ನ್ಯೂಸ್

೧೧.೬೩ ಕೋಟಿ ರೂ. ದಂಡ ಪಾವತಿ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಬಾಕಿ ದಂಡ ಪಾವತಿಗೆ ನೀಡಲಾದ ಶೇ.೫೦ ರಷ್ಟು ರಿಯಾಯಿತಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಇದುವರೆಗೂ ೧೧.೬೩ ಕೋಟಿ ರೂ.ದಂಡ ಪಾವತಿಯಾಗಿದೆ.

ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಶೇ.೫೦ ರಿಯಾಯಿತಿ ದಂಡ ಪಾವತಿಸಲು ನಿಗದಿಪಡಿಸಲಾಗಿದ್ದು, ಆ.೨೩ರಿಂದ ಆ.೨೫ರವರೆಗೆ ಎಲ್ಲ ವಿಧಾನಗಳ ಮೂಲಕ ಒಟ್ಟು ೪,೧೩,೨೦೪ ಪ್ರಕರಣಗಳು ಇತ್ಯರ್ಥಗೊಂಡು, ೧೧,೬೩,೬೭,೭೫೦ ರೂ.ದಂಡ ಪಾವತಿಯಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಸಂಚಾರ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡ ಪಾವತಿಸಲು ಶೇ.೫೦ರಷ್ಟು ರಿಯಾಯಿತಿ ನೀಡಿ ಆದೇಶಿಸಿದೆ. ಈ ಆದೇಶವು ಆ.೨೩ರಿಂದ ಜಾರಿಗೆ ಬಂದಿದ್ದು, ಸೆ.೧೨ರವರೆಗೆ ರಿಯಾಯಿತಿ ಇರಲಿದೆ.