ನ್ಯೂಸ್

ಹೊಸಹೊಳಲು ಶಾಲೆಗೆ ಸಮಗ್ರ ಪ್ರಶಸ್ತಿ

ಎಚ್.ಡಿ.ಕೋಟೆ: ತಾಲೂಕಿನ ಅಂತರಸಂತೆ ಹೋಬಳಿಯ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಹೊಸಹೊಳಲು ಶಾಲೆಗೆ ಸಮಗ್ರ ಪ್ರಶಸ್ತಿ ಲಭಿಸಿದೆ.
ಗುರುವಾರ ನಡೆದ ಕ್ರೀಡಾಕೂಟದಲ್ಲಿ ಹೊಸ ಹೊಳಲು ಶಾಲೆಯ ಅರುಣ್ ಕುಮಾರ್ (100 ಮೀಟರ್ ಪ್ರಥಮ, 400 ಮೀಟರ್ ಪ್ರಥಮ, ಉದ್ದ ಜಿಗಿತ ಪ್ರಥಮ), ಸ್ವಪ್ನ (100 ಮೀಟರ್ ಪ್ರಥಮ, 400 ಮೀಟರ್ ಪ್ರಥಮ, ಎತ್ತರ ಜಿಗಿತ ಪ್ರಥಮ), ಮದನ್ (600 ಮೀಟರ್ ಪ್ರಥಮ), ದೀಪಿಕಾ (600 ಮೀಟರ್ ದ್ವಿತೀಯ), ಸ್ವಪ್ನಶ್ರೀ (ಉದ್ದ ಜಿಗಿತ ಪ್ರಥಮ), ಕಾಂಚನ (200 ಮೀಟರ್ ದ್ವಿತೀಯ). ರಿಲೇ 4100 ಮೀಟರ್ ಓಟದಲ್ಲಿ ಬಾಲಕ-ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ. ಬಾಲಕರ ಕಬಡ್ಡಿ ಪ್ರಥಮ, ಬಾಲಕಿಯರ ಖೊಖೊ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪಥಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದು ನಮ್ಮ ಶಾಲೆಯ ವಿದ್ಯಾರ್ಥಿಗಳು ಎಲ್ಲ ವಿಭಾಗದಲ್ಲೂ ಭಾಗವಹಿಸಿ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ಟಿ. ರವೀಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.