ವಿಜಯವಾಣಿ ಸುದ್ದಿಜಾಲ ಕೋಲಾರ
೨೦೨೪ನೇ ಹೊಸ ವರ್ಷದ ಸಂಭ್ರಮಾಚರಣೆಗೆ ಪ್ರವಾಸಿಗರು ಕೋಲಾರ ಜಿಲ್ಲೆಯ ಹಲವು ಪ್ರೇಕ್ಷಣೀಯ ಸ್ಥಳಗಳು ಹಾಗೂ ಬೆಟ್ಟದ ಪ್ರದೇಶಗಳಿಗೆ ತೆರಳಿ ಹೊಸವರ್ಷದ ಸಂಭ್ರಮಾಚರಣೆ ಮಾಡುವುದು ರೂಡಿಯಲ್ಲಿರುತ್ತದೆ. ಆದರೆ ಈ ರೀತಿ ಸಂಭ್ರಮಾಚರಣೆ ಮಾಡುವ ಸಂದರ್ಭದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಬಹುದಾದ ಸಾಧ್ಯತೆಗಳು ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಅಕ್ರಂ ಪಾಷ ಡಿಸೆಂಬರ್ ೩೧ರ ಸಂಜೆ ೬-೦೦ ಗಂಟೆಯಿAದ ಮರುದಿನ ದಿನಾಂಕ ಜನವರಿ ೦೧ ರ ಬೆಳಿಗ್ಗೆ ೮-೦೦ ಗಂಟೆಯವರೆಗೆ ತೇರಹಳ್ಳಿ ಬೆಟ್ಟ, ಅಂತರಗAಗೆ ಹಾಗೂ ವಕ್ಕಲೇರಿ ಮಾರ್ಕಂಡೇಶ್ವರ ಬೆಟ್ಟ, ಆವಣಿ ಬೆಟ್ಟ, ಮುಳಬಾಗಿಲಿನ ಅಂಜನಾದ್ರಿ ಬೆಟ್ಟ, ಸೂರ್ಯ ಮಲ್ಲೇಶ್ವರಬೆಟ್ಟ ಹಾಗೂ ಸೀತಿ ಬೆಟ್ಟ ಮುಂತಾದ ಸ್ಥಳಗಳಲ್ಲಿ ಸ್ಥಳೀಯರನ್ನು ಹೊರತುಪಡಿಸಿ ಪ್ರವಾಸಿಗರನ್ನು ನಿರ್ಭಂಧಿಸಿ ಆದೇಶ ಹೊರಡಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.