ನ್ಯೂಸ್

ಹೊಸಹುಡ್ಯ ಜಿಗಲಕುಂಟೆ ಅರಣ್ಯದಲ್ಲಿ ಒತ್ತುವರಿ ಮಾಡಿರುವ ಜಮೀನು ಕಂದಾಯ ಮತ್ತು ಅರಣ್ಯ ಅಧಿಕಾರಿಗಳು ಜಂಟಿ ಸರ್ವೇ ಮಾಡಿ ತೆರವುಗೊಳಿಸುವಂತೆ ರೈತ ಸಂಘ ಒತ್ತಾಯ

ವಿಜಯವಾಣಿ ಸುದ್ದಿಜಾಲ ಕೋಲಾರ

ಹೊಸಹುಡ್ಯ ಜಿಗಲಕುಂಟೆ ಅರಣ್ಯದಲ್ಲಿ ಒತ್ತುವರಿ ಮಾಡಿರುವ ಜಮೀನು ಕಂದಾಯ ಮತ್ತು ಅರಣ್ಯ ಅಧಿಕಾರಿಗಳು ಜಂಟಿ ಸರ್ವೇ ಮಾಡಿ ಒತ್ತುವರಿ ತೆರೆವುಗೊಳಿಸಬೇಕೆಂದು ರೈತ ಸಂಘದಿAದ ತಾಲ್ಲೂಕು ಕಚೇರಿಯ ಮುಂದೆ ಶನಿವಾರ ಅರೆಬೆತ್ತಲೆ ಹೋರಾಟ ಮಾಡಿ ತಹಶೀಲ್ದಾರ್‌ರವರ ಮೂಲಕ ಕಂದಾಯ ಸಚಿವರಿಗೆ ರವಾನಿಸುವಂತೆ ಮನವಿ ಪತ್ರ ನೀಡಿ ಒತ್ತಾಯಿಸಲಾಯಿತು.

ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಒಂದು ವಾರದೊಳಗೆ ಕಂದಾಯ ಅರಣ್ಯಾಧಿಕಾರಿಗಳು ಜಂಟಿ ಸರ್ವೇ ನಡೆಸಿ ಜಿಗಲಕುಂಟೆ ಅರಣ್ಯ ೬೧ ಎಕರೆ ಭೂ ಒತ್ತುವರಿ ಮಾಡಿರುವ ಪ್ರಭಾವಿಗಳ ಜಮೀನು ತೆರೆವುಗೊಳಿಸದೆ ಇದ್ದರೆ ರೈತರೇ ಕಾನೂನನ್ನು ಕೈಗೆತ್ತಿಕೊಂಡು ಕಳೆದುಕೊಂಡಿರುವ ಭೂಮಿಯನ್ನು ವಶಕ್ಕೆ ಪಡೆಯುವ ಕೆಲಸ ಮಾಡಲಾಗುವುದು. ಪ್ರೋ.ನಂಜುAಡಸ್ವಾಮಿರವರ ೮೦ ರ ದಶಕದ ಹೋರಾಟದ ರೈತ ಕ್ರಾಂತಿ ಶ್ರೀನಿವಾಸಪುರ ತಾಲ್ಲೂಕಿನಿಂದಲೇ ಪ್ರಾರಂಭವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಗಲಕುಂಟೆ ಅರಣ್ಯ ಸರ್ವೇ ನಂ.೧ ಮತ್ತು ೨ ರಲ್ಲಿನ ೬೧ ಎಕರೆ ಒತ್ತುವರಿ ತೆರೆವುಗೊಳಿಸಲು ಕಂದಾಯ ಅಧಿಕಾರಿಗಳೇ ಸರ್ವೇ ಮಾಡಲು ನಿಮ್ಮ ಮೇಲೆ ಯಾರ ಒತ್ತಡವಿದೆ? ಸಾರ್ವಜನಿಕವಾಗಿ ಬಹಿರಂಗಪಡಿಸಿ ಇಲ್ಲವಾದರೆ ಸರ್ಕಾರಿ ಸಂಬಳ ಬಿಟ್ಟು ಒತ್ತುವರಿ ಮಾಡಿರುವ ರಮೇಶ್ ಕುಮಾರ್‌ರವರ ಬೆಂಗಾವಲಾಗಿ ನಿಯತ್ತಾಗಿ ಕೆಲಸ ನಿರ್ವಹಿಸಬಹುದಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.

ಬಡವರ ಸರ್ಕಾರಿ ಒತ್ತುವರಿ ಜಮೀನು ತೆರೆವುಗೊಳಿಸುವ ಕಾರ್ಯಾಚರಣೆಗೆ ಸರ್ವೇ ತಾಂತ್ರಿಕ ಆಡಚಣೆ ಬರುವುದಿಲ್ಲ. ಆದರೆ ಬಲಾಡ್ಯರ ನೂರಾರು ಎಕರೆ ಒತ್ತುವರಿ ತೆರೆವುಗೊಳಿಸಲು ಮುಂದಾದಾಗ ಮಾತ್ರ ತಾಂತ್ರಿಕ ಆಡಚಣೆ ದಾಖಲೆಗಳ ಕೊರತೆ ನೂರೊಂದು ಸಮಸ್ಯೆ ಕಣ್ಣಮುಂದೆ ಬಂದು ನಿಲ್ಲುತ್ತವೆ ಅಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಾದ್ಯಂತ ಸಾವಿರಾರು ಗೋಮಾಳ ಜಮೀನನ್ನು ಅರಣ್ಯಾಧಿಕಾರಿಗಳು ಮೈಸೂರು ಮಹಾರಾಜರ ಕಾಲದ ದಾಖಲಾತಿಗಳನ್ನು ಮುಂದಿಟ್ಟುಕೊAಡು ಅರಣ್ಯ ಇಲಾಖೆಗೆ ಸೇರಿದೆ ಎಂದು ನೂರಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಚಿಕ್ಕಪುಟ್ಟ ರೈತರ ಕೃಷಿ ಜಮೀನನ್ನು ಯಾವುದೇ ಕಾನೂನಿನ ಅಡೆತಡೆ ಇಲ್ಲದೆ ವಶಕ್ಕೆ ಪಡೆಯುತ್ತಿರುವಾಗ ಕಂದಾಯ ಇಲಾಖೆಯಲ್ಲಿನ ದಾಖಲೆಗಳು ಎಲ್ಲಿ ಹೋದವು ಎಂದು ಪ್ರಶ್ನಿಸಿದರು.

ಜಂಟಿ ಸರ್ವೇ ಮಾಡಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿರುವ ರಮೇಶ್‌ಕುಮಾರ್‌ರವರಿಂದ ಭೂಮಿ ಉಳಿಸಿ ಇಲ್ಲವೇ ರಾಜಿನಾಮೆ ಕೊಟ್ಟು ಮನೆಗೆ ಹೋಗಿ ರೈತರೇ ಕಾನೂನು ಕೈಗೆತ್ತಿಕೊಂಡು ಸರ್ಕಾರಿ ಅರಣ್ಯ ಭೂಮಿಯನ್ನು ಉಳಿಸುವ ಹೋರಾಟಕ್ಕೆ ಚಾಲನೆ ನೀಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ತಾಲ್ಲೂಕು ಕಛೇರಿಯ ಕಂದಾಯ ಇಲಾಖೆಯ ಸಿಬ್ಬಂದಿ ವಿಶ್ವನಾಥ್, ತಾಂತ್ರಿಕ ಅಡಚಣೆಯಿಂದ ಸರ್ವೇ ಮಾಡಲು ವಿಳಂಭವಾಗಿದೆ ಶೀಘ್ರದಲ್ಲಿಯೇ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.

ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ತಾಲ್ಲೂಕು ಅಧ್ಯಕ್ಷ ರ‍್ನಹಳ್ಳಿ ಆಂಜಿನಪ್ಪ, ರಾಜೇಂದ್ರಗೌಡ, ಶೇಕ್‌ಶಪಿವುಲ್ಲಾ, ಆಲವಾಟಿ ಶಿವ, ಈಕಂಬಳ್ಳಿ ಮಂಜುನಾಥ್, ಶಿವಾರೆಡ್ಡಿ, ಆನಂದ್‌ರೆಡ್ಡಿ, ಗೀರೀಶ್, ಮಂಗಸAದ್ರ ತಿಮ್ಮಣ್ಣ ಮುಂತಾದವರಿದ್ದರು.

ಚಿತ್ರ ೩೦ ಕೆ.ಎಲ್.ಆರ್. ೦೩ : ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ರೈತ ಸಂಘದ ವತಿಯಿಂದ ಅರೆಬೆತ್ತಲೆ ಹೋರಾಟ ಮಾಡಿ ತಹಶೀಲ್ದಾರ್‌ರವರ ಮೂಲಕ ಕಂದಾಯ ಸಚಿವರಿಗೆ ರವಾನಿಸುವಂತೆ ತಹಶೀಲ್ದಾರ್ ಕಚೇರಿ ಸಿಬ್ಬಂದಿ ವಿಶ್ವನಾಥ್‌ರವರಿಗೆ ಮನವಿ ಪತ್ರ ನೀಡಿದರು.