕೊಳ್ಳಬಹುದೆಂದು ಕಾಯುತ್ತಿದ್ದ ರೈತರಿಗೆ ಈ ವರ್ಷ ಸುಗ್ಗಿ ಕೈಕೊಟ್ಟ ಕಾರಣ ಆಸೆ ನಿರಾಸೆಯಾಗಿದೆ.

ಕೋವಿಡ್ ೧೯ರಲ್ಲಿ ರೈತರ ಬೆಳೆಗಳಿಗೆ ಬೆಲೆ ಇಲ್ಲದ ಕಾರಣ ಹಾಗೂ ಲಾಕ್‌ಡೌನ್ ಸಮಯದಲ್ಲಿ ಅನುಭವಿಸಿದ ಕಷ್ಟಗಳನ್ನು ೨೦೨೫ರಲ್ಲಿ ಮರುಕಳಿಸಿದಂತೆ ರೈತರ ಪಾಲಿಗೆ ಆಗಿದೆ. ಮಾವು ಬೆಳೆ ಈ ರೀತಿ ಕುಸಿದಿರುವುದು ರೈತರು ಕಂಡೇ ಇಲ್ಲ ಎನ್ನುವಂತಾಗಿದೆ. ಕನಿಷ್ಟ ಪಕ್ಷ ಟನ್ ಮಾವು ೮ ಸಾವಿರ ಬಿಟ್ಟುಕೊಡುತ್ತಿರಲಿಲ್ಲ. ಆದರೆ ಈ ವರ್ಷ ೩ ಸಾವಿರಕ್ಕೂ ಮಾರಾಟವಾಗದೆ ಮಂಡಿಗಳಲ್ಲಿ ಮತ್ತು ತೋಟಗಳಲ್ಲಿ ಕೊಳೆಯುವಂತೆ ಆಗಿರುವುದು ರೈತರ ಕಣ್ಣೀರು ಕಟ್ಟೆ ಒಡೆಯುವಂತೆ ಆಗಿದೆ.

ಮಾವಿಗಿಂತ ಟೊಮೆಟೋ ಬೆಳೆಯನ್ನು ಹೆಚ್ಚಾಗಿ ಬೆಳೆದ ರೈತರಿಗೆ ಬೆಲೆ ಕುಸಿತದಿಂದ ನಿರಾಸೆಯಾದರೆ ಮತ್ತೊಂದು ಕಡೆ ವಾರ್ಷಿಕ ಬೆಳೆಯಾದ ಮಾವು ಬೆಲೆ ಪಾತಾಳಕ್ಕೆ ಕುಸಿತ ಹಾಗೂ ಪಪ್ಪಾಯಿ, ನೇರಳೆ ಎಲ್ಲಾ ಬೆಳೆಗಳಿಗೂ ಬೆಲೆ ಕುಸಿತದಿಂದ ರೈತರು ಬೆಳೆಗಳ ಮೇಲೆ ಹಾಕಿದ ಬಂಡವಾಳ ಕೈಸೇರದ ಕಾರಣ ಸಾಲದ ಸುಳಿಗೆ ಸಿಲುಕಿ ಒದ್ದಾಡುವಂತಹ ಪರಿಸ್ಥಿತಿ ಉಂಟಾಗಿದೆ.

ಕೋಟ್

ರೈತರು ಈ ರೀತಿಯ ಕಷ್ಟದ ದಿನಗಳು ಕಂಡೇ ಇಲ್ಲ. ರೈತ ಬೆಳೆದ ಎಲ್ಲಾ ಬೆಳೆಗಳಿಗೂ ದಿಢೀರನೆ ಬೆಲೆ ಕುಸಿತ ಉಂಟಾಗಿದೆ. ಮಾವನ್ನು ಕೇಳುವವರೇ ಇಲ್ಲದಂತೆ ಆಗಿದೆ. ಕಾಯಿ ಕಿತ್ತು ಮಾರುಕಟ್ಟೆಗೆ ತರುವ ಕೂಲಿಯೂ ಬರುತ್ತಿಲ್ಲ. ಸರ್ಕಾರ ನೀಡಿರುವ ಬೆಂಬಲ ಬೆಲೆ ಆನೆಯ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಆದಂತೆ ಆಗಿದೆ. ಹೆಸರಿಗೆ ಬೆಂಬಲ ಬೆಲೆ ಆದರೆ ರೈತರಿಗೆ ಯಾವ ತರದಲ್ಲಿಯೂ ಅದರ ಉಪಯೋಗ ಆಗುತ್ತಿಲ್ಲ. ಮಾವಿನ ತೋಟಗಳ ಕೆಳಗಡೆ ಉದುರಿ ಬಿದ್ದಿರುವ ಕಾಯಿಯಿಂದ ವೈರಾಣುಗಳು ಉತ್ಪತ್ತಿಯಾಗುವ ಸಾಧ್ಯತೆ ಇದೆ. ಕೋವಿಡ್ ೧೯ನೇ ವರ್ಷವನ್ನು ರೈತರು ನೋಡುವಂತಹ ದಿನಗಳು ಬಂದಿವೆ.

-ಪಿ.ಆರ್.ಸೂರ್ಯನಾರಾಯಣ, ರೈತ ಮುಖಂಡ

ಕೋಟ್

ಈ ವರ್ಷ ರೈತರು ಬೆಲೆದ ತರಕಾರಿ ಸೇರಿದಂತೆ ಟೊಮೆಟೋ, ಮಾವು, ನೇರಳೆ, ಪಪ್ಪಾಯಿ ಯಾವ ಬೆಳೆಗಳಿಗೂ ಬೆಲೆ ಇಲ್ಲದ ಕಾರಣ ರೈತರಿಗೆ ಕಣ್ಣೀರು ತರಿಸುವಂತೆ ಆಗಿದೆ. ರೈತರು ಬೆಳೆದ ಬೆಳೆಗಳಿಗೆ ಬೆಲೆ ನಿಗಧಿಪಡಿಸುವ ಕೆಲಸ ಸರ್ಕಾರಗಳು ಮಾಡಬೇಕಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ನಮಗೆ ಅವಶ್ಯಕತೆ ಇಲ್ಲ. ಹೀಗೆ ಮುಂದುವರೆದರೆ ರೈತರು ಸೋಮಾರಿಗಳಾಗಬೇಕಾಗುತ್ತದೆ. ಸರ್ಕಾರ ನೀಡುವ ಗ್ಯಾರಂಟಿ ಯೋಜನೆಗಳಿಗೆ ಅಡಿಯಾಗಬೇಕಾದ ಪರಿಸ್ಥಿತಿ ರೈತರದ್ದಾಗುತ್ತದೆ. ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕಾಗಿದೆ.

-ರವಿ, ರೈತ

ಚಿತ್ರ ೦೬ ಕೆ.ಎಲ್.ಆರ್. ೦೪ : ಮಾವು ಮಂಡಿಗಳಲ್ಲಿಯೇ ವ್ಯಾಪಾರವಾಗದೇ ಇರುವುದು

ಚಿತ್ರ ೦೬ ಕೆ.ಎಲ್.ಆರ್. ೦೪ಎ : ಮಾರುಕಟ್ಟೆಯಲ್ಲಿ ಟೊಮೆಟೋ ಅವಕ ಹೆಚ್ಚಾಗಿರುವುದು.

ಚಿತ್ರ ೦೬ ಕೆ.ಎಲ್.ಆರ್. ೦೪ಬಿ : ಪಿ.ಆರ್.ಸೂರ್ಯನಾರಾಯಣ, ರೈತ ಮುಖಂಡ ಭಾವಚಿತ್ರ

ಚಿತ್ರ ೦೬ ಕೆ.ಎಲ್.ಆರ್. ೦೪ಸಿ : ರೈತ ರವಿ ಭಾವಚಿತ್ರ