ನ್ಯೂಸ್

ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ ಕೆಲಸವಾಗಲಿ

ಬನ್ನೂರು: ದೇಶದೆಲ್ಲಡೆ ಸ್ವಾತಂತ್ರ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.


ಪಟ್ಟಣದಲ್ಲಿ ಆರ್‌ಜಿಎಸ್ ಗ್ರೂಪ್ ವತಿಯಿಂದ ಆಯೋಜಿಸಿದ್ದ 77ನೇ ಸ್ವಾತಂತ್ರೃ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರೃ ತಂದುಕೊಡಲು ತಮ್ಮ ಜೀವವನ್ನೇ ಪಣಕ್ಕಿಟ್ಟ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.


ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಡಾ.ಮಹೇಂದ್ರಸಿಂಗ್‌ಕಾಳಪ್ಪ, ವೈದ್ಯರಾದ ಡಾ.ಸಿದ್ದೇಶ್, ಜಿ.ಸಂತೋಷ್‌ಕುಮಾರಿ, ವನ್ಯ ರಾಜ್‌ಪುರೋಹಿತ್, ವಿರಾಟ್‌ಸಿಂಗ್, ನಾರಾಯಣಪ್ಪ, ಕಾವ್ಯಾ, ಪಾರಸ್ ಬೋರಾಣ, ಕವೀಶ್‌ಗೌಡ, ವಿದ್ಯಾಗಿರೀಶ್, ಸಿದ್ದರಾಜು, ರಮೇಶ್, ಉಷಾ, ಸುಮಯಬಾಯಿ, ಪ್ರಮೀಳಾ, ಭಕ್ತರಾಮು, ಅಮರರಾಮ್ ಹಲವರು ಉಪಸ್ಥಿತರಿದ್ದರು.